More

    ಟರ್ಮಿನಲ್​-2 ಉದ್ಘಾಟನೆ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮನ ಸೆಳೆಯುತ್ತಿದೆ ವಿನ್ಯಾಸ…

    ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್​- 2 ಅನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದರು.

    “ಹಸಿರು ಬಂಗಾರ’ ಎಂದೇ ಕರೆಯಲಾಗುವ ಬಿದಿರನ್ನು ಬಳಸಿ ಅತ್ಯಂತ ಆಕರ್ಷಕವಾಗಿ ಟರ್ಮಿನಲ್​-1 ಅನ್ನು 5 ಸಾವಿರ ಕೋಟಿ ರೂ. ವೆಚ್ಚದಲ್ಲಿ ವಿನ್ಯಾಸ ಮಾಡಲಾಗಿದೆ. ಇದರ ಒಳಾಂಗಣ ಸೌಂದರ್ಯಕ್ಕೆ ಪ್ರಧಾನಿ ಮನಸೋತರು. ಕೃತಕ ಮರಗಿಡಗಳು, ಹಕ್ಕಿಗಳ ಚಿಲಿಪಿಲಿ ಕಲರವ ಮನಸೆಳೆಯುತ್ತಿವೆ.

    ಟರ್ಮಿನಲ್​- 2 ವಿನ್ಯಾಸದ ಮಾಹಿತಿ
    – ಬಿದಿರಿನ ವೆಚ್ಚ ಅಂದಾಜು 200 ಕೋಟಿ ರೂ.
    – 40 ಮತ್ತು 60 ಮತ್ತು 80 ಮಿಮೀ ವ್ಯಾಸದ ಕ್ಯೂಟಿ 2,40,000 ಆರ್​ಎಂಟಿ ಬಿದಿರಿನ ಕಂಬಗಳು ಮತ್ತು 84,000 ಚದರ ಮೀಟರ್​ ಸೀಲಿಂಗ್​.
    – ಚೀನಾದಿಂದ ಬಿದಿರು ತರಿಸಲಾಗಿದೆ.
    – ಬಳಸಿರುವ ಬಿದಿರು ಇಂಜಿನಿಯಾರ್ಡ್​ ಬಿದಿರು
    – ಒಳಾಂಗಣ ವಿನ್ಯಾಸ 2.55 ಲಕ್ಷ ಚದುರ ಮೀಟರ್​

    ಟರ್ಮಿನಲ್​-2 ಉದ್ಘಾಟನೆ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮನ ಸೆಳೆಯುತ್ತಿದೆ ವಿನ್ಯಾಸ...

    ಚೀನಾದ ಬಿದಿರು: ಕೆಐಎ ಟರ್ಮಿನಲ್​- 2 ಅನ್ನು ನಿರ್ಮಿಸಲು ಬಳಸಲಾದ ಸೀಲಿಂಗ್​ ಮತ್ತು ಕಾಲಮ್​ಗಳಿಗೆ ಕ್ಲಾಡಿಂಗ್​ನಂತಹ ಉತ್ತಮ ಗುಣಮಟ್ಟದ ಬಿದಿರನ್ನು ಬಳಸಲಾಗಿದೆ. ಬಿದಿರಿನ ನಿರ್ಮಾಣ ಟಕಗಳನ್ನು ಚೀನಾದಿಂದ ಖರೀದಿಸಲಾಗಿದೆ. ರ್ಟಮಿನಲ್​& 2 ನಿರ್ಮಾಣಕ್ಕಾಗಿ ಗುತ್ತಿಗೆದಾರರಾದ ಎಲ್​ ಆ್ಯಂಡ್​ ಟಿ ಸಂಸ್ಥೆಯು ಉಪ ಗುತ್ತಿಗೆದಾರರಾದ ಲಿಂಡ್​ನೆರ್​ ಎಂಬ ಜರ್ಮನ್​ ಕಂಪನಿಯು ಸರಬರಾಜು ಮಾಡಿದೆ. ಬೆಂಗಳೂರಿನ ನವೋದ್ಯಮವಾದ ಬ್ಯಾಂಬೂಸ್​ ಫರ್ನ್​ ಬ್ಯಾಂಬು ಸಹ ವಿನ್ಯಾಸ ರೂಪಿಸುವಲ್ಲಿ ಕೆಲಸ ಮಾಡಿದೆ.

    ಟರ್ಮಿನಲ್​-2 ಉದ್ಘಾಟನೆ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮನ ಸೆಳೆಯುತ್ತಿದೆ ವಿನ್ಯಾಸ...

    ಅಮೆರಿಕದ ಸಂಸ್ಥೆ ವಿನ್ಯಾಸ: ಈ ಯೋಜನೆಯನ್ನು ಅಮೆರಿಕದ ವಾಸ್ತುಶಿಲ್ಪ ಸಂಸ್ಥೆ ಎಸ್​ಒಎಂ ವಿನ್ಯಾಸಗೊಳಿಸಿದೆ. ದುಬೈನ ಬುರ್ಜ್​ ಖಲೀಫಾವನ್ನು ವಿನ್ಯಾಸಗೊಳಿಸಿದ್ದು ಸಹ ಇದೇ ಸಂಸ್ಥೆ ಎಂಬುದು ಗಮನಾರ್ಹ. ದೇಶೀಯ ಬಿದಿರು ಉದ್ಯಮದಲ್ಲಿ ಹಲವು ಸಂಸ್ಥೆಗಳು ಬಿದಿರಿನ ನಿರ್ಮಾಣ, ಪೀಠೋಪಕರಣ ತಯಾರಿಕೆ ಮತ್ತು ಜೀವನಶೈಲಿ ಬಿಡಿಭಾಗಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ.

    ಟರ್ಮಿನಲ್​-2 ಉದ್ಘಾಟನೆ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮನ ಸೆಳೆಯುತ್ತಿದೆ ವಿನ್ಯಾಸ...

    ಬಿದಿರನ್ನು ರೈತರ ಆದಾಯ ದುಪ್ಪಟ್ಟು ಮಾಡುವ ಉದ್ದೇಶದಿಂದ ಕೃಷಿ ಬೆಳೆಯನ್ನಾಗಿ ರೂಪಿಸಲಾಗಿದೆ. ಟರ್ಮಿನಲ್-2ರ ವಿನ್ಯಾಸ ರೈತರಲ್ಲಿ ಬಿದಿರಿನ ಬಗ್ಗೆ ಆಸಕ್ತಿಯನ್ನು ಹೆಚ್ಚಿಸಲಿದೆ ಎಂದೇ ನಿರೀಕ್ಷೆ ಮಾಡಲಾಗುತ್ತಿದೆ. ಮುಂಬೈ ನಂತರ ಟರ್ಮಿನಲ್​ ಅನ್ನು ಸಂಪೂರ್ಣವಾಗಿ ಬಿದಿರಿನಿಂದ ಸಿಂಗರಿಲಾಗಿದೆ. ದೇಶದ ರೈತರಿಗೆ ಸುವರ್ಣ ಯುಗವನ್ನು ಪ್ರಾರಂಭಿಸುವ ಸಾಧ್ಯತೆಯ ವಿಶ್ವಾಸ ಮೂಡಿಸಿದೆ.

    ಟರ್ಮಿನಲ್​-2 ಉದ್ಘಾಟನೆ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮನ ಸೆಳೆಯುತ್ತಿದೆ ವಿನ್ಯಾಸ...

    ಪ್ರಧಾನಿ ಕಾರ್ಯಕ್ರಮಕ್ಕೆ ಬರುವವರಿಗೆ ಭೋಜನ ವ್ಯವಸ್ಥೆ; ಏನೇನಿದೆ ‘ಮೆನು’ನಲ್ಲಿ?

    ಟ್ರೋಲಿಗರನ್ನ ಕೆಣಕುತ್ತಲೇ ಹೊಸ ವಿಷಯ ಘೋಷಣೆ ಮಾಡಿದ ಡ್ರೋನ್​ ಪ್ರತಾಪ್​! ಅಷ್ಟೇ ಅಲ್ಲ, ಆಸಕ್ತರಿಗೆ ಸಂಪರ್ಕಿಸಲೂ ಕರೆ ನೀಡಿದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts