More

    ಲಿಂಗಾಯತರನ್ನು ಸಿಎಂ ಮಾಡಲಿ ನೋಡೋಣ: ಕಾಂಗ್ರೆಸ್​ಗೆ ಮಾಜಿ ಸಚಿವ ನಿರಾಣಿ ಸವಾಲು

    ಬಾಗಲಕೋಟೆ: ಪೂರ್ಣ ಬಹುಮತ ಬಂದಿದ್ದರೂ ಮುಖ್ಯಮಂತ್ರಿ ಆಯ್ಕೆ ಮಾಡುವಲ್ಲಿ ಪರದಾಡುತ್ತಿರುವ ಕಾಂಗ್ರೆಸ್​ಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಸವಾಲೊಂದನ್ನು ಹಾಕಿದ್ದಾರೆ. ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದಲ್ಲಿ ಇಂದು ಅವರು ಈ ವಿಷಯವಾಗಿ ಮಾತನಾಡಿದರು.

    ಕಾಂಗ್ರೆಸ್​ಗೆ ಲಿಂಗಾಯತರ ಬಗ್ಗೆ ಇಷ್ಟೊಂದು ಅನುಕಂಪ ಬಂದಿದೆಯಲ್ಲ, ಹಾಗಿದ್ದರೆ ಲಿಂಗಾಯತರನ್ನೇ ಸಿಎಂ ಮಾಡಲಿ ನೋಡೋಣ ಎಂದು ನಿರಾಣಿ ಸವಾಲೆಸೆದಿದ್ದಾರೆ. ಜಗದೀಶ್ ಶೆಟ್ಟರ್, ಎಂ.ಬಿ.ಪಾಟೀಲ್, ಶಾಮನೂರ ಶಿವಶಂಕರಪ್ಪ ಇದ್ದಾರಲ್ಲ. ಈಗ ಕಡೇಪಕ್ಷ ಅವರ ಹೆಸರಾದರೂ ಹೇಳಬೇಕಲ್ವಾ? ಅವರೆಲ್ಲ ಸಿಎಂ ಆಗಲು ಅರ್ಹರಿದ್ದಾರೆ. ಹಿರಿತನ, ಆಡಳಿತ ಅನುಭವ ಎಲ್ಲ ಇದೆಯಲ್ಲ. ಸುಮ್ಮನೆ ರಾಜಕೀಯ ಲಾಭ ಪಡೆಯಲು ಲಿಂಗಾಯತ ನಾಯಕರು, ಲಿಂಗಾಯತರನ್ನು ಪ್ರತ್ಯೇಕಿಸಿದ್ದಾರೆ. ಕಾಂಗ್ರೆಸ್​ನವರಿಗೆ ಲಿಂಗಾಯತರ ಬಗ್ಗೆ ಹೃತ್ಪೂರ್ವಕ ಗೌರವ ಇಲ್ಲ. ಚುನಾವಣೆಯಲ್ಲಿ ಮಾತ್ರ ಲಿಂಗಾಯತ ಪ್ರೀತಿ ಕಾಣಿಸುವುದು ಸ್ಪಷ್ಟವಾಗಿದೆ ಎಂದರು.

    ಇದನ್ನೂ ಓದಿ: ವಾಟ್ಸ್ಆ್ಯಪ್ ಮೂಲಕ ವಂಚನೆ; ಸುರಕ್ಷತೆಗಾಗಿ ನೀವು ಮಾಡಬೇಕಾದ್ದೇನು?

    ಕಾಂಗ್ರೆಸ್​ನಲ್ಲಿ ಸಿಎಂ ರೇಸ್​ನಲ್ಲಿ ಲಿಂಗಾಯತ ನಾಯಕರ ಹೆಸರೇ ಇಲ್ವಲ್ಲ ಎನ್ನುವ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದು, ವೀರಶೈವರು ಪ್ರಜ್ಞಾವಂತರಿದ್ದಾರೆ. ಇವತ್ತು ಏನೋ ಅಲ್ಪಸ್ವಲ್ಪ ಮಿಸ್ಟೇಕ್ ಆಗಿರಬಹುದು. ಜಗದೀಶ ಶೆಟ್ಟರ್ ವಿಚಾರದಲ್ಲಿ ನಮ್ಮ ಕೇಂದ್ರದ ನಾಯಕರು ಬೇರೆ ಕಾರಣಕ್ಕೆ ಟಿಕೆಟ್ ಕೊಡಲಿಲ್ಲ. ಅವರಿಗೆ ದೊಡ್ಡ ಹುದ್ದೆ ಕೊಡುವ ಹಾಗೂ ಅವರು ಹೇಳಿದವರಿಗೆ ಎಂಎಲ್​ಎ ಟಿಕೆಟ್ ಕೊಡುವುದಾಗಿ ಹೇಳಿದ್ದರು. ಹೀಗಾಗಿ ಬಿಜೆಪಿ ಜಗದೀಶ ಶೆಟ್ಟರ್​ಗೆ ಅನ್ಯಾಯ ಮಾಡಿಲ್ಲ. ಆದರೆ ಲಿಂಗಾಯತರನ್ನು ಒಡೆದಾಳುವ ನೀತಿ ಮಾಡುತ್ತಿರುವ ಕಾಂಗ್ರೆಸ್ ಕನಸು ನನಸಾಗುವುದಿಲ್ಲ ಎಂದರು.

    ಇದನ್ನೂ ಓದಿ: ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!

    ರಾಜ್ಯದಲ್ಲಿ ರಾಜಕೀಯವಾಗಿ ಲಿಂಗಾಯತರನ್ನು ಮೊದಲು ಒಟ್ಟುಗೂಡಿಸಿದ ಕೀರ್ತಿ ವೀರೇಂದ್ರ ಪಾಟೀಲ್ ಅವರಿಗೆ ಸಲ್ಲುತ್ತದೆ. ನಂತರದಲ್ಲಿ ಛಿದ್ರವಾಗಿದ್ದ ವೀರಶೈವ ಲಿಂಗಾಯತರನ್ನು ಒಗ್ಗೂಡಿಸಿದ್ದು ಯಡಿಯೂರಪ್ಪ. ಆದರೆ ಈಗ ಕಾಂಗ್ರೆಸ್​ನವರು ರಾಜಕೀಯ ದುರುದ್ದೇಶದಿಂದ ವೀರಶೈವರು ಬೇರೆ, ಲಿಂಗಾಯತರು ಬೇರೆ, ಆ ಥರ, ಈ ಥರ ಎಂದು ಜಗದೀಶ ಶೆಟ್ಟರ್ ಮತ್ತಿತರರನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ, ವೀರಶೈವರು ದಡ್ಡರಲ್ಲ, ಬಹಳಷ್ಟು ಪ್ರಜ್ಞಾವಂತರು ಇರುವ ಸಮಾಜ. ಎಚ್ಚೆತ್ತುಕೊಳ್ಳುತ್ತದೆ ಮತ್ತು ಸಮಾಜದ ಜೊತೆ ಯಾರು ಗಟ್ಟಿಯಾಗಿ ನಿಲ್ಲುತ್ತಾರೋ ಆಶೀರ್ವಾದ ಮಾಡುತ್ತದೆ ಎಂದರು.

    ಇದನ್ನೂ ಓದಿ: ದೃಷ್ಟಿ ಇಲ್ಲದಿದ್ರೂ ಶಾಲೆಗೇ ಸಿಬಿಎಸ್​ಇ ಟಾಪರ್​: ಆ್ಯಸಿಡ್​ ದಾಳಿಗೆ ಎರಡೂ ಕಣ್ಣು ಕಳೆದುಕೊಂಡ್ರೂ ಹೋಪ್ ಕಳ್ಕೊಂಡಿಲ್ಲ!

    ಲಿಂಗಾಯತರ ಬಗ್ಗೆ ಬಿ.ಎಲ್.ಸಂತೋಷ್ ಟೀಕೆ ಮಾಡಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ನಿರಾಣಿ, ಅವರು ಅಷ್ಟು ಸಣ್ಣವರಲ್ಲ. ಅದು ಬಿ.ಎಲ್.ಸಂತೋಷ್, ಪ್ರಲ್ಹಾದ ಜೋಶಿ ಅವರು ಹಾಗೆ ಹೇಳಿಲ್ಲ. ಅಪಪ್ರಚಾರ ಮಾಡಲು ಬರೆದವರು ಸಿಕ್ಕಿಬಿದ್ದಿದ್ದಾರೆ. ಇಂಥ ಎಲ್ಲ ತಪ್ಪು ಸಂದೇಶಗಳನ್ನು ಹಬ್ಬಿಸಿಯೇ ಕಾಂಗ್ರೆಸ್​ನವರು ಅಧಿಕಾರಕ್ಕೆ ಬಂದಿದ್ದಾರೆ ಎಂದು ನಿರಾಣಿ ಬೇಸರ ವ್ಯಕ್ತಪಡಿಸಿದರು.

    ಕಾಂಗ್ರೆಸ್​ನವರು ತಾತ್ಕಾಲಿಕವಾಗಿ ಮೂಗಿಗೆ ತುಪ್ಪ ಹಚ್ಚಿ, ಭರವಸೆ ಕೊಟ್ಟಿದ್ದಾರೆ. ಅದರಿಂದ ಅವರು ಹೆಚ್ಚು ಸ್ಥಾನ ಪಡೆಯಲು ಸಾಧ್ಯವಾಗಿದೆ. ಆದರೆ, ಬಿಜೆಪಿಯನ್ನ ಮತ್ತೆ ತಳಮಟ್ಟದಿಂದ ಕಟ್ಟುತ್ತೇವೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ನಿಶ್ಚಿತವಾಗಿಯೂ ಬರುತ್ತದೆ ಎಂದರು.

    ಚುನಾವಣಾ ಫಲಿತಾಂಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ಕಾಂಗ್ರೆಸ್ ಅಭ್ಯರ್ಥಿ ನಿರ್ಧಾರ

    ಜಗತ್ತು ನಿಮ್ಮನ್ನು ತಿರಸ್ಕರಿಸಿದರೂ..: ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಅಮ್ಮನ ಬಳಿಗೆ ತೆರಳಿ ಹೀಗಂದಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts