More

    ನಯಾಪೈಸೆ ಇಲ್ಲದೆ ಬದುಕುವುದು ಹೇಗೆ? ಈತ ಬದುಕಲು ಏನು ಮಾಡುತ್ತಿದ್ದಾನೆ?

    ಲಂಡನ್: ಹಣವಿದ್ದರೆ ಮಾತ್ರ ಬದುಕು ಎಂದು ಜಗತ್ತಿನಲ್ಲಿ ಪ್ರತಿಯೊಬ್ಬರೂ ಹೇಳುತ್ತಾರೆ, ಸಾಧ್ಯವಾದಷ್ಟೂ ಹಣ ಸಂಪಾದಿಸಿ ಸುಖಕರ ಜೀವನ ಸಾಗಿಸಬೇಕೆಂದು ಕನಸು ಕಾಣುತ್ತಾರೆ. ಆದರೆ ಉನ್ನತ ಶಿಕ್ಷಣ ಪಡೆದು, ಒಳ್ಳೇಯ ಉದ್ಯೋಗ ಹಿಡಿದು ಸಾಕಷ್ಟು ಹಣ ಸಂಪಾದಿಸಬಹುದಾದ ಅರ್ಹತೆಯಿದ್ದ ವ್ಯಕ್ತಿ ಇದಕ್ಕೆ ತದ್ವಿರುದ್ಧ ತೀರ್ಮಾನ ತೆಗೆದುಕೊಂಡು 15ವರ್ಷದಿಂದ ಹಣವಿಲ್ಲದ ಬದುಕು ಕಟ್ಟಿಕೊಂಡು ಜಗತ್ತು ತನ್ನತ್ತ ನೋಡುವಂತೆ ಮಾಡಿದ್ದಾನೆ.

    ಈತ ಯುನೈಟೆಡ್​ ಕಿಂಗ್​ಡಮ್​ ನಿವಾಸಿ ಮಾರ್ಕ್ ಬೊಯ್ಲ್ ಗೆ ಸಂಬಂಧಿಸಿದ ಕಥೆಯಿದು. 2008ರಲ್ಲೇ ಬೋಯ್ಲ್ ಹಣ ಬಳಸುವುದನ್ನು ಬಿಟ್ಟು ಆನಂದದ ಜೀವನವನ್ನು ನಡೆಸುತ್ತಿದ್ದಾನೆ. ತಂತ್ರಜ್ಞಾನವನ್ನು ದೂರವಿಟ್ಟು ‘ನೈಸರ್ಗಿಕ’ ಜೀವನವನ್ನು ಅಳವಡಿಸಿಕೊಂಡು ನೆಮ್ಮದಿಯಿಂದಿದ್ದಾನೆ. .
    ವ್ಯಾಪಾರ ಮತ್ತು ಅರ್ಥಶಾಸ್ತ್ರದಲ್ಲಿ ಪದವವೀಧರನಾದ ಮಾರ್ಕ್ ಬೊಯ್ಲ್ ಶಿಕ್ಷಣ ಮುಗಿಯುತ್ತಿದ್ದಂತೆ ಯುಕೆಯ ಬ್ರಿಸ್ಟಲ್‌ನಲ್ಲಿ ಸಾವಯವ ಆಹಾರ ಕಂಪನಿಯಲ್ಲಿ ಉತ್ತಮ ಸಂಬಳ ಬರುವ ಉದ್ಯೋಗಕ್ಕೆ ಸೇರಿದ್ದ. ಒಳ್ಳೆಯ ಉದ್ಯೋಗ ಪಡೆದುಕೊಳ್ಳುವುದು ಅವನ ಕನಸಾಗಿತ್ತು. ಜೀವನದಲ್ಲಿ ಸಾಧಿಸಬೇಕೆಂದು ಹಲವು ವರ್ಷ ಕಷ್ಟಪಟ್ಟು ದುಡಿದ.

    ಇದನ್ನೂ ಓದಿ: ಶ್ರೀದೇವಿ ಗ್ಲಾಮರ್​ಗಾಗಿ ಮಾಡಿದ ಆ ಡೈಯಟ್ ಅಷ್ಟು ಡೇಂಜರ್ರಾ? ಆರೋಗ್ಯ ನಿಪುಣರು ಹೇಳುವುದು ಸಹ….

    ಆದರೆ 2007ರಲ್ಲಿ ಜರುಗಿದ ಆಕಸ್ಮಿಕ ಘಟನೆ ಮಾರ್ಕ್ ಬೊಯ್ಲ್ ನ ಸಂಪೂರ್ಣ ಆಲೋಚನೆ ವಿಧಾನವನ್ನೇ ಬದಲಿಸಿಬಿಟ್ಟಿತು. ಒಂದು ರಾತ್ರಿ ತನ್ನ ಹೌಸ್‌ಬೋಟ್‌ನಲ್ಲಿ ಮೆರ್ಲೋಟ್‌ನ ಗಾಜಿನ ಮೇಲೆ ಸ್ನೇಹಿತನೊಂದಿಗೆ ಕುಳಿತಿರುವಾಗ ಅಲ್ಲಿದ್ದ ಕೆಲವರ ಮಾತುಗಳನ್ನು ಕೇಳಿಸಿಕೊಂಡ. ಎಲ್ಲರೂ ಹಣದ ಕುರಿತೇ ಚರ್ಚಿಸುತ್ತಿದ್ದರು. ಎಲ್ಲ ಸಮಸ್ಯೆಗಳಿಗೆ ಹಣವೇ ಮೂಲ ಎಂದು ಆತ ಅರಿತುಕೊಂಡನು. ಬಸವಣ್ಣ, ಗಾಂಧೀಜಿ ಪ್ರತಿಪಾದಿಸಿದ್ದ ಸರಳ ಜೀವನ ರೂಢಿಸಿಕೊಂಡರೆ ತಾನು ಹಣದ ಹಿಂದೆ ಬೀಳುವುದರಿಂದ ತಪ್ಪಿಸಿಕೊಂಡು ಸುಂದರ, ನೆಮ್ಮದಿ ಬದುಕು ಕಟ್ಟಿಕೊಳ್ಳಬಹುದೆಂದು ಯೋಚಿಸಿದ.

    ಅದರ ನಂತರ ಮಾರ್ಕ್ ತನ್ನ ದುಬಾರಿ ದೋಣಿಯನ್ನು ಮಾರಿ ಹಳೆಯ ಕಾರವಾನ್‌ಗೆ ಸ್ಥಳಾಂತರಗೊಂಡ. ಹಣ ಮುಕ್ತ ಜೀವನ ಪ್ರಾರಂಭಿಸಿದ. ತನಗೆ ಅಗತ್ಯವಾದ ಆಹಾರಪದಾರ್ಥಗಳನ್ನು ತಾನೇ ಬೆಳೆದುಕೊಳ್ಳುತ್ತಾನೆ. ಮೊದಲ ಕೆಲವು ತಿಂಗಳುಗಳು ಕಠಿಣವಾಗಿದ್ದವು, ಏಕೆಂದರೆ ಆತ ಬೆಳಗಿನ ಜಾವ ಕಾಫಿ ಕುಡಿಯುವುದರಿಂದ ಹಿಡಿದು ಇತರ ಸೌಕರ್ಯಗಳಿಗೆ ಒಗ್ಗಿಕೊಳ್ಳುವ ಅಗತ್ಯವಿತ್ತು, ಕೇವಲ ಮನೆ ಬದಲಾಯಿಸಿ, ಉದ್ಯೋಗ ಬಿಟ್ಟರೆ ಸಾಲದು. ದಿನಚರಿಯಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳುವುದರಿಂದ ಸಾಧಿಸಿ ತೋರಿಸಬಹುದೆಂದು ಮತ್ತಷ್ಟು ಕಠಿಣ ತೋರ್ಮಾನಗಳನ್ನು ತೆಗೆದುಕೊಂಡ. ಆಧುನಿಕ ಬದುಕನ್ನು ಸಂಪೂರ್ಣ ತೊರೆದು ಪ್ರಕೃತಿದತ್ತವಾದ ಪದ್ಧತಿಗಳನ್ನು ಅನುಸರಿಸತೊಡಗಿದ.

    ಬೊಯ್ಲ್ ಹಣ ಮುಕ್ತ ಜೀವನಶೈಲಿಯು ಅವರ ಪುಸ್ತಕವನ್ನು ಬಿಡುಗಡೆ ಮಾಡಿದಾಗ ಅದು ವೈರಲ್ ವಿಷಯವಾಯಿತು, ಇದರಲ್ಲಿ ಆತ ತನ್ನ ಜೀವನದಲ್ಲಿ ಪರಿವರ್ತನೆ ಮಾಡುವಾಗ ಎದುರಿಸಿದ ಸವಾಲುಗಳು ಮತ್ತು ಕಂಡುಕೊಂಡ ಪ್ರಾಯೋಗಿಕ ಪರಿಹಾರಗಳು ಮತ್ತು ತತ್ವಶಾಸ್ತ್ರದ ಬಗ್ಗೆ ವಿವರವಾಗಿ ಬರೆದುಕೊಂಡಿದ್ದ.

    ಹಣವಿಲ್ಲದ ಎರಡು ವರ್ಷ ನನ್ನ ಜೀವನ ಅತ್ಯಂತ ತೃಪ್ತಿಕರವಾಗಿದೆ ಎಂದು ಮಾರ್ಕ್ ಬೊಯ್ಲ್ 2010 ರಲ್ಲಿ ಬರೆದದುಕೊಂಡಿದ್ದಾನೆ. “ನನ್ನ ಹಣಮುಕ್ತ ಜೀವನಶೈಲಿಯಿಂದ ಸಮಾಜದಲ್ಲಿಯೂ ಹೆಚ್ಚು ಸ್ನೇಹಿತರನ್ನು ಹೊಂದಿದ್ದೇನೆ, ಈ ತೀರ್ಮಾನದ ನಂತರ ನನಗೆ ಅನಾರೋಗ್ಯ ಕಾಡಿಲ್ಲ. ನನ್ನ ಫಿಟ್ ನೆಸ್​ ಸಹ ಚೆನ್ನಾಗಿದೆ. ನಿಜವಾದ ಜೀವನ ಭದ್ರತೆಯನ್ನು ಹಣ ನೀಡುವುದಿಲ್ಲ. ಬಡವರು ಶ್ರೀಮಂತರಿಗಿಂತ ಹೆಚ್ಚು ನೆಮ್ಮದಿಯಾಗಿರುತ್ತಾರೆ. ನಿಜವಾದ ಸ್ವಾತಂತ್ರ್ಯವೆಂದರೆ ಪರಸ್ಪರ ಅವಲಂಬನೆಯಾಗದಿರುವುದು” ಎನ್ನುತ್ತಾನೆ ಬೊಯ್ಲ್.

    ನಾನು ಈಗ ಅಳವಡಿಸಿಕೊಂಡಿರುವ ‘ಸರಳ ಜೀವನ’ ತಪ್ಪುದಾರಿಗೆಳೆಯುವಂತಿದೆ ಎಂದು ಕೆಲವರು ಆರೋಪಿಸುತ್ತಾರೆ, ಆದರೆ ಆಧುನಿಕ ಜೀವನ ಶೈಲಿಗೆ ಮಾರುಹೋಗಿರುವವರು ಸ್ಮಾರ್ಟ್‌ಫೋನ್‌ ಸೇರಿದಂತೆ ಆಧುನಿಕ ತಂತ್ರಜ್ಞಾನದಿಂದ ಆವಿಷ್ಕರಿಸಿದ ವಸ್ತುಗಳನ್ನು ಬಳಸುವವರೆಲ್ಲ ಯಾಂತ್ರಿಕ ಜೀವನಕ್ಕೆ ಮಾರುಹೋಗಿ ನೆಮ್ಮದಿ ಕಳೆದುಕೊಂಡಿಲ್ಲವೇ? ಪ್ಲಾಸ್ಟಿಕ್‌ನಂತಹ ಹಾನಿಕಾರಕ ವಸ್ತುಗಳಿಂದ ಪರಿಸರ ಹಾಳಾಗಿಲ್ಲವೇ? ಅದಕ್ಕಾಗಿಯೇ ನಾನು ಇದೆಲ್ಲವನ್ನು ತಿರಸ್ಕರಿಸಿದೆ. ಹರಿಯುವ ನೀರು ಬಳಸುವ ನಾನು ವಿದ್ಯುತ್ ಅಥವಾ ಯಂತ್ರಗಳಿಲ್ಲದೆ ಬದುಕುತ್ತಿರುವ ನನ್ನ ಜೀವನವು ಖಂಡಿತ ಸಂತಸವಾಗಿದೆ ಎನ್ನುತ್ತಾನೆ.

    ನನ್ನಂತೆ ಬದುಕುವುದು ಕಷ್ಟ, ಆದೆ ಹಣ ಮತ್ತು ಕೈಗಾರಿಕೀಕರಣದ ಮೇಲೆ ಕಡಿಮೆ ಅವಲಂಬಿತರಾಗಲು ಜನ ತೀರ್ಮಾನಿಸಬೇಕು. ನಾನು ತಂತ್ರಜ್ಞಾನದೊಂದಿಗೆ ಮತ್ತು ಇಲ್ಲದೆ ಬದುಕಿದ್ದೇನೆ. ಯಾವುದು ನನಗೆ ಹೆಚ್ಚು ಶಾಂತಿ ಮತ್ತು ತೃಪ್ತಿಯನ್ನು ನೀಡುತ್ತದೆ ಎಂದು ನನಗೆ ತಿಳಿದಿದೆ ಎಂದು ಬೋಯ್ಲ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts