More

    ಮೆಣಸಿನಹಾಡ್ಯ ಸೇತುವೆ ದುರಸ್ತಿ ಆರಂಭ

    ಕಳಸ: ಆರು ವರ್ಷದ ಹಿಂದೆ ಪ್ರವಾಹದಿಂದ ಶಿಥಿಲಗೊಂಡಿದ್ದ ಹೊರನಾಡು-ಶೃಂಗೇರಿ ಮಾರ್ಗದ ಮೆಣಸಿನಹಾಡ್ಯ ಬಳಿ ಸೇತುವೆ ದುರಸ್ತಿ ಮಾಡಲಾಗುತ್ತಿದೆ. ಆದರೆ ರಸ್ತೆಯ ಕೆಲ ಕಡೆ ಜಲ್ಲಿ ಹಾಕಿ ಬಿಟ್ಟಿರುವುದರಿಂದ ಸಂಚಾರಿಗರು ತೊಂದರೆ ಅನುಭವಿಸುವಂತಾಗಿದೆ.

    ಮಹಾಮಳೆಗೆ ಶಿಥಿಲಗೊಂಡಿದ್ದ ಸೇತುವೆಯನ್ನು ದುರಸ್ತಿ ಮಾಡದಿದ್ದರಿಂದ ಬಹಳಷ್ಟು ಅನಾಹುತ ಸಂಭವಿಸಿದ್ದವು. ಈ ಕುರಿತು ಮೇ 10ರಂದು ವಿಜಯವಾಣಿ ಪತ್ರಿಕೆಯಲ್ಲಿ ‘ಸೇತುವೆ ಶಿಥಿಲಗೊಂಡು ಆರು ವರ್ಷ ಕಳೆದರೂ ಕೇಳೋರಿಲ್ಲ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಮೇ 10ರಂದು ಕಾಮಗಾರಿ ಆರಂಭಿಸಿದರು.
    ಕೆಲ ಭಾಗಗಳಲ್ಲಿ ಡಾಂಬರೀಕರಣ ಮಾಡದೆ ಜಲ್ಲಿ ಹಾಕಿ ಬಿಡಲಾಗಿದೆ. ಇದರಿಂದ ಸಂಚಾರಿಗರು ತೊಂದರೆ ಅನುಭವಿಸುತ್ತಿದ್ದಾರೆ. ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ತೀರ ಹದೆಗೆಟ್ಟಿದ್ದು ವಾಹನ ಸವಾರರು ಪ್ರಯಾಣಿಸಲು ಅಸಾಧ್ಯವಾಗಿದೆ.
    ಹೊರನಾಡು-ಶೃಂಗೇರಿ ಸಂಪರ್ಕಿಸುವ ಹತ್ತಿರದ ರಸ್ತೆ ಇದಾಗಿದ್ದು, ದಿನ ನಿತ್ಯ ವಾಹನಗಳು ಸಂಚರಿಸುತ್ತವೆ. ಆದರೆ ರಸ್ತೆ ದುರಸ್ತಿ ಗುತ್ತಿಗೆದಾರ ಬೇಜವಾಬ್ದಾರಿಯಿಂದ ಕೆಲ ವರ್ಷಗಳಿಂದ ರಸ್ತೆಯ ಕೆಲ ಪ್ರದೇಶಗಳನ್ನು ಡಾಂಬರೀಕರಣ ಮಾಡದೆ ಹಾಗೆಯೇ ಬಿಟ್ಟಿದ್ದಾರೆ. ಆದ್ದರಿಂದ ಸಂಚಾರಕ್ಕೆ ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥ ಅನಿಲ್ ದೂರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts