More

    ಡ್ರೋನ್​​ ಪ್ರತಾಪ್​ ಕುರಿತು ಈಶಾನಿ ಹೇಳಿಕೆ; ಸುದೀಪ್​ ಕೊಟ್ಟ ರಿಯಾಕ್ಷನ್​ ಹೀಗಿದೆ

    ಬೆಂಗಳೂರು: ಕನ್ನಡ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದ್ದು, ಒಂದಿಲ್ಲೊಂದು ವಿಚಾರಕ್ಕೆ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜನವರಿ 27 ಹಾಗೂ 28ರಂದು ಫಿನಾಲೆ ನಡೆಯಲಿದ್ದು, ಜನವರಿ 20 ಹಾಗೂ 21ರಂದು ನಿರೂಪಕ ಕಿಚ್ಚ ಸುದೀಪ್​ ತಮ್ಮ ಕೊನೆಯ ಪಂಚಾಯಿತಿಯನ್ನು ನಡೆಸಲಿದ್ದಾರೆ.

    ಟಾಸ್ಕ್​ ವೇಳೆ ಸ್ಪರ್ಧಿಗಳು ಜಗಳವಾಡುತ್ತ ನಿಂದಿಸುತ್ತಾ, ಮನಸ್ತಾಪ, ದೂರುಗಳಿಂದಲೇ ಕಾಲ ಕಳೆಯುವ ಇವರು ಭಾನುವಾರ ನಟ ಕಿಚ್ಚ ಸುದೀಪ್‌ ನಡೆಸಿ ಕೊಡುವ ಸೂಪರ್​ ಸಂಡೇ ವಿತ್​ ಸುದೀಪದಲ್ಲಿ ನಗುವಿನ ಅಲೆಯಲ್ಲಿ ತೇಲುತ್ತಾರೆ. ಅದೇ ರೀತಿ ದೊಡ್ಮನೆಯಲ್ಲಿರುವ ಸ್ಫರ್ಧಿಗಳು ತಪ್ಪು ಮಾಡಿದರೆ ನಿರೂಪಕ ಕಿಚ್ಚ ಸುದೀಪ್​ ಅವರಿಗೆ ಕ್ಲಾಸ್​ ತೆಗೆದುಕೊಂಡಿರುವುದನ್ನು ನಾವು ಅನೇಕ ಬಾರಿ ನೋಡಿದ್ದೇವೆ.

    ಅದೇ ರೀತಿ ಎಲಿಮಿನೇಟ್ ಆಗಿ ಹೋದವರು ಹಾಗೆ ಮಾಡಿದರೆ ಅಂಥವರ ಬಗ್ಗೆ ನಿರೂಪಕ ಕಿಚ್ಚ ಸುದೀಪ್​ ಮಾತನಾಡಿರುವುದು ತುಂಬಾ ಕಡಿಮೆ. ಆದರೆ, ಈ ವಾರ ಅದರ ಬಗ್ಗೆ ಮಾತನಾಡಲು ನಟ ಸುದೀಪ್​ ಮಾತನಾಡುತ್ತಾರೆ ಎಂದು ಹೇಳಲಾಗಿದ್ದು, ಮಾಜಿ ಸ್ಫರ್ಧಿ ಈಶಾನಿ ನೀಡಿರುವ ಹೇಳಿಕೆ ಕುರಿತು ಮಾತನಾಡಲಿದ್ದಾರೆ ಎಂದು ಹೇಳಲಾಗಿದೆ. ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಈ ಬಗ್ಗೆ ತೋರಿಸಲಾಗಿದ್ದು, ಪ್ರೇಕ್ಷಕರ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ.

    ಇದನ್ನೂ ಓದಿ: ಪಿಎಸ್​ಐ-ಸಿಟಿಐ ಪ್ರಶ್ನೆ ಪತ್ರಿಕೆ ಸೋರಿಕೆ; ಸಬ್​ಇನ್ಸ್​ಪೆಕ್ಟರ್​ ವಶಕ್ಕೆ

    ಬಿಗ್​ಬಾಸ್​ ಮನೆಯಲ್ಲಿ ಈ ವಾರ ಮಹತ್ವದ ಸಂಗತಿಗಳು ನಡೆದಿದ್ದು, ಮನೆಯಿಂದ ಎಲಿಮಿನೇಟ್​ ಆಗಿ ಹೊರಹೋಗಿದ್ದ ಸ್ಫರ್ಧಿಗಳು ದೊಡ್ಮನೆಯೊಳಗೆ ಕಾಲಿಟ್ಟಿದ್ದರು. ಈ ವೇಳೆ ಈಶಾನಿ ಡ್ರೋನ್​ ಪ್ರತಾಪ್​ ಕುರಿತು ಆಡಿರುವ ಮಾತುಗಳು ವ್ಯಾಪಕ ಖಂಡನೆಗೆ ಗುರಿಯಾಗಿತ್ತು. ವಾರದ ಕೊನೆಯಲ್ಲಿ ಈ ವಿಚಾರವನ್ನು ನಟ ಸುದೀಪ್​ ಪ್ರಸ್ತಾಪ ಮಾಡುತ್ತಾರೆ ಎಂದು ಹೇಳಲಾಗಿದ್ದು, ಅದರ ಸುಳಿವು ಸಿಕ್ಕಿದೆ.

    ಈ ವಾರ ಮನೆಗೆ ಹಳೇ ಗೆಳೆಯರು ವಾಪಸ್​ ಬಂದರು. ಅವರು ಹೊಸ ಉತ್ಸಾಹ ತಂದ್ರಾ ಅಥವಾ ಇರುವ ಉತ್ಸಾಹವನ್ನು ಹಾಳುಮಾಡಿ ಹೋದ್ರಾ ಎಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ನಟ ಸುದೀಪ್​ ಪ್ರಶ್ನಿಸಿದ್ದಾರೆ. ಈ ಸೀಸನ್​ನ ಕೊನೇ ಪಂಚಾಯ್ತಿಯಲ್ಲಿ ಈ ಎಲ್ಲ ವಿಷಯಗಳು ಪ್ರಸ್ತಾಪ ಆಗಲಿದೆಯಾ ಎಂದು ಕಾದು ನೋಡಬೇಕಿದೆ.

    ಸಿಂಪಥಿ ಕಾರ್ಡ್​ ಬಳಕೆ ಮಾಡಿ ಕಾಗೆ ಕಕ್ಕ ಮಾಡಿ ಎಲ್ಲ ಕಡೆ ಹೋಗುತ್ತಲೇ ಇದೆ ಎಂದು ಬಿಗ್​ಬಾಸ್​ ಮನೆಗೆ ಭೇಟಿ ನೀಡಿದ ಬೇಳೆ ಈಶಾನಿ ಡ್ರೋನ್​ ಪ್ರತಾಪ್​ ಅವರನ್ನು ಉದ್ದೇಶಿಸಿ ಹೇಳಿದ್ದರು. ಈ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು ಮತ್ತು ಈಶಾನಿ ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿ ಕ್ಷಮೆಯಾಚಿಸಬೇಕೆಂದು ಹಲವರು ಆಗ್ರಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts