More

    ಪ್ರಧಾನಿ ಮೋದಿ ಚಾಲನೆ ನೀಡಿದ ವಂದೇ ಭಾರತ್​​​‌ನ ವಿಶೇಷಗಳಿವು… ಪ್ರವಾಹಕ್ಕೂ ಜಗ್ಗದ ರೈಲು ಇದು!

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ, ಬೆಂಗಳೂರು- ಮೈಸೂರು- ಚೆನ್ನೈ ನಡುವೆ ಸಂಚರಿಸುವ ವಂದೇ ಭಾರತ್​​​ ಎಕ್ಸ್​​ಪ್ರೆಸ್​​​ ವಿಶೇಷ ರೈಲಿಗೆ ಚಾಲನೆ ನೀಡಿದ್ದಾರೆ.

    ಈ ವಂದೇ ಭಾರತ್​​​ ರೈಲು ಹಲವು ವಿಶೇಷತೆಗಳಿಂದ ಕೂಡಿದೆ. ಸ್ವದೇಶಿ ನಿರ್ಮಿತ, ಅತಿ ವೇಗದಲ್ಲಿ ಸಂಚರಿಸುವ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸ್ವಯಂ ಚಾಲಿತ ರೈಲು 140 ಸೆಕೆಂಡ್​​​ಗಳಲ್ಲಿ 160 ಕಿ.ಮೀ. ವೇಗವರ್ಧನೆ ಹೊಂದಿದೆ. 3.5 ರೈಡಿಂಗ್​​ ಇಂಡೆಕ್ಸ್​​​​ ಇರುವುದರಿಂದ ದೂರ ಪ್ರಯಾಣವನ್ನೂ ಆರಾಮವಾಗಿ ಮಾಡಬಹುದು. ಈ ಸಂಖ್ಯೆಯ ರೈಡಿಂಗ್​​ ಇಂಡೆಕ್ಸ್​​​ ಪ್ರಯಾಣಿಕರ ಕಂಫರ್ಟ್​​​ ಲೆವೆಲ್​​ ಅನ್ನು ಸೂಚಿಸುತ್ತದೆ.

    ವಿಶ್ವದರ್ಜೆ ಪ್ರಯಾಣಿಕರ ಎಲ್ಲ ಸೌಕರ್ಯಗಳು ವಂದೇ ಭಾರತ್​​​​​ ಎಕ್ಸ್​​ಪ್ರೆಸ್​​​​ನಲ್ಲಿವೆ. ಎಕ್ಸಿಕ್ಯೂಟಿವ್ ಕೋಚ್ ಸೀಟ್, 180 ಡಿಗ್ರಿ ತಿರುಗುವ ಆಸನಗಳು, ಸ್ವಯಂ ಚಾಲಿತ ಪ್ಲಗ್ ಬಾಗಿಲುಗಳು ಹಾಗೂ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಗಳಿವೆ.

    ದಕ್ಷಿಣ ಭಾರತದ ಮೊದಲ, ದೇಶದ ಐದನೆ ವಂದೇ ಭಾರತ್​​​ ರೈಲು ಇದು. ಇದರಲ್ಲಿ ಅಂಗವಿಕಲ ಪ್ರಯಾಣಿಕರಿಗಾಗಿ (Disabled Passengers) ವಿಶೇಷ ಶೌಚಾಲಯ, ಆರ್ಗ್ಯಾನಿಕ್​​​​ (ಜೈವಿಕ) ಶೌಚಾಲಯ ಹೊಂದಿದೆ. ಆಸನಗಳ ಹಿಡಿಕೆಗಳಲ್ಲಿ ಬ್ರೈಲ್ ಅಕ್ಷರ (ಅಂಧರ ಲಿಪಿ) ಇರುತ್ತವೆ. ಇದರಿಂದ ಅಂಧರು ತಮ್ಮ ಸೀಟ್ ಸಂಖ್ಯೆಯನ್ನು ಸುಲಭವಾಗಿ ಗುರುತಿಸಬಹುದು.

    ಇನ್ನು, ಪ್ರತಿ ಕೋಚ್​​​​ನಲ್ಲಿ 23 ಇಂಚಿನ ಪ್ರಯಾಣದ ಮಾಹಿತಿ ಮತ್ತು ಇನ್ಫೋಟೈನ್ ಮೆಂಟ್ ಸಿಸ್ಟಂ- ಸ್ವರ್ಶ ಸಂವೇದಿ- ಬ್ಲ್ಯೂಟೂತ್​​​​, ಅಡ್ಜಸ್ಟೆಬಲ್​​ ಪವರ್ ಸೀಟ್ಸ್​​​​​ನಂತಹ ಆಧುನಿಕ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಎರಡನೇ ಹಂತದ ಸುರಕ್ಷತಾ ಏಕೀಕರಣ ಪ್ರಮಾಣಪತ್ರವಿರುವ ರೈಲಿನಲ್ಲಿ ಕವಚ್ (ರೈಲು ಘರ್ಷಣೆ ತಪ್ಪಿಸುವ ವ್ಯವಸ್ಥೆ) ಅನ್ನು ಪರಿಚಯಿಸಲಾಗಿದೆ.

    ಇನ್ನುಳಿದಂತೆ, ಪ್ರತಿ ಕೋಚ್​​​ನಲ್ಲೂ ತುರ್ತು ಬೆಳಕಿನ ವ್ಯವಸ್ಥೆ, ಬೋಗಿಯ ಹೊರಗೆ ರಿಯಲ್ ವ್ಯೂ ಕ್ಯಾಮೆರಾ, ನಾಲ್ಕು ಪ್ಲಾಟ್ ಫಾರ್ಮ್ ಸೈಡ್ ಕ್ಯಾಮೆರಾ, ಫೈರ್ ಡಿಟೆಕ್ಷನ್ ಮತ್ತು ಸಪ್ರೆಶನ್ ಸಿಸ್ಟಂ, ಪ್ರತಿ ಕೋಚ್​​​​ನಲ್ಲೂ ನಾಲ್ಕು ತುರ್ತು ಕಿಟಕಿ, ತುರ್ತು ಟಾಕ್ ಬ್ಯಾಕ್ ಘಟಕಗಳಂತಹ ವಿಶೇಷ ಸೌಲಭ್ಯಗಳಿವೆ.

    ತುರ್ತು ಟಾಕ್ ಬ್ಯಾಕ್ ಘಟಕದಿಂದ (Emergency Talk Back System) ಧ್ವನಿ ರೆಕಾರ್ಡಿಂಗ್ ಸೌಲಭ್ಯದೊಂದಿಗೆ ಚಾಲಕ ಮತ್ತು ಗಾರ್ಡ್ ಸಂವಹನ ವ್ಯವಸ್ಥೆ ಇದೆ. ಅಂದರೆ, LCD ಆಧಾರಿತ ಎರಡು ಯೂನಿಟ್​​​ಗಳಿರುತ್ತವೆ. ಒಂದು ETB ಕನ್ಸೋಲ್​​​ ಮತ್ತೊಂದು ETB ಪ್ಯಾಸೆಂಜರ್ ಯೂನಿಟ್​​. ಇಟಿಬಿ ಪ್ಯಾಸೆಂಜರ್ ಯೂನಿಟ್​​​ನಲ್ಲಿ ತುರ್ತು ಸಂದರ್ಭ ಬಂದಾಗ ಪ್ರಯಾಣಿಕರು ಎಮರ್ಜೆನ್ಸಿ ಸ್ವಿಚ್​​​ ಅನ್ನು ಸುಲಭವಾಗಿ ಒತ್ತಬಹುದು. ಇದರಿಂದ ಟ್ರೇನ್​​​​ ಗಾರ್ಡ್​​​​ ಅಥವಾ ಡ್ರೈವರ್​​​ ಜತೆ ತಕ್ಷಣ ಮಾತನಾಡಬಹುದು. ಇಷ್ಟೆಲ್ಲಾ ಐಷಾರಾಮಿ, ಸುಸಜ್ಜಿತ ವ್ಯವಸ್ಥೆಯೊಂದಿಗೆ 650 ಮಿ.ಮೀ. ಎತ್ತರದವರೆಗಿನ ಪ್ರವಾಹವನ್ನು ತಡೆಯುವ ಫ್ಲಡ್ ಪ್ರೂಫಿಂಗ್ ವ್ಯವಸ್ಥೆ ಇರುವುದು, ವಿಶೇಷಗಳಲ್ಲೇ ವಿಶೇಷ ಎಂದೂ ಹೇಳಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts