More

    ಸುಪೌಲ್‌ನಲ್ಲಿ ಭಾರೀ ಅಪಘಾತ: ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಗಿರ್ಡರ್ ಕುಸಿದು ಒರ್ವ ಸಾವು, ಹಲವರು ಕಣ್ಮರೆ

    ಬಿಹಾರ: ಇಲ್ಲಿನ ಸುಪೌಲ್‌ನಲ್ಲಿ ಮಾರ್ಚ್ 22 ರಂದು ಬೆಳಗ್ಗೆ ಸೇತುವೆಯ ಗಿರ್ಡರ್ ಕುಸಿದಿದೆ. ಇದರಿಂದ ಒರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಇನ್ನು ಅನೇಕ ಕಾರ್ಮಿಕರು ಜಲ ಸಮಾಧಿಯಾಗಿರಬಹುದು ಎಂಬ ವರದಿಗಳಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸ್ಪಷ್ಟವಾಗಿಲ್ಲವಾದರೂ ನೆರೆಹೊರೆಯವರು ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗಾಗಿ ಜಮಾಯಿಸಿದ್ದಾರೆ. ಈ ಸೇತುವೆಯನ್ನು ಸುಪೌಲ್‌ನ ಬಾಕೋರ್‌ನಲ್ಲಿ ನಿರ್ಮಿಸಲಾಗುತ್ತಿದೆ. ಅಪಘಾತದ ನಂತರ ಕಂಪನಿಯ ಕಡೆಯವರು ಪರಾರಿಯಾಗಿದ್ದಾರೆ.       

    ಬೆಳಗ್ಗೆ 7 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ಸದ್ಯ ಸುಪೌಲ್ ಜಿಲ್ಲಾಡಳಿತ ತಿಳಿಸಿದೆ. 9 ಮಂದಿ ಗಾಯಗೊಂಡಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಗಾಯಾಳುಗಳಿಗೂ ನೆರವು ನೀಡಲಾಗುವುದು. ಸಂಪೂರ್ಣ ತನಿಖೆಗೆ ಆದೇಶ ನೀಡಲಾಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ.  

    ಡಿಸೆಂಬರ್ 2024 ರೊಳಗೆ ನಿರ್ಮಾಣ ಪೂರ್ಣ

    ಮಾಹಿತಿಯ ಪ್ರಕಾರ, ಬಾಕೋರ್ ಸೇತುವೆಯ ಮೂರು ಪಿಲ್ಲರ್‌ಗಳ ಗಿರ್ಡರ್‌ಗಳು ಕುಸಿದಿದ್ದರಿಂದ ಈ ಅಪಘಾತ ಸಂಭವಿಸಿದೆ. ದೇಶದಲ್ಲೇ ನಿರ್ಮಾಣವಾಗುತ್ತಿರುವ ಅತಿ ಉದ್ದದ ರಸ್ತೆ ಸೇತುವೆ ಇದಾಗಿದೆ. ಇದನ್ನು ಗ್ಯಾಮನ್ ಇಂಡಿಯಾ ಮತ್ತು ಟ್ರಾನ್ಸ್ ರೈಲ್ ಲೈಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ಎಂಬ ಎರಡು ಕಂಪನಿಗಳು ನಿರ್ಮಿಸುತ್ತಿವೆ. ಈ ಸೇತುವೆಯು 10.5 ಕಿಮೀ ಉದ್ದವಿದೆ. ಭಾರತ್ ಮಾಲಾ ಯೋಜನೆಯಡಿ ಇದನ್ನು ನಿರ್ಮಿಸಲಾಗುತ್ತಿದೆ. ಇದರ ನಿರ್ಮಾಣದ ವೆಚ್ಚ ಸುಮಾರು 1200 ಕೋಟಿ ರೂ.

    ಸುಪೌಲ್‌ನ ಬಾಕೋರ್ ಮತ್ತು ಮಧುಬನಿ ಜಿಲ್ಲೆಯ ಭೇಜಾ ನಡುವೆ ನಿರ್ಮಿಸಲಾಗುತ್ತಿರುವ ಈ ಸೇತುವೆಯು 2024 ರ ವೇಳೆಗೆ ಪೂರ್ಣಗೊಳ್ಳಲಿದೆ. ಆದರೆ ಅಪಘಾತದ ನಂತರ, ನಿರ್ಮಾಣ ಏಜೆನ್ಸಿಗಳ ಮೇಲೆ ಪ್ರಶ್ನೆಗಳು ಹುಟ್ಟಿಕೊಂಡಿವೆ.

    ಭಾಗಲ್‌ಪುರ ಸೇತುವೆಯೂ ಕುಸಿದಿತ್ತು
    ಇದಕ್ಕೂ ಮುನ್ನ ಜೂನ್‌ 2023ರಲ್ಲಿ ಭಾಗಲ್‌ಪುರ ಜಿಲ್ಲೆಯ ಅಗಾವಾನಿಯಿಂದ ಸುಲ್ತಂಗಂಜ್‌ ನಡುವೆ ಗಂಗಾ ನದಿಯ ಮೇಲೆ ನಿರ್ಮಾಣವಾಗುತ್ತಿದ್ದ ನಾಲ್ಕು ಪಥದ ಸೇತುವೆಯ ದೊಡ್ಡ ಭಾಗ ಕುಸಿದಿತ್ತು. ಸೇತುವೆ ಕುಸಿಯುತ್ತಿರುವ ಸದ್ದು ಎರಡು ಕಿಲೋಮೀಟರ್ ವರೆಗೆ ಕೇಳಿಸಿತ್ತು. ಸೇತುವೆ ಕುಸಿತದ ವಿಡಿಯೋ ಕೂಡ ಬಹಿರಂಗವಾಗಿತ್ತು. ಇದನ್ನು 1710 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಸಿಎಂ ನಿತೀಶ್ ಕುಮಾರ್ ಅವರ ಈ ಕನಸಿನ ಯೋಜನೆ ಡಿಸೆಂಬರ್ 2023 ರಲ್ಲಿ ಉದ್ಘಾಟನೆಯಾಗಬೇಕಿತ್ತು.    

    ಈ ಸೇತುವೆಯಲ್ಲಿ ಸಂಭವಿಸುತ್ತಿರುವ ಅಪಘಾತ ಇದೇ ಮೊದಲಲ್ಲ. ಏಪ್ರಿಲ್ 30, 2022 ರಂದು, ಸೇತುವೆಯ 36 ಚಪ್ಪಡಿಗಳು ಸಹ ಕುಸಿದವು. ಈ ಸೇತುವೆಯ ಶಂಕುಸ್ಥಾಪನೆಯನ್ನು ನಿತೀಶ್ ಕುಮಾರ್ ಅವರು ಫೆಬ್ರವರಿ 23, 2014 ರಂದು ನೆರವೇರಿಸಿದರು.  

    ಕವಿತಾ ಎದುರು ಕೂರಿಸಿಕೊಂಡು ಕೇಜ್ರಿವಾಲ್ ವಿಚಾರಣೆ ನಡೆಸ್ತಾರಾ, ಇಂದು ಏನೆಲ್ಲಾ ಬೆಳವಣಿಗೆ ಆಗಬಹುದು?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts