More

    ಮೋದಿಯವರದ್ದು ಶೂನ್ಯ ಭ್ರಷ್ಠಾಚಾರ

    ಹುಬ್ಬಳ್ಳಿ : ನರೇಂದ್ರ ಮೋದಿಯವರು 10 ವರ್ಷಗಳ ಕಾಲ ಪ್ರಧಾನಮಂತ್ರಿ ಯಾಗಿ ಕೆಲಸ ಮಾಡಿದ್ದಾರೆ. ಈ 10 ವರ್ಷಗಳಲ್ಲಿ ಪ್ರತಿಪಕ್ಷಗಳು ಮೋದಿ ವಿರುದ್ಧ ಕನಿಷ್ಠ ಮಟ್ಟದ ಭ್ರಷ್ಟಾಚಾರದ ಆರೋಪವನ್ನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಹೇಳಿದರು.

    ಇಲ್ಲಿನ ಹೂಗಾರ ಓಣಿಯಲ್ಲಿ ಬುಧವಾರ ಆಯೋಜಿಸಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರಮುಖವಾಗಿ ಪೊಲಿಟಿಕಲ್ ಭ್ರಷ್ಟಾಚಾರವನ್ನು ತೊಡೆದು ಹಾಕುತ್ತಿದೆ ಎಂದು ಹೇಳಿದ ಜೋಶಿ, ಪಾರದರ್ಶಕ ಕೆಲಸ ನಿರ್ವಹಣೆಯೊಂದಿಗೆ ಮೋದಿಯವರು ದೇಶದಲ್ಲೇ ಮಾದರಿಯಾಗಿದ್ದಾರೆ ಎಂದರು.

    ಕೇಂದ್ರ ಸಚಿವ ಸಂಪುಟದ ಯಾವುದೇ ಸಚಿವರು ಭ್ರಷ್ಟಾಚಾರದಲ್ಲಿ ತೊಡಗದೆ ನಿಷ್ಕಲ್ಮಶ, ನಿಷ್ಕಳಂಕ ಆಡಳಿತ ನೀಡಿದ್ದೇವೆ. ಯಾವೊಬ್ಬ ಸಚಿವರ ಮೇಲೂ ಭ್ರಷ್ಟಾಚಾರದ ಆರೋಪವಿಲ್ಲ. ಮುಂದೆಯೂ ಬಿಜೆಪಿ ಸರ್ಕಾರ ಇದೇ ಮಾದರಿ ಸ್ವಚ್ಛ ಆಡಳಿತ ನೀಡುತ್ತದೆ ಎಂದು ಪ್ರತಿಪಾದಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸುರಕ್ಷತೆ, ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಅದನ್ನು ಮುಂದುವರೆಸಲು ಮತ್ತೊಮ್ಮೆ ಆಶೀರ್ವದಿಸಿ ಎಂದು ಜೋಶಿ ಮನವಿ ಮಾಡಿದರು.

    ಹುಬ್ಬಳ್ಳಿಯಲ್ಲಿ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಕಿಮ್್ಸ ಕಟ್ಟಡ, ಹೆದ್ದಾರಿ ಹೀಗೆ ನಾನಾ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಂಡಿವೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾಗೋ ಸೇವೆ ಆರಂಭಿಸುವ ಗುರಿ ಇದ್ದು, ಇದರಿಂದ ಇಲ್ಲಿಯ ಹೂವು-ತರಕಾರಿ ಇತ್ಯಾದಿ ಬೆಳೆಗಳನ್ನು ದೇಶ-ವಿದೇಶಿ ಮಾರುಕಟ್ಟೆಗೆ ಸಾಗಿಸಿ ರೈತರನ್ನು ಮತ್ತಷ್ಟು ಆರ್ಥಿಕ ಸದೃಢರನ್ನಾಗಿ ಮಾಡುವ ಯೋಜನೆ ಹೊಂದಿರುವುದಾಗಿ ಪ್ರಲ್ಹಾದ ಜೋಶಿ ಹೇಳಿದರು.

    ಲೋಕಸಭೆ ಚುನಾವಣೆ ಪ್ರಚಾರಕ್ಕೆ ಹೋದಲ್ಲೆಲ್ಲ ಜನರಿಂದ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ನಾಮಪತ್ರ ಸಲ್ಲಿಕೆ ವೇಳೆ ಸಹ ಜನರು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಉತ್ತಮ ಸ್ಪಂದನೆ ತೋರಿದ್ದಾರೆ. ಅವರ ಈ ನಿಷ್ಠೆಗೆ ಚ್ಯುತಿ ಬಾರದಂತೆ ನಡೆದುಕೋಳ್ಳುತ್ತೇನೆ ಎಂದು ಭರವಸೆ ನೀಡಿದರು.

    ಇದಕ್ಕೂ ಮೊದಲು ಶ್ರೀ ರಾಮನವಮಿ ನಿಮಿತ್ತ ಶ್ರೀ ರಾಮ ಮೂರ್ತಿಗೆ ಪೂಜೆ ಸಲ್ಲಿಸಿ, ಸಕಲರಿಗೂ ಪ್ರಭು ಶ್ರೀರಾಮ ಸನ್ಮಂಗಳವನ್ನುಂಟುಮಾಡಲಿ ಎಂದೂ ಪ್ರಾರ್ಥಿಸಿದರು.

    ಮಾಜಿ ಶಾಸಕ ಅಶೋಕ ಕಾಟವೆ, ಮುಖಂಡರಾದ ಬಸವರಾಜ ಚಿಕ್ಕಮಠ, ಡಾ. ಕ್ರಾಂತಿಕಿರಣ, ಶಿವಾನಂದ ಹೊಸೂರ, ಸಿದ್ರಾಮಪ್ಪ ಬಾಳಿಕಾಯಿ, ವೀರಭದ್ರಪ್ಪ ಬಾಳಿಕಾಯಿ, ಈರಣ್ಣ ಜಡಿ, ನೀಲಕ್ಕ ಎತ್ತಿನಮಠ, ರಂಗಾ ಬದ್ದಿ, ವಿಜಯಲಕ್ಷ್ಮಿ ಎಮ್ಮಿ, ಗುರುಸಿದ್ದಮ್ಮ ಸಾಲಿಮಠ, ಪೂಜಾ ರಾಯಕರ್ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts