More

    IPL 2024: ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡದಿಂದ ಬೌಲಿಂಗ್​ ಆಯ್ಕೆ!

    ನವದೆಹಲಿ: ಪ್ರಸಕ್ತ ಸಾಗುತ್ತಿರುವ ಐಪಿಎಲ್​ ಟೂರ್ನಿಯ 35ನೇ ಪಂದ್ಯದಲ್ಲಿ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕ ರಿಷಬ್​ ಪಂತ್​ ಅವರು ಮೊದಲು ಬೌಲಿಂಗ್​​ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಸನ್​ರೈಸರ್ಸ್​ ಹೈದರಾಬಾದ್​ ಮೊದಲು ಬ್ಯಾಟಿಂಗ್​ ನಡೆಸಲಿದೆ.

    ಇದನ್ನೂ ಓದಿ: ಬೆಂಗಳೂರಿನಲ್ಲಿ ಭದ್ರತಾ ಲೋಪ: ಮೋದಿಗೆ ಚೊಂಬು ಪ್ರದರ್ಶಿಸಲು ಬಂದ ನಲಪಾಡ್​

    ಸತತ 2 ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಡೆಲ್ಲಿ ಕ್ಯಾಪಿಟಲ್ಸ್​ ಹಾಲಿ ಟೂರ್ನಿಯಲ್ಲಿ ಮೊದಲ ಬಾರಿ ತವರಿನಂಗಣದಲ್ಲಿ ಆಡಲಿದ್ದು ಹ್ಯಾಟ್ರಿಕ್​ ಗೆಲುವಿನ ತವಕದಲ್ಲಿದೆ. ಪ್ಯಾಟ್​ ಕಮ್ಮಿನ್ಸ್​ ಪಡೆ ಜಯದ ಓಟ ಕಾಯ್ದುಕೊಳ್ಳುವ ಹಂಬಲದಲ್ಲಿದೆ.

    ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟ್ಸ್‌ಮನ್‌ಗಳು ಈ ಋತುವಿನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಎರಡು ಬಾರಿ ದಾಖಲೆ-ಮುರಿಯುವ ಮೊತ್ತವನ್ನು ಪೋಸ್ಟ್ ಮಾಡಿದೆ. ಇದೇ ವೇಳೆ ಸಮಯದಲ್ಲಿ ಬೌಲರ್‌ಗಳು ಸಾಕಷ್ಟು ರನ್‌ಗಳನ್ನು ಸೋರಿಕೆ ಮಾಡಿದ್ದಾರೆ.

    ಹಾಲಿ ಟೂರ್ನಿಯಲ್ಲಿ ದಾಖಲೆಯ ರನ್​ ಮಳೆ ಹರಿಸಿರುವ ಸನ್​ರೈಸರ್ಸ ಹೈದರಬಾದ್​ ತಂಡ ಎದುರಾಳಿಗಳಿಗೆ ನಡುಕ ತರಿಸಿದೆ. ಸನ್​ರೈಸರ್ಸ್​ ಆಡಿರುವ 6 ಪಂದ್ಯಗಳಲ್ಲಿ 4 ಗೆಲುವು, 2 ಸೋಲಿನೊಂದಿಗೆ 8 ಅಂಕ ಸಂಪಾದಿಸಿದ್ದು, ಜತೆಗೆ ಹ್ಯಾಟ್ರಿಕ್​ ಗೆಲುವಿನಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

    ಡೆಲ್ಲಿ ಕ್ಯಾಪಿಟಲ್ಸ್​ 7 ಪಂದ್ಯಗಳಲ್ಲಿ 3 ಜಯ, 4 ಸೋಲಿನೊಂದಿಗೆ 6 ಅಂಕ ಕಲೆಹಾಕಿದ್ದು, ಪ್ಲೇ ಆ್​ ಅವಕಾಶ ವೃದ್ಧಿಸಿಕೊಳ್ಳುವ ನಿರೀೆಯಲ್ಲಿದೆ. ಯುವ ಆಟಗಾರರ ಬ್ಯಾಟಿಂಗ್​ ಬಲ ಹೊಂದಿರುವ ಡೆಲ್ಲಿ, ಅನುಭವಿ ಬೌಲರ್​ಗಳನ್ನು ಹೊಂದಿರುವ ಸನ್​ರೈಸರ್ಸ್​ ತಂಡಗಳ ಕಾದಾಟ ಕುತೂಹಲ ಕೆರಳಿಸಿದೆ.

    ತಿಹಾರ್‌ ಜೈಲಿನಲ್ಲಿ ಅರವಿಂದ ಕೇಜ್ರಿವಾಲ್​​ರನ್ನು ನಿಧಾನಗತಿ ಸಾವಿನತ್ತ ತಳ್ಳಲಾಗ್ತಿದೆ: ಎಎಪಿ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts