More

    ರೋಗಿಗೆ ಅವಶ್ಯವಿರುವ ಮಾತ್ರೆಗಳನ್ನು ಪೂರೈಸಿ ಮಾನವೀಯತೆ ಮೆರೆದ ಉಪಸಭಾಪತಿ

    ಚನ್ನಮ್ಮ ಕಿತ್ತೂರು: ರೋಗಿಗೆ ಮಾತ್ರೆಗಳು ಸಿಗದೆ ಪರದಾಡುವ ಸ್ಥಿತಿಯಲ್ಲಿರುವಾಗ ಮಾಡಿದ ಒಂದು ಪೋನ್ ಕರೆಗೆ ವಿಧಾನ ಸಭೆಯ ಉಪಸಭಾಪತಿಗಳು ಸ್ಪಂದಿಸಿ ಎರಡು ತಿಂಗಳ ಮಾತ್ರೆಗಳನ್ನು ಪೂರೈಸಿ ಮಾನವೀಯತೆ ಮೆರೆದ ಘಟನೆ ಕಿತ್ತೂರು ತಾಲೂಕಿನ ಕತ್ರದಡ್ಡಿ ಗ್ರಾಮದಲ್ಲಿ ನಡೆದಿದೆ.

    ಕರೊನಾ ವೈರಸ್ ಸೊಂಕಿನಿಂದ ಇಡೀ ದೇಶವೇ ಲಾಕ್ ಡೌನ್ ಆಗಿ ಸಾಮಾನ್ಯ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರೋಗಿಗಳು ಅವಶ್ಯವಿರುವ ಮಾತ್ರೆಗಳು ದೊರೆಯದೆ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮಾನವಿತೆಯ ಮೆರೆದ ಘಟನೆಗಳು ಸಹ ನಡೆಯುತ್ತಿವೆ ಇದಕ್ಕೆ ಉತ್ತಮ ಉದಾಹರಣೆ ಎಂದರೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹನುಮಂತ ಕೊಟಬಾಗಿಯವರು ಬಡವರಿಗೆ ಆಹಾರ ದಾನ್ಯದ ಕಿಟ್ ಜತೆಗೆ ಧನಸಹಾಯವನ್ನು ಪ್ರತಿ ಗ್ರಾಮದಲ್ಲಿ ಮಾಡುತ್ತಿದ್ದಾರೆ. ಇದೇ ರೀತಿ ಕಿತ್ತೂರು ತಾಲೂಕಿನ ಕತ್ರಿದಡ್ಡಿ ಗ್ರಾಮದಲ್ಲಿ ಆಹಾರ ದಾನ್ಯದ ಕಿಟ್ ನೀಡುತ್ತಿದ್ದಾಗ ಗೀತಾ ಬಡಿಗೇರ ಅವರು ನನಗೆ ಆಹಾರ ಬೇಡ ನನಗೆ ಮೂರ್ಛೆ ರೋಗವಿದ್ದು ಆದ ಕಾರಣ ಮಾತ್ರೆಗಳು ದೊರೆಯುತ್ತಿಲ್ಲ ಮಾತ್ರೆಗಳ ಅವಶ್ಯವಿದೆ ಇಲ್ಲವಾದರೆ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ ಎಂದು ಬೇಡಿಕೊಂಡು ಈ ಕೂಡಲೇ ಮಾತ್ರೆಗಳನ್ನು ಪೂರೈಸಲು ಮನವಿ ಮಾಡಿಕೊಂಡಳು. ಇದಕ್ಕೆ ಸ್ಪಂದಿಸಿದ ಹನುಮಂತ ಕೊಟಬಾಗಿಯವರು ಬೇರೆ ಬೇರೆ ಕಡೆ ಮಾತ್ರೆಗಳಿಗೆ ವಿಚಾರಿಸಿದರು.

    ಕೊನೆಗೆ ಸವದತ್ತಿ ಕ್ಷೇತ್ರದ ಶಾಸಕರು ಮತ್ತು ವಿಧಾನಸಭೆಯ ಉಪಸಭಾಪತಿ ಆನಂದ ಮಾಮನಿಯವರ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಅವರು, ಎರಡು ತಿಂಗಳಿಗೆ ಅವಶ್ಯವಿರು ಮಾತ್ರೆಗಳ ಜೊತೆಗೆ ಹಣ್ಣು ಮತ್ತು ಎಳನೀರು ಕಾಯಿಗಳನ್ನು ತಮ್ಮ ವಾಹನದಲ್ಲಿ ಸವದತ್ತಿ ಪಟ್ಟಣದಿಂದ 50.ಕಿ.ಮಿ ದೂರದ ಕಿತ್ತೂರು ಪಟ್ಟಣಕ್ಕೆ ಕಳುಹಿಸಿ ಕಿತ್ತೂರಿನ ಪಿಎಸೈ ಕುಮಾರ ಹಿತ್ತಲಮನಿ, ಹನುಮಂತ ಕೊಟಬಾಗಿ ಅವರಿಗೆ ಹಸ್ತಾಂತರಿಸಿ ಆ ಮಾತ್ರೆಗಳನ್ನು ಕತ್ರದಡ್ಡಿ ಗ್ರಾಮದ ಮಹಿಳೆಗೆ ತಲುಪಿಸುವ ಮೂಲಕ ಮಾದರಿಯಾಗಿದ್ದಾರೆ.

    ಕತ್ರದಡ್ಡಿ ಗ್ರಾಮದ ಗೀತಾ ಬಡಿಗೇರ ಮಾತನಾಡಿ, ಮಾತ್ರೆಗಳು ದೊರೆಯದೆ ನನ್ನ ಜೀವಕ್ಕೆ ತೊಂದರೆಯಾಗುವ ಸ್ಥಿತಿ ಇತ್ತು ಹಿಂತಹ ಸಂದರ್ಭದಲ್ಲಿ ದೇವರಂತೆ ಹನುಮಂತ ಕೊಟಬಾಗಿಯವರು ಬಂದು ಆಹಾರ ದಾನ್ಯದ ಕಿಟ್ ನೀಡಿದರು. ಆಗ ನನ್ನ ಸಮಸ್ಯೆಯನ್ನು ಅವರ ಗಮನಕ್ಕೆ ತಂದಾಗ ಅವರು ಸವದತ್ತಿ ಶಾಸಕರ ಗಮನಕ್ಕೆ ಗಮನಕ್ಕೆ ತಂದಿದ್ದಾರೆ. ಶಾಸಕರು ಕೂಡಲೇ ಎರಡು ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ಪೂರೈಸಿ ಸಹಾಯ ಮಾಡಿದ್ದಾರೆ. ಮಾತ್ರೆಗಳನ್ನು ಪೂರೈಸಲು ಸಹಕರಿಸಿದ ಎಲ್ಲರಿಗೂ ಚಿರಋಣಿಯಾಗಿದ್ದೇನೆ.

    ರಾಜ್ಯ ಕಾರ್ಯಕಾರಿಣಿ ಸದಸ್ಯ ಹನುಮಂತ ಕೊಟಬಾಗಿ, ಕಿತ್ತೂರು ಪಿ.ಎಸ್.ಐ ಕುಮಾರ ಹಿತ್ತಲಮನಿ, ಡಾ. ಸುದನ್ವ ಕೊಟಬಾಗಿ, ಮಾಜಿ ತಾಪಂ ಸದಸ್ಯೆ ಸರಸ್ವತಿ ಹೈಬತ್ತಿ, ಆಶಾ ಕಾರ್ಯಕರ್ತೆ ಯಮುನಾ ಚಿಂಗಳೆ ಸೇರಿ ಇತರರು ಇದ್ದರು.

    ಒಂದೇ ಒಂದು ಆ್ಯಪಲ್​ ನಿಂದಾಯಿತು ಭಾರಿ ಅನಾಹುತ!- ಡಿಎನ್​ಎ ಪರೀಕ್ಷೆ ಮಾಡಿ ಅದನ್ನು ಹಿಡಿದವರನ್ನು ಪತ್ತೆ ಹಚ್ಚಿದ ಪೊಲೀಸರು- ಮುಂದೇನಾಯಿತು?!!!

    ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts