More

    ‘ಕ್ಷೇತ್ರಕ್ಕೆ ಅಪ್ಪ ಮಕ್ಕಳು ಏನ್ಮಾಡಿದಾರೆ?’ ಶಾಸಕ ಹಾಗೂ ಸಂಸದರ ವಿರುದ್ದ ಬುಸುಗುಟ್ಟಿದ ಎಂಟಿಬಿ ನಾಗರಾಜ್

    ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ರಾಜಕೀಯ ಜಿದ್ದಾಜಿದ್ದಿ ಕ್ಷೇತ್ರವಾಗಿಯೇ ಗುರುತಿಸಿಕೊಂಡಿರುವ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರದ ಪ್ರಭಾವಿ ಸಚಿವ ಎಂಟಿಬಿ ನಾಗರಾಜ್ ಮತ್ತೊಮ್ಮೆ ಬುಸುಗುಟ್ಟಿದ್ದಾರೆ.

    ಅಪ್ಪ ಮಗ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಬಹಿರಂಗವಾಗಿ ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಶಾಸಕ ಶರತ್ ಬಚ್ಚೇಗೌಡ ಹಾಗೂ ಸಂಸದ ಬಿ.ಎನ್. ಬಚ್ವೇಗೌಡರ ಕಾಲೆಳೆದಿದ್ದಾರೆ. ಜಡಿಗೇಯ ಹೋಬಳಿ ವಾಗಟ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಳವಾರ ಗ್ರಾಮಸ್ಥರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಮರು ಚುನಾವಣೆಯಲ್ಲಿ ನಾನು ಸೋತರೂ ಕ್ಷೇತ್ರದ ಜನರ ಸೇವೆಯನ್ನು ಮುಂದುವರಿಸಿದ್ದೇನೆ ಮೂರು ಬಾರಿ ಶಾಸಕನಾಗಿ ನನ್ನನ್ನು ಆಯ್ಕೆ ಮಾಡಿದ ಕ್ಷೇತ್ರದ ಜನರ ಋಣ ನನ್ನ ಮೇಲಿದೆ. ಕೋವಿಡ್ ಸಂದರ್ಭದಲ್ಲಿ ಶಕ್ತಿ‌ಮೀರಿ ಜನ ಸೇವೆ ಮಾಡುತ್ತಿದ್ದೇನೆ ಎಂದು ಹೇಳಿದರು. ಈ ಪಂಚಾಯಿತಿಯಲ್ಲಿ ಅಪ್ಪ ಮಗ ಏನು ಅಭಿವೃದ್ಧಿ ಮಾಡಿದಾರೆ ಎಂಬುದು ಜನರಿಗೆ ಗೊತ್ತಿದೆ ರಾಜಕೀಯವಾಗಿ ನನ್ನ ವಿರೋಧ ಮಾಡಲು ಬಂದಿದ್ದಾರೆ ಹೊರತು ಜನಪರ ಕಾಳಜಿ ಅವರಿಗಿಲ್ಲ ಎಂದು ಹೆಸರು ಪ್ರಸ್ಥಾಪಿಸದೆ ಹರಿಹಾಯ್ದರು. ಮರು ಚುನಾವಣೆಯಲ್ಲಿ ಸೋತೆ ಎಂಬ ಒಂದೇ ಕಾರಣಕ್ಕೆ ಮನೆಯಲ್ಲಿ ಕೂರಲು ಆಗಲ್ಲ. ಈ ಹಿಂದೆ ಮೂರು ಬಾರಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಮಂತ್ರಿ ಮಾಡಿದ್ದಾರೆ ಜನರ ಋಣ ನನ್ನ ಮೇಲಿದೆ ಅದನ್ನು ತೀರಿಸಲು ಇದು ನನ್ನ ಅಳಿಲು ಸೇವೆಯಾಗಿದೆ ಎಂದರು.

    ಗೋದಾಮಿನಲ್ಲಿ ಕೊಳೆತು ನಾರುತ್ತಿತ್ತು ಮಹಿಳೆಯ ಮೃತ ದೇಹ! ಮನೆಕೆಲಸದವಳ ಕೊಲೆಗೆ ಕಾರಣವೇನು?

    17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts