More

    ಐದು ದಿನಗಳ ಹೋರಾಟ ಅಂತ್ಯ

    ಮುದ್ದೇಬಿಹಾಳ: ರಸ್ತೆ ಡಾಂಬರೀಕರಣಕ್ಕೆ ಆಗ್ರಹಿಸಿ ಕಳೆದ ಐದು ದಿನಗಳಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರಿಗೆ ಮಹೆಬೂಬ ನಗರದ ನಿವಾಸಿಗಳು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಹೋರಾಟಕ್ಕೆ ಅಧಿಕಾರಿಗಳಿಂದ ಸ್ಪಂದನೆ ದೊರೆತಿದೆ. ಶುಕ್ರವಾರದಿಂದ ರಸ್ತೆಯ ಡಾಂಬರೀಕರಣ ಕೆಲಸಕ್ಕೆ ಚಾಲನೆ ನೀಡಿದ್ದರಿಂದ ಹೋರಾಟಗಾರರು ಅಧಿಕಾರಿಗಳಿಂದ ಲಿಖಿತ ಭರವಸೆಯ ಪತ್ರ ಪಡೆದು ತಮ್ಮ ಹೋರಾಟ ಅಂತ್ಯಗೊಳಿಸಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಹಾಕಿದ್ದ ಟೆಂಟ್‌ನಲ್ಲಿ ಐದನೇ ದಿನದ ಹೋರಾಟ ಆರಂಭಿಸಿದ್ದ ಧರಣಿ ನಿರತರು ಮಧ್ಯಾಹ್ನದವರೆಗೆ ನಾಲತವಾಡ ರಸ್ತೆ ತಡೆಯುವ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ನೀಡಿದ್ದರು. ಆದರೆ ಅದಕ್ಕೆ ಆಸ್ಪದ ನೀಡದ ಅಧಿಕಾರಿಗಳು ಹೋರಾಟಗಾರರು ನೀಡಿದ್ದ ಗಡುವಿನೊಳಗೆ ಅವರ ಬೇಡಿಕೆಯಂತೆ ಡಾಂಬರೀಕರಣ ಕಾರ್ಯವನ್ನು ಆರಂಭಿಸಿದರು.

    ಹೋರಾಟ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ರೇಖಾ ಟಿ., ಮಾತನಾಡಿ, ಈ ಮುಂಚೆ ರಸ್ತೆತಡೆ ನಡೆಸಿದ್ದಾಗ ಕೆಲಸಕ್ಕೆ ಚಾಲನೆ ಮಾಡಿಸುವ ಮಾತು ಕೊಟ್ಟಿದ್ದೆ. ಆದರೆ ನಾಲ್ಕಾರು ದಿನ ತಡವಾದ ಕಾರಣ ತಮ್ಮನ್ನು ಭೇಟಿಯಾಗಲಿಲ್ಲ. ಇಂದು ನಾನೇ ಖುದ್ದಾಗಿ ಸ್ಥಳಕ್ಕೆ ಹೋಗಿ ಕಾಮಗಾರಿಗೆ ಚಾಲನೆ ಮಾಡಿಸಿ ಬಂದಿದ್ದೇನೆ. ನಿಮ್ಮ ಬೇಡಿಕೆಯಂತೆ ಎರಡು ದಿನ ತಡವಾದರೂ ಪೂರ್ಣಪ್ರಮಾಣದಲ್ಲಿ ಕೆಲಸ ಮಾಡಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.

    ಪಿಡಬ್ಲುೃಡಿ ಪ್ರಭಾರ ಎಇಇ ರಾಜಶೇಖರ ಚವ್ಹಾಣ ಹೋರಾಟಗಾರರಿಗೆ ಲಿಖಿತ ಉತ್ತರ ನೀಡಿದ ಬಳಿಕ ಮಾತನಾಡಿ, ಡಾಂಬರೀಕರಣ ಕೆಲಸ ಕಾರಣಾಂತರಗಳಿಂದ ಸ್ಥಗಿತವಾಗಿತ್ತು. ಈ ಬಗ್ಗೆ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಆರ್.ಕೆ. ಮುಜುಮದಾರ ಅವರು ಮೌಖಿಕ ಭರವಸೆ ನೀಡಿದ್ದರು. ಅದರಂತೆ ಮೂರು ದಿನಗಳ ಅಂತರದಲ್ಲಿ ಕೆಲಸ ಆರಂಭಿಸಲಾಗಿದೆ. ನಿವಾಸಿಗಳ ಬೇಡಿಕೆಯಂತೆ ಕೆಲಸ ನಿರ್ವಹಿಸಲಾಗುವುದು ಎಂದರು.

    ಪಿಎಸ್‌ಐ ಆರೀಫ ಮುಶಾಪುರಿ ಸೂಕ್ತ ಬಂದೋಬಸ್ತ್ ವಹಿಸಿದ್ದರು. ಹೋರಾಟದ ನೇತೃತ್ವ ವಹಿಸಿದ್ದ ಮುಖಂಡ ಗುಲಾಮ್‌ಮೊಹ್ಮದ ದಫೇದಾರ, ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ, ಮುಖಂಡರಾದ ಅಲ್ಲಾಭಕ್ಷ ಟಕ್ಕಳಕಿ, ಮಹ್ಮದ ನಾಗರಾಳ, ರಫೀಕ ಗೊಳಸಂಗಿ, ಇಸ್ಮಾಯಿಲ್ ಗೋಲಂದಾಜ, ಶಬ್ಬೀರ ಕಲ್ಮನಿ, ಇರ್ಫಾನ್ ಹವೇಲಿ, ಮಹ್ಮದಯೂಸೂಫ ಹಿರೇಮನಿ, ಇಮ್ರಾನ ಒಂಟಿ, ಅಲ್ತಾಫ್ ನಾಯ್ಕೋಡಿ, ನೂರಹ್ಮದ ಮೋಮಿನ, ಬಾಬಾ ಕಿತ್ತೂರ, ಲಾಳೇಮಶ್ಯಾಕ ಗೋಲಂದಾಜ, ಇಸ್ಮಾಯಿಲ್ ಸಾತಿಹಾಳ, ಅಬ್ದುಲರಜಾಕ ಪಟೇಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts