More

    ಇನ್ಫಿ ಮೂರ್ತಿ ಅಳಿಯ, ಬ್ರಿಟನ್​ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್​ ಗೋಪೂಜೆಯ ವಿಡಿಯೋ ವೈರಲ್​!

    ಲಂಡನ್​: ಬೋರಿಸ್​ ಜಾನ್ಸನ್​ ರಾಜೀನಾಮೆಯಿಂದ ತೆರವಾಗಿರುವ ಬ್ರಿಟನ್​​ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸಿ, ಫೈನಲ್​ ಹಂತಕ್ಕೆ ತಲುಪಿರುವ ಬ್ರಿಟನ್​ ಮಾಜಿ ಹಣಕಾಸು ಸಚಿವ, ಕನ್ಸರ್ವೇಟಿವ್​ ಪಕ್ಷದ ಸದಸ್ಯ ಹಾಗೂ ಇನ್ಫಿ ಮೂರ್ತಿ ಅಳಿಯ ರಿಷಿ ಸುನಕ್​ ಅವರು ಲಂಡನ್​ನಲ್ಲಿರುವ ತಮ್ಮ ನಿವಾಸದಲ್ಲಿ ಗೋಪೂಜೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    42 ವರ್ಷದ ರಿಷಿ ಸುನಕ್ ಅವರು​ ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಹಸು ಇದ್ದ ಜಾಗಕ್ಕೆ ಬಂದು ಪೂಜೆ ಮಾಡುವಾಗ ಸ್ಥಳೀಯರೊಬ್ಬರು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋದ ಆರಂಭದಲ್ಲಿ, ಸುನಕ್ ಅವರು ಪವಿತ್ರ ನೀರನ್ನು ಹಸುವಿಗೆ ಅರ್ಪಿಸಿದ ನಂತರ, ಕೈಯಲ್ಲಿ ಹಿತ್ತಾಳೆಯ ಪೂಜಾ ತಟ್ಟೆಯನ್ನು ಹಿಡಿದು ಹಸುವಿಗೆ ಆರತಿ ಬೆಳಗುತ್ತಾರೆ. ಈ ವೇಳೆ ದಂಪತಿಯ ಸುತ್ತಲು ಇರುವ ಪುರೋಹಿತರು ಮುಂದಿನ ಆಚರಣೆಯ ಬಗ್ಗೆ ಹೇಳುತ್ತಿರುವುದು ವಿಡಿಯೋದಲ್ಲಿದೆ.

    ಸುನಕ್ ಅವರು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲು ಮತ್ತು ಶ್ರೀಕೃಷ್ಣನ ಆಶೀರ್ವಾದವನ್ನು ಪಡೆಯಲು ಲಂಡನ್‌ನ ಹೊರವಲಯದಲ್ಲಿರುವ ಭಕ್ತಿವೇದಾಂತ ದೇವಸ್ಥಾನಕ್ಕೆ ಭೇಟಿ ನೀಡಿದ ಕೆಲವು ದಿನಗಳ ನಂತರ ಗೋಪೂಜೆಯ ವಿಡಿಯೋ ವೈರಲ್​ ಆಗಿದೆ. ದೇವಸ್ಥಾನಕ್ಕೆ ಭೇಟಿ ನೀಡಿದ್ದ ಫೋಟೋಗಳನ್ನು ಸುನಕ್​ ಅವರು ತಮ್ಮ ಇನ್​ಸ್ಟಾಗ್ರಾಂ ಮತ್ತು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದರು.

    ಸುನಕ್ ಅವರು 2020ರ ನವೆಂಬರ್​ನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುವ ಮೂಲಕ ಯುಕೆಯಲ್ಲಿ ವಾಸಿಸುವ ಭಾರತೀಯರಿಂದ ಪ್ರಶಂಸೆ ಗಳಿಸಿದ್ದರು. ಅವರು 11 ಡೌನಿಂಗ್ ಸ್ಟ್ರೀಟ್‌ನಲ್ಲಿರುವ ಕುಲಪತಿಗಳ ಅಧಿಕೃತ ನಿವಾಸದ ಮುಂಭಾಗದ ಮೆಟ್ಟಿಲುಗಳ ಮೇಲೆ ಎಣ್ಣೆ ದೀಪಗಳನ್ನು ಬೆಳಗಿಸುವ ಮೂಲಕ ಹಬ್ಬ ಆಚರಿಸಿದ್ದರು. ಸುನಕ್ ಅವರು ಯಾರ್ಕ್‌ಷೈರ್‌ನ ರಿಚ್‌ಮಂಡ್‌ನಿಂದ ಮೂರನೇ ಬಾರಿಗೆ ಮರು ಆಯ್ಕೆಯಾದಾಗ ಭಗವದ್ಗೀತೆಯನ್ನು ಹಿಡಿದುಕೊಂಡು ಯುಕೆ ಸಂಸತ್ತಿನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಸುನಕ್​ ಅವರು ಉತ್ತರ ಇಂಗ್ಲೆಂಡ್‌ನ ರಿಚ್‌ಮಂಡ್ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. (ಏಜೆನ್ಸೀಸ್​)

    ಸಹಾಯಕ ಕೃಷಿ ನಿರ್ದೇಶಕಿಯ ದರ್ಪಕ್ಕೆ ಅಧಿಕಾರಿಗಳು, ಸಿಬ್ಬಂದಿ ‌ಸುಸ್ತೋ ಸುಸ್ತು! ವಿಡಿಯೋ ವೈರಲ್​

    ಸೋನಾಲಿ ಸಾವಿನ ಪ್ರಕರಣದಲ್ಲಿ ಇಬ್ಬರ ಆಪ್ತರ ಬಂಧನ: ಮರಣೋತ್ತರ ವರ ಪರೀಕ್ಷೆಯಲ್ಲಿ ಆಘಾತಕಾರಿ ಅಂಶ ಬಯಲು

    ಗಾಯಕಿಯಾದರು ಮೇಘಶ್ರೀ; ಮ್ಯೂಸಿಕಲ್ ಲವ್​ಸ್ಟೋರಿ ‘ರಿದಂ’ನಲ್ಲಿ ನಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts