More

    ಬಂಧನ ಬಳಿಕವೂ ಕೇಜ್ರಿವಾಲ್​ ಸಿಎಂ ಆಗಿ ಉಳಿಯುತ್ತಾರೆಂದ AAP: ಇದು ಸಾಧ್ಯಾನಾ? ಕಾನೂನು ತಜ್ಞರು ಹೇಳೋದೇನು?

    ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಬಂಧನವಾಗಿದ್ದು, ಸಿಎಂ ಸ್ಥಾನದಿಂದ ಕೇಜ್ರಿವಾಲ್​ ಕೆಳಗೆ ಇಳಿಯುತ್ತಾರಾ ಎಂಬ ಪ್ರಶ್ನೆಗೆ ಆಮ್​ ಆದ್ಮಿ ಪಾರ್ಟಿ ಉತ್ತರ ನೀಡಿದೆ. ಕೇಜ್ರಿವಾಲ್​ ಅವರು ಸಿಎಂ ಆಗಿ ಮುಂದುವರಿಯಲಿದ್ದು, ಜೈಲಿನಿಂದಲೇ ತಮ್ಮ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ ಎಂದು ಪಕ್ಷವು ತಿಳಿಸಿದೆ.

    ಈ ಬಗ್ಗೆ ದೆಹಲಿಯ ಶಿಕ್ಷಣ ಸಚಿವೆ ಹಾಗೂ ಎಎಪಿಯ ಪ್ರಭಾವಿ ನಾಯಕಿ ಅತಿಶಿ ಮರ್ಲೆನಾ ಮಾತನಾಡಿದ್ದು, ಅರವಿಂದ್​ ಕೇಜ್ರಿವಾಲ್​ ದೆಹಲಿಯ ಸಿಎಂ ಆಗಿಯೇ ಉಳಿಯಲಿದ್ದಾರೆ. ಇದರಲ್ಲಿ ಎರಡು ಮಾರ್ಗ ಅಂಥದ್ದೇನೂ ಇಲ್ಲ. ಅಗತ್ಯಬಿದ್ದರೆ ಕೇಜ್ರಿವಾಲ್​ ಅವರು ಜೈಲಿನಿಂದ ಕೆಲಸ ಮಾಡಲಿದ್ದಾರೆ ಎಂದು ನಾನು ಆರಂಭದಿಂದಲೂ ಸ್ಪಷ್ಟಪಡಿಸುತ್ತಿದ್ದೇನೆ. ಈ ರೀತಿ ಮಾಡುವುದನ್ನು ತಡೆಯುವ ಯಾವುದೇ ಕಾನೂನು ಇಲ್ಲ. ಏಕೆಂದರೆ, ಕೇಜ್ರಿವಾಲ್​ರನ್ನು ಅಪರಾಧಿ ಎಂದು ತೀರ್ಪು ನೀಡಿಲ್ಲ ಎಂದು ಆತಿಶಿ ಹೇಳಿದರು.

    ಇತ್ತೀಚೆಗೆ ಬಂಧನಕ್ಕೆ ಒಳಗಾದ ಮೊದಲ ಹಾಲಿ ಸಿಎಂ ಅಂದರೆ ಅದು ಕೇಜ್ರಿವಾಲ್​. ಅವರು ಜೈಲಿನಿಂದ ಸಿಎಂ ಕೆಲಸ ಮಾಡಿದ್ದಲ್ಲಿ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಲಾಲು ಯಾದವ್ ಬಿಹಾರದ ಸಿಎಂ ಆಗಿದ್ದ ಸಂದರ್ಭದಲ್ಲಿ ಮೇವು ಹಗರಣದ ಪ್ರಕರಣದಲ್ಲಿ ಬಂಧಿತರಾದಾಗ, ಅವರು ಅಧಿಕಾರವನ್ನು ಪತ್ನಿ ರಾಬ್ರಿ ದೇವಿಗೆ ಹಸ್ತಾಂತರ ಮಾಡಿದ್ದರು. ಭೂ ಹಗರಣಕ್ಕೆ ಸಂಬಂಧಿಸಿದಂತೆ ಜನವರಿಯಲ್ಲಿ ಬಂಧಿತರಾಗಿದ್ದ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಅವರನ್ನು ಜಾರಿ ನಿರ್ದೇಶನಾಲಯವು ಬಂಧನ ಮಾಡಿತ್ತು.

    ಒಂದು ವೇಳೆ ಕೇಜ್ರಿವಾಲ್ ರಾಜೀನಾಮೆ ನೀಡದೇ ಹೋದರೆ, ಅದರಿಂದಾಗುವ ಪರಿಣಾಮಗಳ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಕೇಜ್ರಿವಾಲ್​ ಅವರು ಸಾರ್ವಜನಿಕ ಸೇವಕರಾಗಿರುವ ಕಾರಣ ಕೇಂದ್ರ ಸರ್ಕಾರ ಅವರನ್ನು ಅಮಾನತುಗೊಳಿಸಬಹುದು ಅಥವಾ ಹುದ್ದೆಯಿಂದ ತೆಗೆದುಹಾಕಬಬಹುದು ಎಂದು ಕಾನೂನು ತಜ್ಞರು ಹೇಳಿದ್ದಾರೆ. ಅಲ್ಲದೆ, ಬಂಧನ ಮಾಡಿದ ಸರ್ಕಾರಿ ಅಧಿಕಾರಿಗಳು ಕೂಡ ಇದೇ ವಿಧಾನ ಅನುಸರಿಸಬಹುದು. ತಕ್ಷಣ ಅವರನ್ನು ಸೇವೆಯಿಂದ ಅಮಾನತುಗೊಳಿಸ ಎಂದು ಮೂಲಗಳು ತಿಳಿಸಿವೆ.

    ತಿಹಾರ್ ಜೈಲಿನಲ್ಲಿನ ಉನ್ನತ ಮೂಲಗಳ ಪ್ರಕಾರ, ಜೈಲಿನಿಂದ ಯಾರೂ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಯಾವುದೇ ನಿದರ್ಶನವಿಲ್ಲ ಎಂದು ಹೇಳಿದರು. ಜೈಲು ಕೈಪಿಡಿಯಲ್ಲಿ ಅದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಮತ್ತು ಜೈಲು ಕೈಪಿಡಿಯ ಪ್ರಕಾರ ಎಲ್ಲವನ್ನೂ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

    ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ 9 ಬಾರಿ ಜಾರಿ ನಿರ್ದೇಶನಾಲಯದ (ಇ.ಡಿ.) ಸಮನ್ಸ್ ಉಲ್ಲಂಘಿಸಿದ್ದ ಕೇಜ್ರಿವಾಲ್, ಬಲವಂತದ ಕ್ರಮ ಕೈಗೊಳ್ಳದಂತೆ ಇ.ಡಿ.ಯಿಂದ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಕೋರಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದ ಬೆನ್ನಲ್ಲೇ ಇಡಿ ಅಧಿಕಾರಿಗಳು ಸಿಎಂ ನಿವಾಸಕ್ಕೆ ತೆರಳಿ ವಿಚಾರಣೆಗೊಳಪಡಿಸಿದ ಬಳಿಕ ಕೇಜ್ರಿವಾಲ್​ರನ್ನು ಬಂಧಿಸಿದರು.

    ಕೇಂದ್ರ ಸರ್ಕಾರ ಇ.ಡಿ. ಮೂಲಕ ಕೇಜ್ರಿವಾಲ್​ರನ್ನು ಬಂಧಿಸುವ ಷಡ್ಯಂತ್ರ ಮಾಡಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪ ಮಾಡುತ್ತಲೇ ಇತ್ತು. ಆದರೆ, ಪ್ರಕರಣದಲ್ಲಿ ಕೇಜ್ರಿವಾಲ್ ಅವರ ಕ್ರಿಮಿನಲ್ ಪಿತೂರಿ ಬಗ್ಗೆ ಸ್ಪಷ್ಟ ದಾಖಲೆ ಇದೆ ಎಂದು ಪ್ರತಿಪಾದಿಸುತ್ತಿರುವ ಇ.ಡಿ., ಅವರನ್ನು ವಿಚಾರಣೆಗೊಳಪಡಿಸಲು ಹಲವು ಬಾರಿ ಯತ್ನಿಸಿತ್ತು. ಗುರುವಾರ ದಿಲ್ಲಿ ಹೈಕೋರ್ಟ್ ನ್ಯಾ. ಸುರೇಶ್ ಕುಮಾರ್ ಕೈಟ್ ಮತ್ತು ನ್ಯಾ. ಮನೋಜ್ ಜೈನ್ ಅವರು ಕೇಜ್ರಿವಾಲ್ ವಾದ ತಳ್ಳಿ ಹಾಕಿ, ‘ರಕ್ಷಣೆ ನೀಡಲು ಸಾಧ್ಯವಿಲ್ಲ. ನಿಮ್ಮ ವಾದಗಳೇನೇ ಇದ್ದರೂ ಅದನ್ನು ಲಿಖಿತ ರೂಪದಲ್ಲಿ ಸಲ್ಲಿಸಿ’ ಎಂದು ಸೂಚಿಸಿತ್ತು. ಈ ಬೆಳವಣಿಗೆ ಇ.ಡಿ.ಗೆ ಕೇಜ್ರಿವಾಲ್ ವಿಚಾರಣೆ ನಡೆಸಲು ಅನುಕೂಲ ಮಾಡಿಕೊಟ್ಟಿದ್ದರಿಂದ, ರಾತ್ರಿ ಕೇಜ್ರಿವಾಲ್ ನಿವಾಸಕ್ಕೆ ತೆರಳಿದ ಇ.ಡಿ.ಯ 12 ಅಧಿಕಾರಿಗಳ ತಂಡ, ಬಂಧನ ಕುರಿತ ಮೆಮೋ ನೀಡಿ ಅವರನ್ನು ವಶಕ್ಕೆ ತೆಗೆದುಕೊಂಡಿದೆ. ಇ.ಡಿ. ಬಂಧನದಲ್ಲಿದ್ದ ಹಲವರಿಗೆ ಸುಪ್ರೀಂಕೋರ್ಟ್​ನಿಂದ ರಿಲೀಫ್ ಸಿಕ್ಕಿರುವ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಶುಕ್ರವಾರದ ಸುಪ್ರೀಂ ವಿಚಾರಣೆಯನ್ನು ಎದುರು ನೋಡುತ್ತಿದ್ದಾರೆ. (ಏಜೆನ್ಸೀಸ್​)

    ಕೇಜ್ರಿವಾಲ್ ಬಂಧನ; ಅಬಕಾರಿ ನೀತಿ ಹಗರಣದಲ್ಲಿ ಇ.ಡಿ.ಯಿಂದ ಲಾಕ್

    ಜನರೇ ಎಚ್ಚರ! ನೀವು ಈ ಗುಂಪಿನಲ್ಲಿದ್ರೆ ಈಗಲೇ ಎಚ್ಚೆತ್ತುಕೊಳ್ಳಿ ಇಲ್ಲದಿದ್ರೆ ಪಶ್ಚಾತಾಪ ಪಡುವ ದಿನ ದೂರವಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts