More

    ನಾಡಪ್ರಭು ಕೆಂಪೇಗೌಡರ ಬೃಹತ್​ ಪುತ್ಥಳಿ ಅನಾವರಣ: ‘ಪ್ರಗತಿ’ಯ ಪ್ರತಿಮೆಗೆ ನಮಿಸಿದ ಮೋದಿ

    ಬೆಂಗಳೂರು: ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ಬೃಹತ್​ ಪುತ್ಥಳಿಯನ್ನು ಇಂದು(ಶುಕ್ರವಾರ)ಪ್ರಧಾನಿ ನರೇಂದ್ರ ಮೋದಿ ಅನಾವರಣ ಮಾಡಿದರು. ಕೆಂಪೇಗೌಡರ ಪ್ರತಿಮೆಯನ್ನ ‘ಪ್ರಗತಿ’ಯ ಅನಾವರಣ, ‘ಅಭಿವೃದ್ಧಿ’ಗೆ ಪ್ರೇರಣೆ, ಪ್ರಗತಿಯ ಪ್ರತಿಮೆ ಎಂದೇ ಬಣ್ಣಿಸಲಾಗಿದೆ.

    ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರ ಪ್ರತಿಮೆಯನ್ನು 84 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗಿದೆ. ನಾಡಪ್ರಭು ಕೆಂಪೇಗೌಡ ಪ್ರತಿಮೆ 108 ಅಡಿ ಎತ್ತರವಿದೆ. ಪಕ್ಕದಲ್ಲೇ 23 ಎಕರೆಯಲ್ಲಿ ಥೀಮ್​ ಪಾರ್ಕ್​ ಕೂಡ ನಿರ್ಮಾಣವಾಗುತ್ತಿದೆ. ಅಹಮದಾಬಾದ್​ನಲ್ಲಿರುವ ವಲ್ಲಭಭಾಯಿ ಪಟೇಲ್​ ಅವರ ಐಕ್ಯತಾ ಮೂರ್ತಿ, ಅಂಬೇಡ್ಕರ್​ ಅವರ ಅತಿ ಎತ್ತರದ ಮೂರ್ತಿ ನಿರ್ಮಿಸಿದ ಶ್ರೇಷ್ಠ ಶಿಲ್ಪಿ ರಾಮ್​ ಸುತಾರ್​ ಅವರೇ ಕೆಂಪೇಗೌಡರ ಪ್ರಗತಿ ಪ್ರತಿಮೆಯನ್ನೂ ನಿರ್ಮಿಸಿದ್ದಾರೆ.

    ನಾಡಪ್ರಭು ಕೆಂಪೇಗೌಡರ ಬೃಹತ್​ ಪುತ್ಥಳಿ ಅನಾವರಣ: 'ಪ್ರಗತಿ'ಯ ಪ್ರತಿಮೆಗೆ ನಮಿಸಿದ ಮೋದಿ

    ಬೆಂಗಳೂರು ಎಂಬ ಜಾಗತಿಕ ನಗರಕ್ಕೆ ಅಡಿಪಾಯ ಹಾಕಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತೆ. ‘ಕೆರೆಗಳನ್ನು ನಿರ್ಮಿಸಿ ಮರಗಳನ್ನು ಬೆಳೆಸಿ’ ಎಂಬುದು ಅವರ ಆಡಳಿತ ಮಂತ್ರವಾಗಿತ್ತು ಅವರ ದೂರದೃಷ್ಟಿಯ ಫಲವನ್ನ ಬೆಂಗಳೂರಿನ ಜನ ಇಂದಿಗೂ ಪಡೆಯುತ್ತಿದ್ದಾರೆ. ನಮ್ಮ ಮಹಾಪುರುಷರನ್ನ ಅಮರಗೊಳಿಸುವ ಯತ್ನ, ಅವರ ಹಿರಿಮೆ ಮತ್ತು ಪರಂಪರೆಯನ್ನ ಸಾರುತ್ತೆ ಈ ಪ್ರತಿಮೆ.

    ಟರ್ಮಿನಲ್​-2 ಉದ್ಘಾಟನೆ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮನ ಸೆಳೆಯುತ್ತಿದೆ ವಿನ್ಯಾಸ…

    ಟ್ರೋಲಿಗರನ್ನ ಕೆಣಕುತ್ತಲೇ ಹೊಸ ವಿಷಯ ಘೋಷಣೆ ಮಾಡಿದ ಡ್ರೋನ್​ ಪ್ರತಾಪ್​! ಅಷ್ಟೇ ಅಲ್ಲ, ಆಸಕ್ತರಿಗೆ ಸಂಪರ್ಕಿಸಲೂ ಕರೆ ನೀಡಿದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts