More

    ದಾಖಲೆ ಮೊತ್ತಕ್ಕೆ ಐಪಿಎಲ್​ ಪ್ರಾಯೋಜಕತ್ವ ಉಳಿಸಿಕೊಂಡ ಟಾಟಾ ಗ್ರೂಪ್ಸ್

    ನವದೆಹಲಿ: 17ನೇ ಆವೃತ್ತಿಯ ಐಪಿಎಲ್​ ಒಂದಿಲ್ಲೊಂದು ವಿಚಾರಕ್ಕೆ ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿದ್ದು, ಈಗ ಮತ್ತೊಂದು ವಿಚಾರಕ್ಕೆ ಸದ್ದು ಮಾಡುತ್ತಿದೆ. ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ ಪ್ರಾಯೋಜಕತ್ವದ ಹಕ್ಕು ಭರ್ಜರಿ ಮೊತ್ತಕ್ಕೆ ಬಿಕರಿಯಾಗಿದ್ದು, ಮುಂದಿನ ಐದು ವರ್ಷಗಳ ಕಾಲ ಟೈಟಲ್​ ಪ್ರಾಯೋಜಕತ್ವದ ಹಕ್ಕು ಈ ಸಂಸ್ಥೆಯ ಪಾಲಾಗಿದೆ.

    ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ ಪ್ರಾಯೋಜಕತ್ವ ಹಕ್ಕು ಮತ್ತೆ ಟಾಟಾ ಸಂಸ್ಥೆಯ ಪಾಲಾಗಿದ್ದು, ಹಾಲಿ ಅಂದರೆ 2024ರಿಂದ 2028ರವರೆಗಿನ ಟೈಟಲ್ ಪ್ರಾಯೋಜಕತ್ವದ ಹಕ್ಕು ಟಾಟಾ ಸಮೂಹದ ಪಾಲಾಗಿದೆ. ಐಪಿಎಲ್‌ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವ ಮತ್ತೆ ಟಾಟಾ ಸಂಸ್ಥೆಯ ಪಾಲಾಗಿದ್ದು, 2028ರವರೆಗೆ ಪ್ರತಿ ಆವೃತ್ತಿಗೆ ಬಿಸಿಸಿಐಗೆ 500 ಕೋಟಿ ರೂ. ಪಾವತಿಸಲಿದೆ. 2022-23ರ ಆವೃತ್ತಿಗಳಲ್ಲಿ ಟಾಟಾ ಸಂಸ್ಥೆ ಶೀರ್ಷಿಕೆ ಹಕ್ಕು ಪಡೆದಿತ್ತು. ವರ್ಷಕ್ಕೆ ತಲಾ 335 ಕೋಟಿ ರೂ. ಪಾವತಿಸಿತ್ತು.

    ಕಳೆದ ಕೆಲ ದಿನಗಳ ಹಿಂದೆ ಬಿಸಿಸಿಐ ಐಪಿಎಲ್​ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಟೆಂಡರ್‌ ಆಹ್ವಾನಿಸಿತ್ತು. ಶೀರ್ಷಿಕೆಯ ಪ್ರಾಯೋಜಕತ್ವದ ಹಕ್ಕನ್ನು ಪಡೆದುಕೊಂಡಿರುವ ಟಾಟಾ ಸಂಸ್ಥೆ 5 ವರ್ಷಗಳಲ್ಲಿ ಒಟ್ಟು 2500 ಕೋಟಿ ರೂ. ಬಿಸಿಸಿಐಗೆ ಪಾವತಿಸಲಿದೆ. ಅಂದರೆ ವಾರ್ಷಿಕ 500 ಕೋಟಿ ರೂ. ಶುಲ್ಕವನ್ನು ಟಾಟಾ ಸಂಸ್ಥೆ ಬಿಸಿಸಿಐಗೆ ಪಾವತಿಸಲಿದೆ.

    ದಾಖಲೆ ಮೊತ್ತಕ್ಕೆ ಐಪಿಎಲ್​ ಪ್ರಾಯೋಜಕತ್ವ ಉಳಿಸಿಕೊಂಡ ಟಾಟಾ ಗ್ರೂಪ್ಸ್

    ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಡೀಪ್​ಫೇಕ್​ ವಿಡಿಯೋ ಪ್ರಕರಣ; ಪ್ರಮುಖ ಆರೋಪಿ ಅರೆಸ್ಟ್

    ಈ ಕುರಿತು ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ, ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕರಾಗಿ ಟಾಟಾ ಗ್ರೂಪ್‌ನೊಂದಿಗೆ ಪಾಲುದಾರಿಕೆಯನ್ನು ಘೋಷಿಸಲು ನಾವು ಹರ್ಷಿಸುತ್ತೇವೆ. ಭಾರತದಲ್ಲಿ ಬೇರೂರಿರುವ ಟಾಟಾ ಗ್ರೂಪ್, ಶ್ರೇಷ್ಠತೆಯ ಸಂಕೇತವಾಗಿ ಹೊರಹೊಮ್ಮಿದೆ. ವಿವಿಧ ಜಾಗತಿಕ ವಲಯಗಳಲ್ಲಿ ತನ್ನ ಛಾಪನ್ನು ಮೂಡಿಸಿದೆ.ಈ ಸಹಯೋಗವು ಬೆಳವಣಿಗೆ, ನಾವೀನ್ಯತೆ ಮತ್ತು ಉತ್ಕೃಷ್ಟತೆಗೆ ಪರಸ್ಪರ ಸಮರ್ಪಣಾ ಮನೋಭಾವವನ್ನು ಒಳಗೊಂಡಿರುತ್ತದೆ. ಅಭೂತಪೂರ್ವ ಆರ್ಥಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಐಪಿಎಲ್​ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್, 2024-28 ರ ಶೀರ್ಷಿಕೆ ಪ್ರಾಯೋಜಕತ್ವವನ್ನು ದಾಖಲೆ ಮೊತ್ತಕ್ಕೆ ಟಾಟಾ ಸಮೂಹ ಸಂಸ್ಥೆ ಖರೀದಿಸಿರುವುದು ಐಪಿಎಲ್ ಹೊಂದಿರುವ ಅಪಾರ ಮೌಲ್ಯ ಮತ್ತು ಆಕರ್ಷಣೆಗೆ ಸಾಕ್ಷಿಯಾಗಿದೆ. ಈ ಅಭೂತಪೂರ್ವ ಮೊತ್ತವು ಲೀಗ್‌ನ ಇತಿಹಾಸದಲ್ಲಿ ಹೊಸ ಮಾನದಂಡವನ್ನು ಹೊಂದಿಸುತ್ತದೆ ಮಾತ್ರವಲ್ಲದೆ ಜಾಗತಿಕ ಪ್ರಭಾವದೊಂದಿಗೆ ಐಪಿಎಲ್‌ನ ಸ್ಥಾನವನ್ನು ಪ್ರಮುಖ ಕ್ರೀಡಾಕೂಟವಾಗಿ ಪುನರುಚ್ಚರಿಸುತ್ತದೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts