More

    ಪ್ರಧಾನಿ ಕಾರ್ಯಕ್ರಮಕ್ಕೆ ಬರುವವರಿಗೆ ಭೋಜನ ವ್ಯವಸ್ಥೆ; ಏನೇನಿದೆ ‘ಮೆನು’ನಲ್ಲಿ?

    ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಏರ್ಪೋರ್ಟ್ ಬಳಿ ಇಂದು ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣ ಮಾಡಲಿದ್ದಾರೆ. ಈ ಸಮಾರಂಭಕ್ಕೆ ಬರುವ ಲಕ್ಷಾಂತರ ಜನರಿಗಾಗಿ ಮಧ್ಯಾಹ್ನದ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಮಧ್ಯಾಹ್ನ 12.45ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಇನ್ನೊಂದೆಡೆ ಭೋಜನ ವ್ಯವಸ್ಥೆ ಇರಲಿದೆ. ಬೆಳಗ್ಗೆಯಿಂದಲೇ ಜನ ಆಗಮಿಸುವ ಕಾರಣ ಬೆಳಗಿನ ತಿಂಡಿಗೂ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆಗೆ ಟೊಮ್ಯಾಟೊ ಬಾತ್, ಮೊಸರು ಬಜ್ಜಿ, ಮೈಸೂರು ಪಾಕ್ ಸಿದ್ಧವಾಗಿವೆ. ಮಧ್ಯಾಹ್ನದ ಊಟಕ್ಕೆ ಪಲಾವ್, ಮೊಸರು ಬಜ್ಜಿ, ಮೊಸರನ್ನ, ಪಚಡಿ, ಮೈಸೂರು ಪಾಕ್ ಮುಂತಾದವುಗಳನ್ನು ಸಿದ್ಧಪಡಿಸಲಾಗಿದೆ.

    ಬೆಳಗ್ಗೆ 50,000 ಸಾವಿರ ಜನರಿಗೆ ತಿಂಡಿ ವ್ಯವಸ್ಥೆ, ಮಧ್ಯಾಹ್ನ 4 ಲಕ್ಷ ಜನರಿಗೆ ಊಟದ ವ್ಯವಸ್ಥೆ ಆಗಿದೆ. ವೇದಿಕೆ ಬಳಿ ಕುಳಿತುಕೊಳ್ಳುವ ಸಾರ್ವಜನಿಕರಿಗೆ ಸಿಹಿ ಚಿಕ್ಕಿ, ಮಜ್ಜಿಗೆ, ನೀರನ್ನೂ ಕೊಡಲಾಗುತ್ತದೆ.

    ವಂದೇ ಭಾರತ್​ ಎಕ್ಸ್​ಪ್ರೆಸ್​, ಭಾರತ್ ಗೌರವ್ ಕಾಶಿ ದರ್ಶನ್ ರೈಲುಗಳಿಗೆ ಚಾಲನೆ ನೀಡಿದ ಮೋದಿ

    ಟ್ರೋಲಿಗರನ್ನ ಕೆಣಕುತ್ತಲೇ ಹೊಸ ವಿಷಯ ಘೋಷಣೆ ಮಾಡಿದ ಡ್ರೋನ್​ ಪ್ರತಾಪ್​! ಅಷ್ಟೇ ಅಲ್ಲ, ಆಸಕ್ತರಿಗೆ ಸಂಪರ್ಕಿಸಲೂ ಕರೆ ನೀಡಿದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts