More

  ಒಂದು ಕಾಲದ ಸ್ಟಾರ್​ ನಟಿ ಇಂದು ಹೊಟ್ಟೆಪಾಡಿಗಾಗಿ ಸಾಬೂನು ಮಾರುತ್ತಿದ್ದಾರೆ! ಈಕೆ ಕನ್ನಡದಲ್ಲಿ ನಟಿಸಿದ್ದಾರೆ

  ಕೊಚ್ಚಿ: ನಿಮಗೆಲ್ಲ ನಟಿ ಐಶ್ವರ್ಯಾ ಅಲಿಯಾಸ್​ ಐಶ್ವರ್ಯಾ ಭಾಸ್ಕರನ್​ ಗೊತ್ತಿರಬಹುದು. ಇವರು ಹಿರಿಯ ನಟಿ ಲಕ್ಷ್ಮೀ ಅವರ ಪುತ್ರಿ. ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ನಟಿಸಿದ್ದಾರೆ. ಒಂದು ಕಾಲದಲ್ಲಿ ಸ್ಟಾರ್​ ನಟರ ಜತೆಯಲ್ಲೇ ತೆರೆಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಪಾಂಡವರು ಮತ್ತು ಒಗ್ಗರಣೆ ಸೇರಿದಂತೆ ಕೆಲವೇ ಸಿನಿಮಾಗಳಲ್ಲಿ ನಟಿಸಿದ್ದು, ಕೆಲವರಿಗೆ ಇವರು ಮುಖ ಪರಿಚಯವೂ ಇದೆ.

  ಸಾಬೂನು ಮಾರಿ ಬದುಕು ಸಾಗಾಟ
  ಐಶ್ವರ್ಯಾ ಅವರು ಮಲಯಾಳಂ ಮತ್ತು ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಬಟರ್​ಫ್ಲೈಸ್​, ನರಸಿಂಹಂ ಮತ್ತು ಪ್ರಜಾ ಸಿನಿಮಾಗಳಲ್ಲಿ ಮಲಯಾಳಂ ಸೂಪರ್​ಸ್ಟಾರ್​ ಮೋಹನ್​ ಲಾಲ್​ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ. ಜಾಕ್​ಪಾಟ್​, ಸತ್ಯಮೇವ ಜಯತೆ, ಶಾರ್ಜಾ ಮತ್ತು ನೋಟ್​ಬುಕ್​ ಸಿನಿಮಾಗಳಲ್ಲಿ ನಟಿಸುವ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ. ಸಿನಿಮಾಗಳಲ್ಲಿ ಮಾತ್ರವಲ್ಲದೆ, ಕಿರಿತೆಯ ಅನೇಕ ಧಾರಾವಾಹಿಗಳಲ್ಲೂ ಐಶ್ವರ್ಯಾ ಬಣ್ಣ ಹಚ್ಚಿದ್ದಾರೆ. ಆದರೆ, ಇತ್ತೀಚಿನ ದಿನಗಳಿಂದ ಐಶ್ವರ್ಯಾ ಅವರು ಸಿನಿಮಾ ಮತ್ತು ಕಿರುತೆರೆಯಿಂದ ದೂರ ಉಳಿದಿದ್ದಾರೆ. ಸದ್ಯ ನನಗೆ ಯಾವುದೇ ಕೆಲಸ ಇಲ್ಲ. ಹಣವು ಇಲ್ಲ. ಹೀಗಾಗಿ ಹೊಟ್ಟೆ ಪಾಡಿಗಾಗಿ ಬೀದಿ ಬೀದಿಗಳಲ್ಲಿ ಸಾಬೂನು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದೇನೆ. ಸಿನಿಮಾದಿಂದ ಯಾವುದೇ ಅವಕಾಶಗಳು ಬರುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

  ನೆಮ್ಮದಿಯಾಗಿ ಇರಲು ಬಿಡುತ್ತಿಲ್ಲ
  ಇದೀಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಐಶ್ವರ್ಯಾ ಭಾಸ್ಕರನ್​ ಅವರು ತಮ್ಮ “ಮಲ್ಟಿ ಮಮ್ಮಿ” ಹೆಸರಿನ ಯೂಟ್ಯೂಬ್​ ಚಾನೆಲ್​ ಮೂಲಕ ವಿವರಿಸಿದ್ದು, ಕಿರುಕುಳ ನೀಡಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹೊಟ್ಟೆಪಾಡಿಗಾಗಿ ಕಷ್ಟಪಟ್ಟು ಸಾಬೂನು ಮಾರಾಟ ಮಾಡಿ ಜೀವನ ಸಾಗಿಸಿದರು ಕೆಲ ದುಷ್ಟರು ನಮ್ಮನ್ನು ನೆಮ್ಮದಿಯಾಗಿ ಇರಲು ಬಿಡುತ್ತಿಲ್ಲ ಎಂದು ಐಶ್ವರ್ಯಾ ಬೇಸರ ಹೊರಹಾಕಿದ್ದಾರೆ.

  Aishwarya Bhaskaran

  ಫೋನ್​ ನಂಬರ್ ಶೇರ್​
  ಅನೇಕರು ಜಾಲತಾಣದಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಇದು ನನ್ನ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತಿದೆ. ನನ್ನ ಮಗಳ ಸಲಹೆ ಮೇರೆಗೆ ನಾನು ಈ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದೇನೆ. ಸಾಬೂನು ಮಾರಾಟ ಮಾಡಲು ನನ್ನ ಫೋನ್​ ನಂಬರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡ ಬಳಿಕ ಕಿರುಕುಳಗಳು ಆರಂಭವಾಯಿತು. ​

  ಖಾಸಗಿ ಭಾಗದ ಫೋಟೋ
  ಗ್ರಾಹಕರೊಂದಿಗೆ ಆರ್ಡರ್ ಪಡೆಯಲು ತನ್ನ ಫೋನ್ ನಂಬರ್​ ಅನ್ನು ಐಶ್ವರ್ಯಾ ಅವರು ಹಂಚಿಕೊಂಡಿದ್ದು, ಅಂದಿನಿಂದ ಅವರಿಗೆ ಅನುಚಿತ ಮೆಸೇಜ್​ಗಳು ಮತ್ತು ಅಶ್ಲೀಲ ಫೋಟೋಗಳು ನಿರಂತರವಾಗಿ ಬರುತ್ತಿವೆ. ಅದರಲ್ಲೂ ಕೆಲ ಪುಂಡರು ತಮ್ಮ ಖಾಸಗಿ ಭಾಗದ ಫೋಟೋಗಳನ್ನು ಸಹ ಶೇರ್​ ಮಾಡುತ್ತಿದ್ದಾರೆ. ಇದರಿಂದ ಮಾನಸಿಕವಾಗಿ ವಿಚಲಿತಗೊಂಡಿರುವುದಾಗಿ ಐಶ್ವರ್ಯಾ ಹೇಳಿಕೊಂಡಿದ್ದಾರೆ.

  ಎಚ್ಚರಿಕೆ
  ವಿಡಿಯೋವನ್ನು ಸಾಕ್ಷಿಯಾಗಿ ಇಟ್ಟುಕೊಂಡು ಸೈಬರ್‌ ಕ್ರೈಮ್‌ಗೆ ಮೊರೆಹೋಗಲು ನಾನು ಬಯಸುವುದಿಲ್ಲ. ಆದರೆ, ಕಿರುಕುಳ ಇದೇ ರೀತಿ ಮುಂದುವರಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

  ಅಭಿಮಾನಿಗಳಿಗೆ ಧನ್ಯವಾದ
  ನಟಿಯಾಗಿ ಹೆಚ್ಚು ಅವಕಾಶಗಳು ಸಿಗದ ಕಾರಣ ಸಾಬೂನು ವ್ಯಾಪಾರವೇ ತಮ್ಮ ಆದಾಯದ ಮೂಲವಾಗಿದೆ ಎಂದು ಐಶ್ವರ್ಯಾ ಹೇಳಿದ್ದಾರೆ. ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ತಮ್ಮ ಅಭಿಪ್ರಾಯವುಳ್ಳ ವಿಡಿಯೋವನ್ನು ಶೇರ್ ಮಾಡಿದ ನಂತರ ಅನೇಕ ನೆಟ್ಟಿಗರು ನಟಿಯನ್ನು ಬೆಂಬಲಿಸಿದ್ದಾರೆ. ಹೀಗಾಗಿ ಎಲ್ಲ ಅಭಿಮಾನಿಗಳಿಗೆ ಅವರು ಧನ್ಯವಾದ ತಿಳಿಸಿದ್ದಾರೆ.

  ಮೂರೇ ವರ್ಷಕ್ಕೆ ಡಿವೋರ್ಸ್​
  ಅಂದಹಾಗೆ 1994ರಲ್ಲಿ ತನ್ವೀರ್​ ಅಹ್ಮದ್​ ಎಂಬುವರನ್ನು ಐಶ್ವರ್ಯಾ ಮದುವೆಯಾಗಿದ್ದರು. ಆದರೆ, ಮದುವೆಯಾದ ಮೂರೇ ವರ್ಷಕ್ಕೆ ದಂಪತಿ ವೈಮನಸ್ಸಿನಿಂದ ಬೇರ್ಪಟ್ಟರು. ಡಿವೋರ್ಸ್​ ಮಾಡುವುದು ಅನಿವಾರ್ಯವಾಗಿತ್ತು. ಮದುವೆಯಾದ ಆರೇ ತಿಂಗಳಿಗೆ ಅವನ ಜತೆಗಿನ ಸಂಬಂಧ ಹಳಸಿತ್ತು. ಮಗು ಒಂದೂವರೆ ವರ್ಷ ಇರುವಾಗಲೇ ನಾವಿಬ್ಬರು ಡಿವೋರ್ಸ್​ ಪಡೆದುಕೊಂಡೆವು. ಇದೀಗ ಮಾಜಿ ಪತಿ ಮತ್ತು ಆತನ ಪತ್ನಿಯ ಜತೆಗೆ ಒಳ್ಳೆಯ ಬಾಂದವ್ಯ ಇದೆ ಎಂದು ಐಶ್ವರ್ಯಾ ಹೇಳಿದ್ದಾರೆ.

  ಮಗಳಿಗಾಗಿ ನನ್ನ ಬದುಕು
  ನಾನು ಮದ್ಯಕ್ಕಾಗಲಿ ಅಥವಾ ನನಗಾಗಲಿ ಹಣವನ್ನು ಖರ್ಚು ಮಾಡಿಲ್ಲ. ನಾನು ನನ್ನ ಕುಟುಂಬಕ್ಕೆ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದೇನೆ. ನನ್ನ ವೃತ್ತಿ ಜೀವನದ ಅವಧಿ ಕೇವಲ ಮೂರೇ ವರ್ಷ ಇತ್ತು. ನಾನು ನಟಿಸಲು ಪ್ರಾರಂಭಿಸಿದ ಮೂರು ವರ್ಷಗಳಲ್ಲೇ ನನ್ನ ಮದುವೆಯು ಆಯಿತು. ಹೀಗಾಗಿ ನಾನು ಚಿತ್ರರಂಗವನ್ನು ತೊರೆದಿದ್ದೆ. ಪ್ರತಿಯೊಬ್ಬರೂ ತಮ್ಮ ಎರಡನೇ ಇನ್ನಿಂಗ್ಸ್‌ನಲ್ಲಿ ನಯನತಾರಾ ರೀತಿ ಸ್ಟಾರ್​ ನಾಯಕಿಯಾಗಿ ಹೊರ ಹೊಮ್ಮುವ ಅದೃಷ್ಟ ಇರುವುದಿಲ್ಲ. ನನಗೂ ಎರಡನೇ ಇನ್ನಿಂಗ್ಸ್​ ಕೈ ಹಿಡಿಯಲಿಲ್ಲ. ಸದ್ಯ ನನ್ನ ಮಗಳಿಗೆ ಉತ್ತಮವಾದದ್ದನ್ನು ನೀಡಲು ನಾನು ಬಯಸುತ್ತೇನೆ. ನಾನು ಅದಕ್ಕಾಗಿ ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಬಳಿ ಯೂಟ್ಯೂಬ್ ಚಾನೆಲ್ ಇದೆ. ಅದರ ಕೆಲಸ ಮುಗಿದ ಬಳಿಕ ಸೋಪ್ ಮಾರಾಟ ಮಾಡುತ್ತೇನೆ. ನನ್ನ ಮಗಳಿಗಾಗಿ ನಾನು ಬದುಕುತ್ತಿದ್ದೇನೆ. ಸ್ವತಂತ್ರ ವ್ಯಕ್ತಿಯಾಗಿ ಇರಲು ಹೆಮ್ಮೆ ಇದೆ ಎಂದು ಐಶ್ವರ್ಯಾ ಈ ಹಿಂದೆ ತಿಳಿಸಿದ್ದರು. (ಏಜೆನ್ಸೀಸ್​)

  ನಾಯಿ ರೀತಿ ಇರುತ್ತೇನೆಂದರು, ರೂಮಿಗೆ ಕರೆದರು… ಹಲವು ವರ್ಷಗಳ ಬಳಿಕ ನಟಿ ಲಕ್ಷ್ಮೀ ರಹಸ್ಯ ಬಯಲು

  ಕ್ಷಮಿಸು ಅಮ್ಮ… ನನಗೆ ಗೊತ್ತಿಲ್ಲದೆ ದೊಡ್ಡ ತಪ್ಪು ಮಾಡಿದೆ: ಹಿರಿಯ ನಟಿ ಲಕ್ಷ್ಮೀ ಪುತ್ರಿ ಐಶ್ವರ್ಯಾ ಕಣ್ಣೀರು

  ಇಂಗ್ಲಿಷ್​ನಲ್ಲಿ​ ಮಾತನಾಡುವ ವಿಡಿಯೋ ಟ್ರೋಲ್​: ತೆಲುಗು ಮೂಲದ ಹಾಲಿವುಡ್​ ನಟಿ ಆವಂತಿಕಾ ಉತ್ತರ ಹೀಗಿತ್ತು…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts