More

    ರೂ 2,800 ಕೋಟಿಯ ರಾಕೆಟ್ ಲಾಂಚರ್‌ ಖರೀದಿಗೆ ರಕ್ಷಣಾ ಸಚಿವಾಲಯ ಅನುಮತಿ; ಈ ಷೇರುಗಳಿಗೆ ಸಿಗಲಿದೆ ಲಾಭ…

    ಮುಂಬೈ:  ಭಾರತೀಯ ಸೇನೆಯ ಕ್ಷಿಪಣಿ ಸಾಮಥ್ರ್ಯವನ್ನು ಬಲಪಡಿಸಲು 2,800 ಕೋಟಿ ರೂಪಾಯಿ ಮೌಲ್ಯದ ಪಿನಾಕಾ ಮಲ್ಟಿ ಬ್ಯಾರೆಲ್ ರಾಕೆಟ್ ಲಾಂಚರ್ ಸಿಸ್ಟಮ್‌ಗಳಿಗಾಗಿ ಅಂದಾಜು 6,400 ರಾಕೆಟ್‌ಗಳನ್ನು ಖರೀದಿಸುವ ಪ್ರಸ್ತಾವನೆಯನ್ನು ರಕ್ಷಣಾ ಸಚಿವಾಲಯ ಅನುಮೋದಿಸಿದೆ.

    ಪಿನಾಕಾ ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್ (MBRL) ಭಾರತದಲ್ಲಿ ಉತ್ಪಾದಿಸುವ ಬಹು ರಾಕೆಟ್ ಲಾಂಚರ್ ಆಗಿದ್ದು, ಭಾರತೀಯ ಸೇನೆಗಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಇದನ್ನು ಅಭಿವೃದ್ಧಿಪಡಿಸುತ್ತದೆ.

    ಈ ರಾಕೆಟ್​ ಲಾಂಚರ್​ನ ಮಾರ್ಕ್-1 ಆವೃತ್ತಿಯು ಗರಿಷ್ಠ 40 ಕಿಮೀ ಅಂತರದ ವ್ಯಾಪ್ತಿಯನ್ನು ಹೊಂದಿದ್ದು, ಇದರ ಸುಧಾರಿತ ಆವೃತ್ತಿಯು 120 ಕಿಮೀ ವ್ಯಾಪ್ತಿ ಅಂತರ ಹೊಂದಿದೆ. 44 ಸೆಕೆಂಡುಗಳಲ್ಲಿ ಇದು 12 ರಾಕೆಟ್‌ಗಳನ್ನು ಉಡಾಯಿಸುವ ಸಾಮಥ್ರ್ಯ ಹೊಂದಿದೆ. ಪಿನಾಕಾ MBRL ಅನ್ನು ಟಟ್ರಾ ಟ್ರಕ್‌ನಲ್ಲಿ ಅಳವಡಿಸಿ ಸಾಗಿಸಬಹುದಾಗಿದೆ. ಹೀಗಾಗಿ, ಪರ್ವತದ ತುದಿಗಳಲ್ಲಿ, ವಿಶೇಷವಾಗಿ ಪಾಕಿಸ್ತಾನಿ ನೆಲೆಗಳನ್ನು ಗುರಿಯಾಗಿಸಲು ಕಾರ್ಗಿಲ್ ಯುದ್ಧದ ಸಮಯದಲ್ಲಿ ಇದನ್ನು ಯಶಸ್ವಿಯಾಗಿ ಬಳಸಲಾಗಿದೆ.

    ಈಗ 2,800 ಕೋಟಿ ರೂಪಾಯಿ ಮೊತ್ತದಲ್ಲಿ ಪಿನಾಕಾ ಲಾಂಚರ್​ ಖರೀದಿಸುವ ಪ್ರಸ್ತಾವನೆಯನ್ನು ರಕ್ಷಣಾ ಸಚಿವಾಲಯ ಅನುಮೋದಿಸಿರುವುದರಿಂದ ಯಾವ ಕಂಪನಿಯ ಷೇರುಗಳಿಗೆ ಲಾಭ ದೊರೆಯಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಈ ಲೆಕ್ಕಾಚಾರ ಅಂದಾಜು ಒಳಗೊಂಡಿರುವ ಒಂದಿಷ್ಟು ಮಾಹಿತಿ ಇಲ್ಲಿದೆ.

    ಸೋಲಾರ್ ಇಂಡಸ್ಟ್ರೀಸ್‌:

    ಬೃಹತ್ ಸ್ಫೋಟಕಗಳು, ಪ್ಯಾಕ್ ಮಾಡಲಾದ ಸ್ಫೋಟಕಗಳು ಮತ್ತು ಗಣಿಗಾರಿಕೆ, ಮೂಲಸೌಕರ್ಯ ಮತ್ತು ನಿರ್ಮಾಣ ಕೈಗಾರಿಕೆಗಳಲ್ಲಿ ಬಳಸಲು ಪ್ರಾರಂಭಿಸುವ ವ್ಯವಸ್ಥೆಗಳ ಉತ್ಪಾದನೆಯಲ್ಲಿ ಸೋಲಾರ್ ಇಂಡಸ್ಟ್ರೀಸ್​ ಮುಂಚೂಣಿಯಲ್ಲಿದೆ.
    ಸೋಲಾರ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾದ ಎಕನಾಮಿಕ್ ಎಕ್ಸ್‌ಪ್ಲೋಸಿವ್ಸ್ ಲಿಮಿಟೆಡ್ (ಇಇಎಲ್) ಪಿನಾಕಾ ವ್ಯವಸ್ಥೆಗೆ ರಾಕೆಟ್‌ಗಳನ್ನು ತಯಾರಿಸುವ ಪ್ರಮುಖ ಸ್ಪರ್ಧಿಗಳಲ್ಲಿ ಒಂದಾಗಿದೆ.

    ಸೋಲಾರ್ ಇಂಡಸ್ಟ್ರೀಸ್‌ ಮತ್ತು ಪಿನಾಕಾ ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್ ಸಿಸ್ಟಮ್ ಅನ್ನು ಸೋಲಾರ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾದ ಎಕನಾಮಿಕ್ ಎಕ್ಸ್‌ಪ್ಲೋಸಿವ್ಸ್ ಲಿಮಿಟೆಡ್ (ಇಇಎಲ್) ಜೋಡಣೆ ಮಾಡುತ್ತದೆ. ಪಿನಾಕಾಕ್ಕಾಗಿ ರಾಕೆಟ್‌ಗಳ ಉತ್ಪಾದನೆಗೆ ಇಇಎಲ್ ಪ್ರಮುಖ ಸ್ಪರ್ಧಿಗಳಲ್ಲಿ ಒಂದಾಗಿದೆ.

    ಪಿನಾಕಾ ತಯಾರಿಕೆಯ ಈ ಒಪ್ಪಂದವು ಇಇಎಲ್​ಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ, ಇದರ ರಕ್ಷಣಾ ಉಪಸ್ಥಿತಿಯನ್ನು ಹೆಚ್ಚಿಸುತ್ತದೆ ಹಾಗೂ ವಿದೇಶಿ ಮಿಲಿಟರಿ ಉಪಕರಣಗಳ ಮೇಲಿನ ಭಾರತದ ಅವಲಂಬನೆ ಕಡಿಮೆ ಮಾಡುತ್ತದೆ.

    ಕಂಪನಿಯ ಷೇರಿನ ಬೆಲೆ ಶುಕ್ರವಾರ 6,796.80 ರೂಪಾಯಿಗೆ ಏರಿಕೆಯಾಗಿದೆ. ಕಳೆದ 6 ತಿಂಗಳಲ್ಲಿ ಈ ಷೇರಿನ ಬೆಲೆ ಅಂದಾಜು 3000 ರೂಪಾಯಿ ಹೆಚ್ಚಾಗಿದೆ.

    ಎಲ್&ಟಿ:

    ಲಾರ್ಸನ್​ ಆ್ಯಂಡ್​ ಟರ್ಬೊ ಲಿಮಿಟೆಡ್​ ಒಂದು ಬಹುರಾಷ್ಟ್ರೀಯ ಕಂಪನಿಯಾಗಿದೆ. ಪ್ರಾಥಮಿಕವಾಗಿ ಮೂಲಸೌಕರ್ಯ, ಹೈಡ್ರೋಕಾರ್ಬನ್, ವಿದ್ಯುತ್, ಕೈಗಾರಿಕೆಗಳು, ರಕ್ಷಣೆ, ಮಾಹಿತಿ ತಂತ್ರಜ್ಞಾನ, ಅಮೆರಿಕ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಣಕಾಸು ಸೇವೆಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಇಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣ ಸೇವೆಗಳನ್ನು ಒದಗಿಸುತ್ತದೆ.

    ಪಿನಾಕಾ ರಾಕೆಟ್ ವ್ಯವಸ್ಥೆ ಮತ್ತು ಭಾರತದ ರಕ್ಷಣಾ ಪರಿಸರವು ಭಾರತೀಯ ಇಂಜಿನಿಯರಿಂಗ್ ದೈತ್ಯ ಎಲ್&ಟಿಯಿಂದ ಗಮನಾರ್ಹವಾಗಿ ಪ್ರಭಾವಿತವಾಗಿದೆ. ಪಿನಾಕಾ ಲಾಂಚರ್ ಉತ್ಪಾದನೆ ರಕ್ಷಣಾ ಸಚಿವಾಲಯದೊಂದಿಗೆ ಈ ಸಂಸ್ಥೆಯು ಸಹಕರಿಸುತ್ತದೆ.

    ಭಾರತ್ ಡೈನಾಮಿಕ್ಸ್ ಲಿಮಿಟೆಡ್:

    ಭಾರತ್ ಡೈನಾಮಿಕ್ಸ್ (BDL), ಭಾರತ ಸರ್ಕಾರದ ಉದ್ಯಮವಾಗಿದೆ. ಇದು ಕ್ಷಿಪಣಿಗಳು ಮತ್ತು ಇತರ ರಕ್ಷಣಾ ಸಾಧನಗಳನ್ನು ತಯಾರಿಸುತ್ತದೆ.

    ಪಿನಾಕಾ ವ್ಯವಸ್ಥೆಯು ವೈವಿಧ್ಯಮಯ ಶ್ರೇಣಿ ಮತ್ತು ಪೇಲೋಡ್‌ನೊಂದಿಗೆ ಹಲವಾರು ವಿಧದ ರಾಕೆಟ್‌ಗಳನ್ನು ಬಳಸುತ್ತದೆ. ಬಿಡಿಎಲ್​ ಈ ಎಲ್ಲಾ ರಾಕೆಟ್‌ಗಳನ್ನು ತಯಾರಿಸುತ್ತದೆ, ಪಿನಾಕಾ ವ್ಯವಸ್ಥೆಯನ್ನು ಸುಧಾರಿಸಲು ನಿರಂತರವಾಗಿ ಬಿಡಿಎಲ್ ಕೆಲಸ ಮಾಡುತ್ತಿದೆ. ಬಿಡಿಎಲ್​ ಷೇರಿನ ಬೆಲೆಯು 1,522.90 ರೂಪಾಯಿ ತಲುಪಿದೆ. ಕಳೆದ 6 ತಿಂಗಳಲ್ಲಿ 310.05 ರೂ. ಹೆಚ್ಚಳ ದಾಖಲಿಸಿದೆ.

    ಹಿಂದೂಸ್ತಾನ್ ಏರೋನಾಟಿಕ್ಸ್:

    ಎಚ್​ಎಎಲ್​ ವಿವಿಧ ಉಡಾವಣಾ ವಾಹನ ಉಪವ್ಯವಸ್ಥೆಗಳು ಮತ್ತು ಘಟಕಗಳನ್ನು ತಯಾರಿಸುತ್ತದೆ, ಉದಾಹರಣೆಗೆ ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್‌ನ ಹೈಡ್ರಾಲಿಕ್ಸ್, ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಘಟಕಗಳನ್ನು ತಯಾರಿಸುತ್ತದೆ.

    ರಾಕೆಟ್‌ಗಳನ್ನು ತಮ್ಮ ಗುರಿಗಳಿಗೆ ಮಾರ್ಗದರ್ಶನ ಮಾಡುವ ಅಗ್ನಿ ನಿಯಂತ್ರಣ ವ್ಯವಸ್ಥೆಯ ಅಭಿವೃದ್ಧಿ ಮತ್ತು ಉತ್ಪಾದನೆಗೆ ಎಚ್​ಎಎಲ್​ ಕೊಡುಗೆ ನೀಡುತ್ತದೆ. ಪಿನಾಕಾ ರಾಕೆಟ್‌ಗಳನ್ನು ಲೋಡ್ ಮಾಡಲು, ಗುರಿ ಮತ್ತು ಹಾರಿಸಲು ಬಳಸುವ ವಿವಿಧ ಬೆಂಬಲ ಸಾಧನಗಳನ್ನು ಸಹ ಎಚ್​ಎಎಲ್​ ತಯಾರಿಸುತ್ತದೆ.

    ನೇರವಾಗಿ ಪಿನಾಕಾ ಕ್ಷಿಪಣಿಯನ್ನು ಎಚ್​ಎಎಲ್​ ತಯಾರಿಸುವುದಿಲ್ಲ, ಉಪವ್ಯವಸ್ಥೆಗಳು, ಘಟಕಗಳು, ತಂತ್ರಜ್ಞಾನ ಮತ್ತು ಪರಿಣತಿಯ ಮೂಲಕ ಕೊಡುಗೆ ನೀಡುತ್ತದೆ.

    ಎಚ್​ಎಎಲ್​ ಷೇರಿನ ಬೆಲೆಯು 2,791.00 ರೂಪಾಯಿಗೆ ತಲುಪಿದೆ. ಕಳೆದ 6 ತಿಂಗಳಲ್ಲಿ ಇದು 866.65 ರೂಪಾಯಿ ಹೆಚ್ಚಳ ಕಂಡಿದೆ.

    ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರು: ಮಮತಾ ಬ್ಯಾನರ್ಜಿ ಪ್ರಸ್ತಾಪಕ್ಕೆ ಬೆಂಬಲ ದೊರೆತಿದ್ದೇಕೆ? ಖರ್ಗೆ ಹೇಳಿದ್ದೇನು?

    ಇಂಡಿಯಾ ಮೈತ್ರಿಕೂಟದಿಂದ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ: ಹೀಗಿದೆ ಮಮತಾ ಬ್ಯಾನರ್ಜಿ ಪ್ರಸ್ತಾಪ

    ಬಿಟ್‌ಕಾಯಿನ್ ವಂಚನೆ ಯೋಜನೆಯಲ್ಲಿ ಮಹಿಳೆ ಬಂಧನ: ಈ ದಂಧೆಯಲ್ಲಿ ವಂಚಿಸಿದ ಮೊತ್ತ ಎಷ್ಟು ಸಾವಿರ ಕೋಟಿ ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts