More

    ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣ ಸ್ವಚ್ಛತೆ

    ಶಿರಸಿ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರ ಸಭೆಯ ವೇಳೆ ಸಾರ್ವಜನಿಕರು ಎಸೆದಿದ್ದ ತ್ಯಾಜ್ಯವನ್ನು ಜೀವಜಲ ಕಾರ್ಯಪಡೆ ಹಾಗೂ ಬಿಜೆಪಿ ಕಾರ್ಯಕರ್ತರು ಮಂಗಳವಾರ ಸ್ವಚ್ಛಗೊಳಿಸಿದ್ದಾರೆ.

    ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 80 ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದರು. ಜೀವ ಜಲ ಕಾರ್ಯಪಡೆ ನೀರಿನ ವ್ಯವಸ್ಥೆ ಮಾಡಿತ್ತು. ಕ್ರೀಡಾಂಗಣದ ಸುತ್ತ ಸಾರ್ವಜನಿಕರು ಎಸೆದ ನೀರಿನ ಬಾಟಲ್, ತ್ಯಾಜ್ಯಗಳು, ತಿಂಡಿಯ ಪೊಟ್ಟಣಗಳ ರಾಶಿ ಬಿದ್ದಿತ್ತು. ಸೋಮವಾರ ಬೆಳಗ್ಗೆ ಸ್ವಚ್ಛತಾ ಕಾರ್ಯ ನಡೆಸಲಾಗಿತ್ತು. ಆದರೆ, ತ್ಯಾಜ್ಯದ ಪ್ರಮಾಣ ಜಾಸ್ತಿ ಇದ್ದ ಕಾರಣ ಮಂಗಳವಾರವೂ ಸ್ವಚ್ಛಗೊಳಿಸಿ ಟ್ರಾೃಕ್ಟರ್ ಮೂಲಕ ತ್ಯಾಜ್ಯ ಸಾಗಿಸಲಾಯಿತು.

    ಹಳೆಯ ಕಸವೂ ಸ್ವಚ್ಛ !

    ಜಿಲ್ಲಾ ಕ್ರೀಡಾಂಗಣವು ಇತ್ತೀಚಿನ ವರ್ಷಗಳಲ್ಲಿ ಮೋಜು ಮಸ್ತಿಯ ತಾಣವಾಗುತ್ತಿದೆ. ಕ್ರೀಡಾಂಗಣದ ಸುತ್ತ ರಾತ್ರಿ ವೇಳೆ ಪಾರ್ಟಿ ಮಾಡುವವರು ಜಾಸ್ತಿ. ಹೀಗಾಗಿ ಈ ವಾತಾವರಣದಲ್ಲಿ ಖಾಲಿ ಬಾಟಲ್ ಮತ್ತಿತರ ತ್ಯಾಜ್ಯ ತುಂಬಿತ್ತು. ಈ ಎಲ್ಲ ಹಳೇ ತ್ಯಾಜ್ಯವನ್ನೂ ಸಾಗಿಸಲಾಗಿದ್ದು, ಜಿಲ್ಲಾ ಕ್ರೀಡಾಂಗಣದ ಸುತ್ತಲಿನ ಪ್ರದೇಶ ಶುಭ್ರವಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿದ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಗಿದೆ. ಇಲ್ಲಿ ಕಸ ಎಸೆಯುವವರ ಮೇಲೆ ಕಣ್ಣಿಡುತ್ತೇವೆ. ಈ ಪ್ರದೇಶವನ್ನು ತ್ಯಾಜ್ಯಗಳ ಬದಲು ಸುಂದರ ಪ್ರದೇಶವನ್ನಾಗಿಸಲಾಗುವುದು ಎಂದರು. ಬಿಜೆಪಿ ಕಾರ್ಯಕರ್ತರಾದ ಆರ್. ವಿ. ಹೆಗಡೆ ಚಿಪಗಿ, ಎಂ. ಎಂ. ಭಟ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts