More

    ಕವಿತಾ ಎದುರು ಕೂರಿಸಿಕೊಂಡು ಕೇಜ್ರಿವಾಲ್ ವಿಚಾರಣೆ ನಡೆಸ್ತಾರಾ, ಇಂದು ಏನೆಲ್ಲಾ ಬೆಳವಣಿಗೆ ಆಗಬಹುದು?

    ದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಶುಕ್ರವಾರ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ. ಬೆಳಗ್ಗೆ ಅವರ ವೈದ್ಯಕೀಯ ಚಿಕಿತ್ಸೆ ನಡೆಯಲಿದೆ. ತನಿಖಾ ಸಂಸ್ಥೆಯು ಅವರನ್ನು ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರ ಮುಂದೆ ಕೂರಿಸಿ ಬೆಳಗ್ಗೆ 8 ಗಂಟೆಗೆ ವಿಚಾರಣೆ ನಡೆಸಲಿದೆ. ತೆಲಂಗಾಣ ಮಾಜಿ ಸಿಎಂ ಪುತ್ರಿ ಹಾಗೂ ಬಿಆರ್‌ಎಸ್ ಎಂಎಲ್‌ಸಿ ಕವಿತಾ ಅವರನ್ನು ಕಳೆದ ವಾರವಷ್ಟೇ ಇಡಿ ಬಂಧಿಸಿತ್ತು. ಸದ್ಯ ಅವರು ಮಾರ್ಚ್ 23ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿದ್ದಾರೆ. ಕವಿತಾ ಅವರು ಆಪ್ ನಾಯಕರಿಗೆ 100 ಕೋಟಿ ರೂಪಾಯಿ ನೀಡಿದ್ದಾರೆ ಎಂದು ಇಡಿ ಹೇಳಿಕೊಂಡಿದೆ.

    ಇಂದು ಏನಾಗಲಿದೆ?  

    ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜಾರಿ ನಿರ್ದೇಶನಾಲಯದ ಲಾಕಪ್‌ನಲ್ಲಿ ರಾತ್ರಿ ಕಳೆದಿದ್ದಾರೆ. ಅವರನ್ನು ಎಸಿ ಲಾಕ್‌ಆಫ್ ಕೊಠಡಿಯಲ್ಲಿ ಇರಿಸಲಾಗಿದೆ. ಇಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು.
    ಕೇಜ್ರಿವಾಲ್ ಅವರ ವೈದ್ಯಕೀಯ ತಪಾಸಣೆ ಬೆಳಗ್ಗೆ 8 ಗಂಟೆಗೆ ಮತ್ತೆ ನಡೆಯಲಿದೆ. ಇದಾದ ಬಳಿಕ ಇಡಿ ತಂಡ ವಿಚಾರಣೆ ಆರಂಭಿಸಲಿದೆ. ಕೆ.ಕವಿತಾ ಅವರನ್ನು ಮುಂದೆ ಕೂರಿಸಿಕೊಂಡು ವಿಚಾರಣೆ ನಡೆಸಬಹುದು.
    ಇದರ ನಂತರ, ಜಾರಿ ನಿರ್ದೇಶನಾಲಯ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ರಾಜಧಾನಿಯಲ್ಲಿರುವ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಬೆಳಗ್ಗೆ 11 ಗಂಟೆಗೆ ಹಾಜರುಪಡಿಸುತ್ತದೆ.

    ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಸಾಧ್ಯತೆ  

    ಮತ್ತೊಂದೆಡೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಬಂಧನದ ವಿರುದ್ಧ ಆಮ್ ಆದ್ಮಿ ಪಕ್ಷ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ತಕ್ಷಣವೇ ಭಾರತದ ಮುಖ್ಯ ನ್ಯಾಯಾಧೀಶರಿಗೆ ವಿಚಾರಣೆಗಾಗಿ ನೋಟಿಸ್ ಕಳುಹಿಸಿತು, ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.  ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಹಾಲಿ ಸಿಎಂ ಬಂಧನ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಲಿದೆ.

    ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಬಂಧನವನ್ನು ಪ್ರಜಾಪ್ರಭುತ್ವದ ಕೊಲೆ ಎಂದು ಬಣ್ಣಿಸಿ ಎಎಪಿ ಬೆಳಗ್ಗೆ 10 ರಿಂದ ಪ್ರತಿಭಟನೆ ನಡೆಸಲಿದೆ. ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಆಮ್ ಆದ್ಮಿ ಪಕ್ಷವು ದೇಶಾದ್ಯಂತ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಲಿದೆ ಎಂದು ದೆಹಲಿ ಸಚಿವರಾದ ಗೋಪಾಲ್ ರೈ ಮತ್ತು ಅತಿಶಿ ಘೋಷಿಸಿದ್ದಾರೆ. ಈ ಅವಧಿಯಲ್ಲಿ ಎಎಪಿ ಕಾರ್ಯಕರ್ತರು ದೆಹಲಿ ಸೇರಿದಂತೆ ಇತರೆ ಬಿಜೆಪಿ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವ ರಾಜಕೀಯ ಪಕ್ಷಗಳು ಮತ್ತು ಜನರು ಇದರಲ್ಲಿ ಪಾಲ್ಗೊಳ್ಳುವಂತೆ ಆಪ್ ಮನವಿ ಮಾಡಿದೆ.

    ಸಿಎಂ ಕೇಜ್ರಿವಾಲ್ ಬಂಧನ ಹೇಗೆ?
    ಜಾರಿ ನಿರ್ದೇಶನಾಲಯದ ಜಂಟಿ ನಿರ್ದೇಶಕರ ನೇತೃತ್ವದ ಇಡಿ ತಂಡ ಗುರುವಾರ ರಾತ್ರಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಮೇಲೆ ದಾಳಿ ನಡೆಸಿತು. ಮೊದಲಿಗೆ ಅಧಿಕಾರಿಗಳು ಸಿಎಂ ಭವನವನ್ನು ಶೋಧಿಸಿದರು.  ಎರಡು ಗಂಟೆಗಳ ಕಾರ್ಯಾಚರಣೆಯ ನಂತರ ಕೇಜ್ರಿವಾಲ್ ಬಂಧನದ ಸುದ್ದಿ ಬಂದಿತು.

    ಇಡಿ ಜಂಟಿ ನಿರ್ದೇಶಕರು ಮತ್ತು ಇತರ ಅಧಿಕಾರಿಗಳು ಸಿಎಂ ಸದನದಲ್ಲಿ ಕೇಜ್ರಿವಾಲ್ ಅವರನ್ನು ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದಾದ ಬಳಿಕ ಅವರನ್ನು ಬಂಧಿಸಿ ಇಡಿ ಕಚೇರಿಗೆ ಕರೆದೊಯ್ಯಲಾಯಿತು. ಈ ವೇಳೆ, ಮುಖ್ಯಮಂತ್ರಿ ರಾಜೀನಾಮೆ ನೀಡುವುದಿಲ್ಲ ಎಂದು ದೆಹಲಿ ವಿಧಾನಸಭಾ ಸ್ಪೀಕರ್ ಹೇಳಿದ್ದಾರೆ. ಅವರು ಜೈಲಿನಿಂದಲೇ ಸರ್ಕಾರ ನಡೆಸಲಿದ್ದಾರೆ.

    ಜನರೇ ಎಚ್ಚರ! ನೀವು ಈ ಗುಂಪಿನಲ್ಲಿದ್ರೆ ಈಗಲೇ ಎಚ್ಚೆತ್ತುಕೊಳ್ಳಿ ಇಲ್ಲದಿದ್ರೆ ಪಶ್ಚಾತಾಪ ಪಡುವ ದಿನ ದೂರವಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts