More

    ರಹಸ್ಯವಾಗಿ 11 ತಿಂಗಳು ಹಸುಗೂಸು ಸೇರಿ ನಾಲ್ಕು ಮಕ್ಕಳನ್ನು ಮನೆಯಲ್ಲಿಟ್ಟುಕೊಂಡಿದ್ದ ನರ್ಸ್​​ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

    ವಿಜಯಪುರ: ಮಕ್ಕಳನ್ನು ಅಕ್ರಮ ಸಾಕಣೆ ಮಾಡುತ್ತಿದ್ದ ದಾದಿಯನ್ನು ಬಂಧಿಸಿರುವ ಪೊಲೀಸರು 3 ಹೆಣ್ಣು ಹಾಗೂ 1 ಗಂಡು ಮಗುವನ್ನು ರಕ್ಷಿಸಿದ್ದಾರೆ.

    ನಗರದ ಅಥಣಿ ಗಲ್ಲಿ ನಿವಾಸಿ ಜಯಮಾಲಾ ಬಿಜಾಪುರ (ಪಾಟೀಲ) ಬಂಧಿತ ಆರೋಪಿ. ತನ್ನ ಮನೆಯಲ್ಲಿ ಅಕ್ರಮವಾಗಿ ಮಕ್ಕಳನ್ನು ಸಾಕುತ್ತಿದ್ದ ಮಾಹಿತಿ ಆಧರಿಸಿ ಮಕ್ಕಳ ಸಹಾಯವಾಣಿ ತಂಡ ಪೊಲೀಸರ ಸಹಾಯದೊಂದಿಗೆ ದಾಳಿ ನಡೆಸಿದೆ. ಈ ವೇಳೆ 3 ವರ್ಷದ ಎರಡು, 4 ವರ್ಷದ ಒಂದು ಹಾಗೂ 11 ತಿಂಗಳ ಒಂದು ಹಸುಗೂಸು ಪತ್ತೆಯಾಗಿದೆ.

    ಆರೋಪಿ ಜಯಮಾಲಾ ಇಂಡಿ ತಾಲೂಕಿನ ಜಿಗಜಿಣಗಿ ಗ್ರಾಮದ ಪಿಎಚ್‌ಸಿ ಸೆಂಟರ್‌ನಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ 3 ವರ್ಷದಿಂದ ಅನಧಿಕೃತವಾಗಿ ಮಕ್ಕಳನ್ನು ಬೇರೆಡೆಯಿಂದ ಕರೆತಂದು ತಮ್ಮ ಪರಿಚಯದವರಿಗೆ ಕೊಟ್ಟಿರುತ್ತಾರೆ ಎಂಬ ಮಾಹಿತಿ ಮೇರೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಹಾಯಕ್ಕೆ ಬಂತು ಸಹಾಯವಾಣಿ!: ಅಕ್ರಮವಾಗಿ ಮಕ್ಕಳನ್ನು ಸಾಕುತ್ತಿದ್ದಾರೆಂದು ಮಕ್ಕಳ ಸಹಾಯವಾಣಿಗೆ ಕರೆ ಬಂದಿತ್ತು. ತಕ್ಷಣ 112ಗೆ ಕರೆ ಮಾಡಿ ಪೊಲೀಸರನ್ನು ಸಹಾಯಕ್ಕೆ ಕರೆದೆವು. ಗಾಂಧಿ ಚೌಕ್ ಠಾಣೆ ವ್ಯಾಪ್ತಿ ಬರುತ್ತಿದ್ದರಿಂದ ಆ ಸಿಬ್ಬಂದಿಯ ಸಹಾಯದಿಂದ ದಾಳಿ ನಡೆಸಲಾಯಿತು. ಪ್ರಕರಣ ಕೂಡ ದಾಖಲಾಗಿದೆ. ಮಕ್ಕಳನ್ನು ಸಾಕಲು, ದತ್ತು ಪಡೆಯಲು ಸರ್ಕಾರದ ವಿಧಾನವಿದೆ. ಆ ಪ್ರಕಾರವೇ ಆಗಬೇಕು. ಹೇಗೆ ಸಾಕಿದ್ದಾರೆ ಎಂಬುದು ತನಿಖೆ ಆಗಬೇಕು. ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗಿದೆಯಾ ಎಂಬುದರ ಬಗ್ಗೆಯೂ ತನಿಖೆ ಆಗಬೇಕು ಎಂದು ಮಕ್ಕಳ ಸಹಾಯವಾಣಿ ಸಂಚಾಲಕಿ ಸುನಂದಾ ತೋಳಬಂದಿ ಹೇಳಿದ್ದಾರೆ.

    ಶೋಕಿಗಾಗಿ ಮಾಡಬಾರದ್ದು ಮಾಡಿ ಜೈಲು ಸೇರಿದ ಪ್ರತಿಷ್ಟಿತ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts