More

    ಆಸ್ಪತ್ರೆಯಲ್ಲಿರುವ ಮಾಜಿ ಪಿಎಂ ಮನಮೋಹನ್ ಸಿಂಗ್ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ

    ನವದೆಹಲಿ: ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಅವರ ಸದ್ಯದ ಆರೋಗ್ಯ ಸ್ಥೀತಿಯ ಬಗ್ಗೆ ಏಮ್ಸ್​ (AIIMS) ಮಾಹಿತಿ ನೀಡಿದೆ.

    ಮನಮೋಹನ್​ ಸಿಂಗ್ ಅವರ ಆರೋಗ್ಯದಲ್ಲಿ ನಿನ್ನೆ ಏರುಪೇರಾಗಿತ್ತು. ಎದೆನೋವು, ಜ್ವರ ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಏಮ್ಸ್​ಗೆ ದಾಖಲಿಸಲಾಗಿತ್ತು.

    ಇದನ್ನೂ ಓದಿ: ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಆಸ್ಪತ್ರೆಗೆ ದಾಖಲು

    ಸದ್ಯ ಮನಮೋಹನ್​ ಸಿಂಗ್ ಅವರ ಆರೋಗ್ಯ ಸ್ಥಿರವಾಗಿದೆ. ಅಬ್ಸರ್ವೇಶನ್​​ನಲ್ಲಿ ಇಡಲಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಏಮ್ಸ್​ ವೈದ್ಯರು ತಿಳಿಸಿದ್ದಾರೆ. ಹಾಗೇ, ಜ್ವರಕ್ಕೆ ಕಾರಣವೇನು ಎಂಬ ಬಗ್ಗೆ ತಪಾಸಣೆ ಮಾಡುತ್ತಿದ್ದೇವೆ ಎಂದಿದ್ದಾರೆ.

    ಮನಮೋಹನ್​ ಸಿಂಗ್​ ಅವರು 2009ರಲ್ಲಿ ಬೈಪಾಸ್​ ಸರ್ಜರಿಗೆ ಒಳಗಾಗಿದ್ದಾರೆ. ಅದಾದ ಮೇಲೆ ಆರೋಗ್ಯವಾಗಿಯೇ ಇದ್ದರು. 1990ರಲ್ಲಿ ಒಂದು ಬಾರಿ ಬೈಪಾಸ್​ ಸರ್ಜರಿಗೆ ಒಳಗಾಗಿದ್ದು, ಅದಾದ ಬಳಿಕ 2004ರಲ್ಲಿ ಸ್ಟಂಟ್​ ಅಳವಡಿಸಲಾಗಿತ್ತು.

    ಇದನ್ನೂ ಓದಿ: ಅಬಕಾರಿ ಸಚಿವ ಎಚ್​. ನಾಗೇಶ್​ಗೆ ಸಿಎಂ ಬಿಎಸ್​ವೈ ಶಾಕ್​!

    ಮನಮೋಹನ್​ ಸಿಂಗ್​ ಅವರ ಆರೋಗ್ಯಕ್ಕಾಗಿ ಅನೇಕರು ಪ್ರಾರ್ಥಿಸುತ್ತಿದ್ದಾರೆ.

    24ಗಂಟೆಯಲ್ಲಿ 4000 ಕರೊನಾ​ ಕೇಸ್​ಗಳು; ಇರಲಿ ಎಚ್ಚರ..ಮಿತಿಮೀರುತ್ತಿದೆ ವೈರಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts