More

    ಜೆಡಿಎಸ್ ಬಿಜೆಪಿ ಜೊತೆ ವಿಲೀನ ಆದ್ರೆ ಒಳಿತು, ಆಗ ರಾಜ್ಯದಲ್ಲಿ ಎರಡೇ ಪಕ್ಷ: ಸೋಲಿನ ಪರಾಮರ್ಶೆಯಲ್ಲಿ ಡಾ.ಸುಧಾಕರ್

    ಚಿಕ್ಕಬಳ್ಳಾಪುರ: ಆರೋಗ್ಯ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಅಚ್ಚರಿ ಎಂಬ ರೀತಿಯಲ್ಲಿ ಈ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದು, ಸೋಲಿನ ಕುರಿತಂತೆ ಇಂದು ಅವರು ಬೆಂಬಲಿಗರ ಜತೆ ಸಭೆ ಸೇರಿ ಪರಾಮರ್ಶೆ ಮಾಡಿದರು.

    ಚಿಕ್ಕಬಳ್ಳಾಪುರ ನಗರದ ಗೃಹಕಚೇರಿಯಲ್ಲಿ ಬೆಂಬಲಿಗರ ಜೊತೆ ಸಭೆ‌ ನಡೆಸಿದ ಸುಧಾಕರ್, ತಮ್ಮ ಸೋಲಿಗೆ ಕಾರಣಗಳು ಏನು ಎಂಬ ಕುರಿತು ಮಾತನಾಡಿದರು. ಜನರು ಕಪಟ ನಾಟಕವನ್ನು ನಂಬಿದ್ದಾರೆ‌. ನನ್ನ ಜನರಿಗೆ ಅನ್ಯಾಯ ಆಗಬಾರದು, ಅನ್ಯಾಯ ಆಗಲು ಬಿಡಬಾರದು ಎಂದ ಅವರು, ಸೋಲಿಗೆ ನಾನು ಯಾರನ್ನೂ ದೂಷಣೆ ಮಾಡುವುದಿಲ್ಲ ಎಂದರು.

    ಹತ್ತು ವರ್ಷಗಳ ಆಡಳಿತದಲ್ಲಿ ಯಾರಿಗೂ ತಾರತಮ್ಮ ಮಾಡಿಲ್ಲ. ಒಂದು ಸೋಲಿನಿಂದ ಆತಂಕ ಪಡಬೇಕಾಗಿಲ್ಲ. ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಚುನಾವಣೆಗಳ‌ನ್ನು ಗೆಲ್ಲೋಣ. ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗಳನ್ನು ಗಂಭೀರವಾಗಿ ತೆಗದುಕೊಳ್ಳಿ ಎಂದ ಸುಧಾಕರ್, ಈ ಬಾರಿ ಪ್ರತಿ ಗ್ರಾಮಕ್ಕೆ ತಲುಪಲಾಗಿಲ್ಲ. ಮತದಾರನನ್ನು ಮುಟ್ಟಲು ಆಗಲಿಲ್ಲ. ಸೋಲಿಗೆ ಇದು ಸಹ ಒಂದು ಕಾರಣ ಇರಬಹದು ಎಂದರು.

    ಎಲ್ಲರಿಗೂ ಅತೀವ ನೋವಾಗಿದೆ. ನೋವನ್ನ ಮುಂದುವರಿಸಬೇಡಿ, ಮತ್ತೆ ಪುಟಿದೇಳೋಣ, ಶಕ್ತಿಯನ್ನು ವೃದ್ದಿ ಮಾಡೋಣ. ಸರ್ಕಾರ, ಶಾಸಕರ ನಡೆ ಏನಿರುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ತಪ್ಪು ಹೆಜ್ಜೆ ಇಟ್ಟರೆ ಉತ್ತರ ಕೊಡಬೇಕು, ಹೋರಾಟ ಪ್ರತಿಭಟನೆ ಮಾಡಬೇಕು. ಜನ ಸಂಘಟನೆಗಿಂತ ದೊಡ್ಡ ಅಧಿಕಾರ ಬೇಡ‌. ನನ್ನ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ಶಕ್ತಿ ಇದೆ ಎಂದು ಹೇಳಿದರು.

    ಇದನ್ನೂ ಓದಿ: ನಾವ್ಯಾರೂ ಪಕ್ಷಕ್ಕೆ ಅನಿವಾರ್ಯ ಅಲ್ಲ: ಮಾಜಿ ಸಚಿವ ವಿ.ಸೋಮಣ್ಣ

    ಈ ಸೋಲಿಗೆ ಕೆಲವು ಘಟನೆಗಳು, ರಾಜಕೀಯ ಷಡ್ಯಂತ್ರಗಳು ಕಾರಣ. ಕಾಂಗ್ರೆಸ್-ಜೆಡಿಎಸ್ ಷಡ್ಯಂತ್ರದಿಂದಲೇ ನನಗೆ ಸೋಲಾಗಿದೆ. ನಮ್ಮ 15,000 ಮತ ಅವರಿಗೆ ಹೋಗಿದೆ ಅಷ್ಟೇ. ಅವರಿಬ್ಬರು ನಾವು ಒಬ್ಬರು ಎಂಬಂತಾಗಿತ್ತು. ಆದರೆ ಜೆಡಿಎಸ್ ಮುಗಿದು ಹೋಯಿತು. ರಾಜ್ಯದಲ್ಲಿ ಎರಡೇ ಪಕ್ಷಗಳು ಉಳಿಯುವ ಸಂಭವ ಇದೆ. ಜೆಡಿಎಸ್​​ನ ಶೇ. 5 ಮತಗಳು ಕಾಂಗ್ರೆಸ್​ಗೆ ಹೋಗಿವೆ. ಜೆಡಿಎಸ್​ನವರು ಯಾವ ಪಕ್ಷದ ಜೊತೆಗೆ ಹೋದರೆ ಒಳಿತು ಎಂದು ಅವರೇ ತೀರ್ಮಾನ ಮಾಡಲಿ. ಜೆಡಿಎಸ್ ನಮ್ಮ ಜೊತೆ ವಿಲೀನವಾದರೆ ಒಳ್ಳೆಯದು. ಏಕೆಂದರೆ ಜೆಡಿಎಸ್ 19 ಸ್ಥಾನ ಉಳಿಸಿಕೊಳ್ಳುವುದು ಕೂಡ ಕಷ್ಟ. ಇನ್ನು ಜೆಡಿಎಸ್ ಬಿಜೆಪಿ ಜತೆ ವಿಲೀನವಾದರೆ ಒಳಿತು. ಆಗ ರಾಜ್ಯದಲ್ಲಿ ಎರಡೇ ಪಕ್ಷ, ಬಿಜೆಪಿ ಮತ್ತು ಕಾಂಗ್ರೆಸ್ ಎಂದು ಸುಧಾಕರ್ ಹೇಳಿದರು.

    ಇದನ್ನೂ ಓದಿ: ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!

    ನನ್ನ ಜೊತೆ ಇದ್ದು ಕಾಂಗ್ರೆಸ್​ಗೆ ಸಫೋರ್ಟ್ ಮಾಡಿದವರು ಅವರ ಜೊತೆಗೇ ಸೇರಿಕೊಳ್ಳಿ. ನಿಮ್ಮ ನಿಮ್ಮ ಬೂತ್​ನಲ್ಲಿ ಆ ಥರದವರನ್ನು ಹೊರ ಹೋಗಿ ಅಂತ ಕಾರ್ಯಕರ್ತರಾದ ನೀವೇ ಹೇಳಿಬಿಡಿ. ಐದು ವರ್ಷಗಳಲ್ಲಿ ಕೆಲವರಿಗೆ ತೊಂದರೆ ಕೊಡಬಹುದು, ಆದರೆ ನಾನು ನಿಮ್ಮ ಜೊತೆ ಇರುತ್ತೇನೆ ಎಂದ ಸುಧಾಕರ್, ಜೆಡಿಎಸ್ ನಡೆ ನೋಡಿದ ಚಿಕ್ಕಬಳ್ಳಾಪುರದ ಜನ ಮಾಜಿ ಶಾಸಕ ಬಚ್ಚೇಗೌಡರನ್ನು ಕ್ಷಮಿಸುವುದಿಲ್ಲ ಎಂದರು.

    ಕೊನೆಯ ಹಂತದಲ್ಲಿ 12 ಗಂಟೆ ಬಾಕಿ ಇರುವಾಗ ಜೆಡಿಎಸ್ ಕಾಂಗ್ರೆಸ್ ಜೊತೆ ಸೇರಿ ಷಡ್ಯಂತ್ರ ಮಾಡಿದೆ. ಚಿಕ್ಕಮಗಳೂರಿನಲ್ಲೂ ಇದೇ ರೀತಿ ಮಾಡಿದ್ದಾರೆ‌. ಜೆಡಿಎಸ್ ಮತ ಕಾಂಗ್ರೆಸ್​ಗೆ ಕೊಡಿಸಿ ಅನಿವಾರ್ಯ ಸೋಲು ಅನುಭವಿಸುವಂತೆ ಮಾಡಲಾಗಿದೆ. ಇದು ಅವರು ಜನಸಾಮಾನ್ಯರಿಗೆ ಮಾಡಿದ ಮೋಸ. ಅದಾಗ್ಯೂ 75 ಸಾವಿರ ಮತ ನೀಡಿದ ಮತದಾರರಿಗೆ ನಾನು ವಿಶೇಷವಾದ ಕೃತಜ್ಞತೆ ಸಲ್ಲಿಸುತ್ತೇನೆ. ಗೆಲುವು ಶಾಶ್ವತ ಅಲ್ಲ, ಸೋಲು ಕೂಡ ಅಂತಿಮ ಅಲ್ಲ ಎಂದರು.

    ಲಿಂಗಾಯತರನ್ನು ಸಿಎಂ ಮಾಡಲಿ ನೋಡೋಣ: ಕಾಂಗ್ರೆಸ್​ಗೆ ಮಾಜಿ ಸಚಿವ ನಿರಾಣಿ ಸವಾಲು

    ಕಗ್ಗಂಟಾದ ಸಿಎಂ ಆಯ್ಕೆ: ಡಿ.ಕೆ.ಶಿವಕುಮಾರ್​ ಹೋರಾಟಕ್ಕೀಗ ಸಹೋದರ ನೇರ ಎಂಟ್ರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts