More

  ಹಾವೇರಿಯಲ್ಲಿ ಮರುಕಳಿಸಿದ ನೈತಿಕ ಪೊಲೀಸ್​ಗಿರಿ; 7 ಆರೋಪಿಗಳು ಅರೆಸ್ಟ್​

  ಹಾವೇರಿ: ಇಡೀ ರಾಜ್ಯವನ್ನೇ ಬೆಚ್ಚಿವೀಳಿಸಿದ್ದ ಹಾನಗಲ್​ ಸಾಮೂಹಿಕ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಹಾವೇರಿ ಜಿಲ್ಲೆಯಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಏಳು ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  ಘಟನೆಯೂ ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಶಿವ ದೇವಸ್ಥಾನದ ಬಳಿ ನಡೆದಿದ್ದು, ಹಿಂದೂ ಯುವಕನ ಜೊತೆ ಮಾತನಾಡುತ್ತಾ ನಿಂತಿದ್ದಕ್ಕೆ ಮುಸ್ಲಿಂ ಯುವತಿಯನ್ನು ಅದೇ ಸಮುದಾಯದ ಯುವಕರ ಗುಂಪೊಂದು ಹಲ್ಲೆ ನಡೆಸಿದೆ. ಸಂತ್ರಸ್ತೆ ನೀಡಿದ ದೂರನ್ನು ಆಧರಿಸಿ ಪೊಲೀಸರು ಆರೋಪಿಗಳ ವಿರುದ್ಧ ಕ್ರಮಕೈಗೊಂಡಿದ್ದಾರೆ.

  ಇದನ್ನೂ ಓದಿ: ಡ್ರೋನ್​​ ಪ್ರತಾಪ್​ ಕುರಿತು ಈಶಾನಿ ಹೇಳಿಕೆ; ಸುದೀಪ್​ ಕೊಟ್ಟ ರಿಯಾಕ್ಷನ್​ ಹೀಗಿದೆ

  ಬಂಧಿತರನ್ನು ಅಬ್ದುಲ್ ಖಾದರ್, ಮನ್ಸೂರ್, ಮೆಹಬೂಬ್ ಖಾನ್, ರಿಯಾಜ್, ಅಲ್ಪಾಜ್, ಅಬ್ದುಲ್, ಖಾದರ್, ಸಲೀಂಸಾಬ್, ಮೆಹಬೂಬ್ ಅಲಿ ಎಂದು ಗುರುತಿಸಲಾಗಿದ್ದು, ತಲೆಮಾರಿಸಿಕೊಂಡಿರುವ ಇಬ್ಬರಿಗಾಗಿ ಶೋಧ ನಡೆಸುತ್ತಿದ್ದಾರೆ.

  ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್, ಅನ್ಯಕೋಮಿನ ಯುವಕ, ಯುವತಿ ಮೇಲೆ ಹಲ್ಲೆ ನಡೆದಿದೆ. 9 ಮುಸ್ಲಿಂ ಯುವಕರ ಗ್ಯಾಂಗ್‌ನಿಂದ ನೈತಿಕಪೊಲೀಸ್‌ಗಿರಿ ನಡೆದಿದೆ. 7 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ ಎಂದು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts