More

    ಥಿಯೇಟರ್ ಮಾಲೀಕರಿಂದ ಕಲೆಕ್ಷನ್ ಮಾಡಲು ಈ ಆದೇಶ: ಎಚ್​ಡಿಕೆ ಗಂಭೀರ ಆರೋಪ

    ಬೆಂಗಳೂರು: ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರ ಪ್ರವೇಶಕ್ಕೆ ಕೇಂದ್ರ ಸರ್ಕಾರ ನೀಡಿದ್ದರೂ ರಾಜ್ಯ ಸರ್ಕಾರ ಮಾತ್ರ ಇದಕ್ಕೆ ನಿರ್ಬಂಧ ವಿಧಿಸುವ ಮೂಲಕ ಚಂದನವನದ ಕೆಂಗಣ್ಣಿಗೆ ಗುರಿಯಾಗಿದೆ. ಎಲ್ಲರಿಗೂ ಶೇ.100 ಅಕ್ಯುಪೆನ್ಸಿ ಕೊಟ್ಟಿರುವಾಗ, ನಮಗೆ ಮಾತ್ರ ಶೇ.50 ಏಕೆ? ಎಲ್ಲರಿಗೂ ನಾರ್ಮಲ್, ನಮಗ್ಯಾಕೆ ಅಬ್ ನಾರ್ಮಲ್ ಎಂದು ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಪ್ರಶ್ನಿಸಿದ್ದಾರೆ. ಇದಕ್ಕೂ ಮುನ್ನವೇ ಟ್ವೀಟ್​ ಮೂಲಕ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದ ನಟ ಧ್ರುವ ಸರ್ಜಾ, ‘ಬಸ್​ನಲ್ಲಿ ಫುಲ್ ರಶ್, ಮಾರ್ಕೆಟ್​ನಲ್ಲಿ ಗಿಜಿ ಗಿಜಿ, ಚಿತ್ರಮಂದಿರಕ್ಕೆ ಮಾತ್ರ ಏಕೆ ಶೇ.50 ನಿರ್ಬಂಧ?’ ಎಂದು ಕಟುವಾಗಿಯೇ ಪ್ರಶ್ನಿಸಿದ್ದರು. ಸರ್ಕಾರದ ಈ ನಿರ್ಧಾರ ಬದಲಾಗಲೇಬೇಕೆಂದು ಪಟ್ಟು ಹಿಡಿದಿರುವ ಕನ್ನಡ ಚಿತ್ರರಂಗದ ನಿಯೋಗ, ಇಂದು ಸಂಜೆ ಸಿಎಂ ಭೇಟಿಯಾಗಿ ಮನವಿ ಸಲ್ಲಿಸಲು ನಿರ್ಧರಿಸಿದೆ.

    ರಾಜ್ಯ ಸರ್ಕಾರದ ಈ ನಡೆಗೆ ಸಿನಿಪ್ರಿಯರೂ ಆಕ್ರೋಶ ಹೊರಹಾಕುತ್ತಿದ್ದಾರೆ. ರಾಜಕೀಯ ಪ್ರಚಾರದ ವೇಳೆ ಸಾವಿರಾರು ಜನ ಸೇರಬಹುದು, ಆದರೆ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಕಲು ಹೆಚ್ಚು ಜನ ಸೇರಬಾರದೆ? ಇದು ಯಾವ ನ್ಯಾಯ? ದೇವ್ರು ಕೊಟ್ರು ಪೂಜಾರಿ ಕೊಡಲಿಲ್ಲ ಅನ್ನೋ ತರ ಆಯ್ತು… ಎಂದೆಲ್ಲ ಟೀಕಿಸುತ್ತಿದ್ದಾರೆ. ಈ ನಡುವೆ ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ, ಥಿಯೇಟರ್ ಮಾಲೀಕರಿಂದ ಕಲೆಕ್ಷನ್ ಮಾಡಲು ಸರ್ಕಾರ ಈ ಆದೇಶ ಮಾಡಿರಬೇಕು ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿರಿ ಸರ್ಕಾರದ ವಿರುದ್ಧ ಸಿಡಿದೆದ್ದ ಧ್ರುವ ಸರ್ಜಾ! ನಟನ ಆ ಪ್ರಶ್ನೆಗೆ ಸಿಎಂ ಉತ್ತರಿಸುವರೇ?

    ಥಿಯೇಟರ್ ಮಾಲೀಕರೆಲ್ಲ ದುಡ್ಡು ತಂದು ಕೊಡಲಿ ಅಂತ ಶೇ.50ರಷ್ಟು ಪ್ರೇಕ್ಷಕರನ್ನು ತಡೆದಿರಬಹುದು. ಜನ ಸ್ವೇಚ್ಛಾಚಾರಿಗಳಂತೆ ಓಡಾಡತ್ತಿದ್ದಾರೆ. ಎಲ್ಲ ಕಡೆ ನಿರ್ಭಯವಾಗಿ ಸಂಚಾರ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಈ ಆದೇಶದ ಅವಶ್ಯಕತೆ ಏನಿತ್ತು? ಎಂದು ಎಚ್​ಡಿಕೆ ಕಟುವಾಗಿ ಟೀಕಿಸಿದ್ದಾರೆ. ಕೇಂದ್ರ ಸರ್ಕಾರವೇ ಶೇ.100 ಥಿಯೇಟರ್ ಭರ್ತಿಗೆ ಆದೇಶ ನೀಡಿದೆ. ಆದ್ರೆ ಇವರು ಮಾತ್ರ ಈ ಆದೇಶ ಯಾಕೆ ಮಾಡಿದ್ದಾರೆ ಅಂತ ಸರ್ಕಾರವೇ ಸ್ಪಷ್ಟನೆ ನೀಡಬೇಕು ಎಂದು ಲೇವಡಿ ಮಾಡಿದ್ದಾರೆ.

    ಥಿಯೇಟರ್ ಮಾಲೀಕರಿಂದ ಕಲೆಕ್ಷನ್ ಮಾಡಲು ಈ ಆದೇಶ: ಎಚ್​ಡಿಕೆ ಗಂಭೀರ ಆರೋಪಕರೊನಾ 2ನೇ ಅಲೆ ಸಾಧ್ಯತೆ ಹಿನ್ನೆಲೆಯಲ್ಲಿ ಪರಿಷ್ಕೃತ ಮಾರ್ಗಸೂಚಿಯು ಫೆ.28ರವರೆಗೆ ಜಾರಿಯಲ್ಲಿರಲಿದ್ದು, ಅಲ್ಲಿಯವರೆಗೂ ಚಿತ್ರ ಮಂದಿರಗಳಲ್ಲಿ ಶೇ.50 ಪ್ರೇಕ್ಷಕರಿಗಷ್ಟೇ ಅವಕಾಶ ನೀಡಬೇಕಿದೆ. ಯಾವುದೇ ಕಾರಣಕ್ಕೂ ಶೇ.100 ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ಇಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಈ ನಿರ್ಧಾರದ ವಿರುದ್ಧ ಸ್ಯಾಂಡಲ್​ವುಡ್​ ಸಿಡಿದೇಳುತ್ತಿದ್ದಂತೆ ಎಚ್ಚೆತ್ತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಇಂದು ಸಂಜೆ ಚಿತ್ರೋದ್ಯಮದ ಎಲ್ಲ ಪ್ರತಿನಿಧಿಗಳೊಂದಿಗೆ ವಿಧಾನಸೌಧದಲ್ಲಿ ಸಭೆ ಕರೆದಿದ್ದಾರೆ. ಇದಕ್ಕೂ ಮುನ್ನವೇ ಫಿಲ್ಮ್ ಚೇಂಬರ್ ನಿಯೋಗವು ಶಾಸಕ ಕುಮಾರ್ ಬಂಗಾರಪ್ಪ ಅವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದೆ.

    ಟಾಯ್ಲೆಟ್​ನಲ್ಲಿ ಚಿರತೆ-ನಾಯಿ ಲಾಕ್: ನಾಯಿ ಎದುರಿಗಿದ್ರೂ ಚಿರತೆ ಫುಲ್ ಸೈಲೆಂಟ್‌! ಮುಂದೇನಾಯ್ತು?

    ಸಾಕು ನಾಯಿಗೆ ಸೀಮಂತ! ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಈ ದೃಶ್ಯ

    ಸರ್ಕಾರದ ವಿರುದ್ಧ ಸಿಡಿದೆದ್ದ ಧ್ರುವ ಸರ್ಜಾ! ನಟನ ಆ ಪ್ರಶ್ನೆಗೆ ಸಿಎಂ ಉತ್ತರಿಸುವರೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts