More

    ಮಧ್ಯಪ್ರದೇಶ ಸಚಿವ ಸಂಪುಟ ವಿಸ್ತರಣೆ, 28 ಜನರ ಸೇರ್ಪಡೆ

    ನವದೆಹಲಿ: ಮಧ್ಯಪ್ರದೇಶದಲ್ಲಿ ಕಮಲ್​ನಾಥ್​ ನೇತೃತ್ವದ ಕಾಂಗ್ರೆಸ್​ ಸರ್ಕಾರವನ್ನು ಪದಚ್ಯುತಗೊಳಿಸಿ ಬಿಜೆಪಿ ಅಧಿಕಾರ ಹಿಡಿದ ಮೂರು ತಿಂಗಳ ನಂತರದಲ್ಲಿ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ತಮ್ಮ ಸಚಿವ ಸಂಪುಟವನ್ನು ಪೂರ್ಣಪ್ರಮಾಣಕ್ಕೆ ವಿಸ್ತರಿಸಿದ್ದಾರೆ.

    ಕಾಂಗ್ರೆಸ್​ನಿಂದ ಬಿಜೆಪಿಗೆ ವಲಸೆ ಬಂದ ಜ್ಯೋತಿರಾದಿತ್ಯ ಸಿಂಧಿಯಾ ಅವರ 11 ಜನ ಬೆಂಬಲಿಗರು ಸೇರಿ 28 ಜನರು ಸಚಿವರಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು. ಭೋಪಾಲ್​ನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲೆ ಆನಂದಿಬೆನ್ ಪಟೇಲ್​ ಅವರು ಗೋಪಾಲ್​ ಭಾರ್ಗವ, ವಿಜಯ್​ ಷಾ, ಜಗದೀಶ್​ ದೇವ್ಡಾ, ಬಿಶಹುಲಾಲ್​ ಸಿಂಗ್​, ಯಶೋಧರ ರಾಜೆ ಸಿಂಧಿಯಾ, ಭೂಪೇಂದರ್​ ಸಿಂಗ್​, ಐದಾಲ್​ ಸಿಂಗ್​ ಕನ್ಸಾನಾ, ಬ್ರಿಜೇಂದ್ರ ಪ್ರತಾಪ್​ ಸಿಂಗ್​ ಮತ್ತು ವಿಶ್ವಾಸ್​ ಸಾರಾಂಗ್​ ಅವರು ಸೇರಿ ಎಲ್ಲ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.

    ಇದನ್ನೂ ಓದಿ: ಭಾರತದ ಅತ್ಯಂತ ಐಷಾರಾಮಿ ತಾಣ ಗೋವಾ ಇಂದಿನಿಂದ ದೇಸೀ ಪ್ರವಾಸಿಗರಿಗೆ ಮುಕ್ತ

    ಜ್ಯೋತಿರಾದಿತ್ಯ ಸಿಂಧ್ಯಾ ಅವರ ಬೆಂಬಲಿಗರಾದ ಇಮಾರ್ತಿ ದೇವಿ, ಡಾ. ಪ್ರಭುರಾಮ್​ ಚೌಧಾರ್​, ಮಹೇಂದ್ರ ಸಿಂಗ್​ ಸಿಸೋಡಿಯಾ, ಪ್ರದ್ಯುಮ್ನ ಸಿಂಗ್​ ತೋಮರ್​, ರಾಜ್ಯವರ್ಧನ್​ ಸಿಂಗ್​, ಬ್ರಿಜೇಂದ್ರ ಸಿಂಗ್​ ಯಾದವ್​, ಗಿರ್​ರಾಜ್​ ಡಾನ್​ದೊತಿಯಾ, ಒಪಿಎಸ್​ ಬಹದ್ದೂರಿಯಾ ಮತ್ತು ಸುರೇಶ್​ ಜಾಖಡ್​ ಪ್ರಮಾಣವಚನ ಸ್ವೀಕರಿಸಿದವರಲ್ಲಿ ಪ್ರಮುಖರು.

    ಶಿವರಾಜ್​ ಸಿಂಗ್​ ಚೌಹಾಣ್​ ಅವರು ಮಾ.23ರಂದು ಮಧ್ಯಪ್ರದೇಶದ ಸಿಎಂ ಆಗಿ ಅಧಿಕಾರ ಸ್ವೀರಿಸಿದ್ದರು. ಮಾ.25ರಿಂದ ದೇಶಾದ್ಯಂತ ಕೋವಿಡ್​-19 ಲಾಕ್​ಡೌನ್​ ಜಾರಿಗೆ ಬಂದಿದ್ದರಿಂದ, ಏಪ್ರಿಲ್​ 21ರವರೆಗೆ ಏಕಾಂಗಿಯಾಗಿ ಕಾರ್ಯನಿರ್ವಹಿಸಿದ್ದರು. ಸಿಂಧ್ಯಾ ಅವರ ಇಬ್ಬರು ಬೆಂಬಲಿಗರು ಸೇರಿ ಏ.21ರಂದು ಐವರನ್ನು ಸಚಿವರನ್ನಾಗಿ ನೇಮಿಸಿ ಮೊದಲ ಹಂತದ ಸಚಿವ ಸಂಪುಟ ವಿಸ್ತರಣೆ ಮಾಡಿದ್ದರು.

    ಒಂದು ರೂ.ಗೂ ಕಡಿಮೆ ಬೆಲೆಯ ಮಾತ್ರೆ ಕರೊನಾ ಚಿಕಿತ್ಸೆಯಲ್ಲಿ ಅದ್ಭುತಗಳನ್ನೇ ಮಾಡುತ್ತಿದೆ….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts