More

    ಶ್ರೀದೇವಿ ಗ್ಲಾಮರ್​ಗಾಗಿ ಮಾಡಿದ ಆ ಡೈಯಟ್ ಅಷ್ಟು ಡೇಂಜರ್ರಾ? ಆರೋಗ್ಯ ನಿಪುಣರು ಹೇಳುವುದು ಸಹ….

    ನವದೆಹಲಿ: ಶ್ರೀದೇವಿ ಅಂದ ಕಾಪಾಡಿಕೊಳ್ಳಲು ಅನುಸರಿಸಿದ ಡೈಯಟ್ ಅತ್ಯಂತ ಪ್ರಮಾದಕರವಾದುದು. ವೈದ್ಯರು ಹೇಳಿದ್ದರೂ ಆಕೆ ಜೀವವಿದ್ದ ಕಡೇ ಕ್ಷಣದವರೆಗೆ ಡೈಯಟ್​ ಪಾಲಿಸಿದ್ದರಿಂದಲೇ ಇಹಲೋಕ ತ್ಯಜಿಸಬೇಕಾಯಿತು ಎಂದು ಆಕೆ ಪತಿ. ಬಾಲಿವುಡ್​ ಚಿತ್ರಗಳ ನಿರ್ಮಾಪಕ ಬೋನಿ ಕಪೂರ್ ಹೇಳುತ್ತಿದ್ದಾರೆ. ಹಾಗಾದರೆ ಆಕೆ ಸೌಂದರ್ಯ ಕಾಪಾಡಿಕೊಳ್ಳಲು ನಿರ್ವಹಿಸಿದ ಡೈಯಟ್​ ಯಾವುದು? ಅದು ಅಷ್ಟು ಪ್ರಮಾದಕರವಾ? ವೈದ್ಯರು ಏನೇಳುತ್ತಾರೆ? ಈ ಬಗ್ಗೆ ತಿಳಿಯೋಣ…

    ಸೌಂದರ್ಯದ ಸಿರಿಯಾಗಿದ್ದ ಶ್ರೀದೇವಿ ಸೌಂದರ್ಯಕ್ಕಾಗಿ ಉಪ್ಪು ಕಡಿಮೆ ಇರುವ ಡೈಯಟ್​ ಅನುಸರಿಸುತ್ತಿದ್ದರು. ಅದೇ ಆಕೆ ಸಾವಿಗೆ ಕಾರಣವಾಗಿದೆ. “ನಿಮಗೆ ಲೋಬಿಪಿ(ರಕ್ತದೊತ್ತಡ) ಇದೆ. ಆದ್ದರಿಂದ ತೀವ್ರವಾದ ಆಹಾರಕ್ರಮವನ್ನು ಅನುಸರಿಸಬೇಡಿ, ಉಪ್ಪನ್ನು ಸೇವಿಸದೇ ಇರಬೇಡಿ” ಎಂದು ವೈದ್ಯರು ಶ್ರೀದೇವಿಗೆ ಹೇಳುತ್ತಲೇ ಇದ್ದರು. ಆದರೆ ಆಕೆ ಸಾಯುವ ವರೆಗೆ ಉಪ್ಪಿಲ್ಲದ ಆಹಾರ ತೆಗೆದುಕೊಳ್ಳುತ್ತಿದ್ದರು. ಕಡೆಗೆ ಅದು ಮತ್ತಷ್ಟು ಲೋಬಿಪಿಗೆ ಕಾರಣವಾಗಿ ಮೃತಪಟ್ಟರು ಎಂದು ಬೋನಿ ಕಪೂರ್ ಹೇಳಿದ್ದಾರೆ.

    ಇದನ್ನೂ ಓದಿ: ಈಕೆಗೆ “ಜೀವಜಲವೇ” ಕಂಟಕ: ನೀರು ಕುಡಿಯಂಗಿಲ್ಲ ಯಾಕೆ?

    ಹೀಗೆ ಮಾಡಲೇಬೇಡಿ: ಮನುಷ್ಯನ ವಯಸ್ಸು, ದೇಹದ ಮಾಸ್​ ಇಂಡೆಕ್ಸ್​, ಆರೋಗ್ಯ, ಮತ್ತಿತರ ಆಧಾರದ ಮೇಲೆ ಒಬ್ಬರಿಂದ ಮತ್ತೊಬ್ಬರಿಗೆ ಉಪ್ಪು ತೆಗೆದುಕೊಳ್ಳುವ ಪ್ರಮಾಣ ಮತ್ತು ವಿಧಾನ ಬದಲಾಗುತ್ತದೆ. ಆದರೆ ಎಂತಹ ಪರಿಸ್ಥಿತಿಯಲ್ಲೂ ಯಾರೂ ಸಹ ಉಪ್ಪು ತೆಗೆದುಕೊಳ್ಳುವುದರಿಂದ ದೂರವಾಗಬಾರದು. ದೇಹಕ್ಕೆ ಅತ್ಯಗತ್ಯವಾಗಿರುವ ಖನಿಜಾಂಶವಾದ ಸೋಡಿಯಂ ಉಪ್ಪಿನಲ್ಲಿರುತ್ತದೆ. ಇದು ಸೆಲ್ಯೂಲಾರ್​ ಫಂಕ್ಷನ್ಸ್​ ಅನ್ನು ನಿರ್ವಹಿಸುತ್ತದೆ. ಶರೀರದಲ್ಲಿ ಎಲೆಕ್ಟ್ರೋಲೈಟ್​ ಸರಿದೂಗಿಸಲು ಸಹಕಾರಿಯಾಗಿದೆ. ಒಂದು ವೇಳೆ ಆಹಾರದಲ್ಲಿ ಸಂಪೂರ್ಣವಾಗಿ ಉಪ್ಪು ತ್ಯಜಿಸಿದರೆ ಎಲೆಕ್ಟ್ರೋಲೈಟ್​ ಬ್ಯಾಲೆನ್ಸ್​ ತಪ್ಪುತ್ತದೆ. ಇದರಿಂದ ಕೋಮಾದಂತಹ ಗಂಭೀರ ಪರಿಸ್ಥಿತಿಗಳಿಗೆ ಕಾರಣವಾಗಬಹುದು.ಅಷ್ಟೇ ಅಲ್ಲ, ಸಾವು ಸಹ ಸಂಭವಿಸಬಹುದು ಎನ್ನುತ್ತಾರೆ ಆರೋಗ್ಯ ನಿಪುಣರು.

    ದೇಹದಲ್ಲಿ ಎಷ್ಟಿರಬೇಕು ಸೋಡಿಯಂ?: ಮನುಷ್ಯನ ದೇಹದಲ್ಲಿ 135 ಎಂಇಕ್ಯೂ/ಲೀ ಕಡಿಮೆ ಸೋಡಿಯಂ ಇದ್ದರೆ ಅದನ್ನು ಹೈಪೋನಾಟ್ರೇಮಿಯಾ ಎನ್ನುತ್ತಾರೆ. ಇದರಿಂದ ಮಾಂಸಖಂಡಗಳು ಹಿಗ್ಗಿ ರಕ್ತ ಪ್ರಸಾರಕ್ಕೆ ಅಡಚಣೆ ಉಂಟು ಮಾಡುತ್ತವೆ. ನಿತ್ಯ 2.4ಗ್ರಾಂಗಿಂತ ಕಡಿಮೆ ಉಪ್ಪು ತೆಗೆದುಕೊಂಡರೆ ಮೂತ್ರಪಿಂಡಗಳ ಮೇಲೆ ಅಧಿಕ ಒತ್ತಡ ಬೀಳುತ್ತದೆ. ಇದರಿಂದ ತಲೆ ನೋವು, ಆಲಸ್ಯ, ಮೈ ಕೈ ನೋವು, ಕಣ್ಣು ಮತ್ತು ತಲೆ ತಿರುಗಿದಂತೆ ಆಗುತ್ತದೆ. ತೀವ್ರತೆ ಆಧಾರದ ಮೇಲೆ 3ತರಹ ಹೈಪೋನಾಟ್ರೇಮಿಯಾ ಇದ್ದು, 3ನೇ ತರಹದ ಪ್ರಮಾದಕರ ಈ ಹೈಪೋನಾಟ್ರೇಮಿಯಾ ಮೆದುಳಿನಲ್ಲಿ ನರಗಳು ಸಿಡಿಯುವಂತಾಗಿ ಮೃತಪಡುತ್ತಾರೆ. ಮಧುಮೇಹ, ಹೈ ಬಿಪಿ ಇರುವವರು ಉಪ್ಪು ತ್ಯಜಿಸಿದರೆ ತಪ್ಪಿಲ್ಲ, ಆದರೆ ಲೋಬಿಪಿ ಇದ್ದರೂ ಅಂದಕ್ಕಾಗಿ ಉಪ್ಪು ತಿನ್ನದಿರುವುದು ತುಂಬಾ ಅಪಾಯಕಾರಿ ಎನ್ನುತ್ತಾರೆ ವೈದ್ಯ ವಿಕ್ರಮ್​ಜಿತ್​ ಸಿಂಗ್.

    ವಿಶ್ವ ಆರೋಗ್ಯ ಸಂಸ್ಥೆ ಏನೇಳುತ್ತೆ?: ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್​ಒ) ಪ್ರಕಾರ ವ್ಯಕ್ತಿಯೊಬ್ಬರು ಪ್ರತಿದಿನ 5ಗ್ರಾಂ ಉಪ್ಪು ಬಳಸಬೇಕು. ಇದಕ್ಕಿಂತ ಕಡಿಮೆ ಉಪಯೋಗಿಸಿದರೆ ಕೋಮಾಗೆ ಹೋಗಿ ತೀವ್ರವಾದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಹೀಗಾಗಿ ಚಿತ್ರ ತಾರೆಯರು, ದೇಹವನ್ನು ಹೇಗೆಲ್ಲ ಇಟ್ಟುಕೊಳ್ಳಬೇಕೆಂದು ಬಯಸುವವರು ” ಡೈಯಟ್​” ಗೆ ಮೊರೆಹೋಗುವ ಮುನ್ನ ಒಂದಲ್ಲ ನೂರು ಸಾರಿ ಯೋಚಿಸಬೇಕು. ಇದನ್ನೆಲ್ಲ ತಲತಲಾಂತರಗಳ ಹಿಂದೆ ನಮ್ಮಹಿರಿಕರು ನೋಡಿಯೇ ಇರಬೇಕು “ಉಪ್ಪಿಗಿಂತ ರುಚಿ ಬೇರಿಲ್ಲ, ತಾಯಿಗಿಂತ ಮಿಗಿಲಾದ ದೇವರಿಲ್ಲ” ಎಂದು.

    ಜೈಲಿನಲ್ಲಿ ಡಾನ್ಸ್​ ಮಾಡಿದ್ದರಂತೆ ಈ ಬಾಲಿವುಡ್​ ನಟಿ! ಯಾಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts