More

    ವೈದ್ಯ ಲೋಕದಲ್ಲೇ ಕ್ರಾಂತಿ: ಇದೇ ಮೊದಲ ಬಾರಿಗೆ ಎರಡು ತೋಳುಗಳ ಜೋಡಿಸಿ, ಯಶಸ್ವಿ ಶಸ್ತ್ರಚಿಕಿತ್ಸೆ!

    ನ್ಯೂಯಾರ್ಕ್​: ವೈದ್ಯಕೀಯ ಲೋಕದಲ್ಲಿ ಮನುಷ್ಯನೇ ಅಚ್ಚರಿ ಪಡುವಂತಹ ಅಭಿವೃದ್ಧಿ ಕಾಣುತ್ತಿದ್ದು, ಮಾನವನ ಅಂಗಾಂಗಗಳನ್ನೇ ಜೋಡಣೆ ಮಾಡಿ, ಜನರ ಪ್ರಾಣವನ್ನು ಉಳಿಸುತ್ತಿರುವ ವೈದ್ಯರ ಕಾರ್ಯಕ್ಕೆ ಭಾರೀ ಮೆಚ್ಚುಗೆಯಾಗುತ್ತಿದೆ.

    ಈವರೆಗೆ ಹೃದಯ, ಕಿಡ್ನಿ, ಸೇರಿದಂತೆ ದೇಹದ ಇತರೆ ಭಾಗಗಳನ್ನು ಜೋಡಿಸುವುದನ್ನು ಕಾಣುತ್ತಿದ್ದೆವು. ಆದರೆ ಇದೇ ಮೊದಲ ಬಾರಿಗೆ ವ್ಯಕ್ತಿಯ ಎರಡೂ ತೋಳಿನ ಜೋಡಣೆಯನ್ನು ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ.

    ವೈದ್ಯ ಲೋಕದಲ್ಲೇ ಕ್ರಾಂತಿ: ಇದೇ ಮೊದಲ ಬಾರಿಗೆ ಎರಡು ತೋಳುಗಳ ಜೋಡಿಸಿ, ಯಶಸ್ವಿ ಶಸ್ತ್ರಚಿಕಿತ್ಸೆ!

    ಗೆಟಾರ್​​ಸನ್​ ಎಂಬ 49 ವರ್ಷದ ವ್ಯಕ್ತಿ, 11,000 ವೋಲ್ಟ್ಸ್​ ವಿದ್ಯುತ್​ ಪ್ರವಹರಿಸಿ, ಈವ್ರ ಅಪಘಾತಕ್ಕೊಳಗಾಗಿ ತಮ್ಮ ಎರಡೂ ತೋಳುಗಳನ್ನು ಕಳೆದುಕೊಂಡಿದ್ದರು. 1988ರಲ್ಲಿ ತಮ್ಮ ಎರಡೂ ಕೈಗಳನ್ನು ಕಳೆದುಕೊಂಡಿದ್ದ ವ್ಯಕ್ತಿಗೆ ಈಗ ವೈದ್ಯರು ತೋಳು ಅಳವಡಿಸುವ ಮೂಲಕ ಮರುಜನ್ಮ ನೀಡಿದ್ದಾರೆ.

    ಕಳೆದ ವರ್ಷ ಒಂದು ತೋಳನ್ನು ಜೋಡಣೆ ಮಾಡಲಾಗಿತ್ತು, ಈಗ ಇನ್ನೊಂದು ತೋಳನ್ನು ಜೋಡಿಸುವ ಮೂಲಕ ಈ ವ್ಯಕ್ತಿಗೆ ಎರಡೂ ಕೈಗಳನ್ನು ನೀಡಲಾಗಿದೆ. ಕೈ ಇಲ್ಲದ ಈ ವ್ಯಕ್ತಿಗೆ ತನ್ನ ನಾಯಿಮರಿಯೇ ಹಲ್ಲು ಉಜ್ಜಿಸುತ್ತಿತ್ತಂತೆ. ಕಳೆದ ವರ್ಷ ಜೋಡಿಸಿದ್ದ ಕೈ ಈಗ ಸ್ವಲ್ಪ ಸ್ವಲ್ಪ ಅಲುಗಾಡುತ್ತಿದ್ದು, ತನ್ನ ಕೆಲಸ ತಾನು ಮಾಡಿಕೊಳ್ಳುವ ಮಟ್ಟಿಗೆ ಸರಿಹೋಗುತ್ತಿದೆ. ಇನ್ನೊಂದು ಶಸ್ತ್ರ ಚಿಕಿತ್ಸೆ ಮಾಡಿದ್ದು, ಇದು ಕೆಲ ದಿನಗಳ ಕಾಲ ಸಮಯ ತೆಗೆದುಕೊಳ್ಳಲಿದೆ ಎಂದು ವೈದ್ಯರು ತಿಳಿಸಿದ್ದಾರೆ. (ಏಜೆನ್ಸೀಸ್​)

    ರಹಸ್ಯವಾಗಿ 11 ತಿಂಗಳು ಹಸುಗೂಸು ಸೇರಿ ನಾಲ್ಕು ಮಕ್ಕಳನ್ನು ಮನೆಯಲ್ಲಿಟ್ಟುಕೊಂಡಿದ್ದ ನರ್ಸ್​​ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts