More

    ಹೆಂಡತಿಗೆ ಲಸಿಕೆ ನೀಡಿದ್ದಕ್ಕೆ ನರ್ಸ್ ಮುಖಕ್ಕೆ ಪಂಚ್​ ಮಾಡಿದ ಭೂಪ!

    ಖ್ಯೂಬೆಕ್​​: ಕರೊನಾ ವಿರುದ್ಧದ ಹೋರಾಟದಲ್ಲಿ ಲಸಿಕೆ ಮಹತ್ವದ ಪಾತ್ರ ವಹಿಸಿದ್ದು, ರೋಗನಿರೋಧಕತೆ ಹೆಚ್ಚಿಸುವಲ್ಲಿ ಮತ್ತು ಸೋಂಕಿನ ತೀವ್ರತೆ ತಗ್ಗಿಸುವಲ್ಲಿ ಅದರ ಪರಿಣಾಮಕಾರಿತ್ವ ವೈಜ್ಞಾನಿಕವಾಗಿ ಸಾಬೀತಾಗಿದೆ. ಆದರೆ, ಹತ್ತು ಹಲವಾರು ಜನರು ಲಸಿಕೆಯಿಂದ ಹೆದರಿ ದೂರ ಉಳಿಯುವ, ಅದನ್ನು ವಿರೋಧಿಸುವ ಘಟನೆಗಳು ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಕಂಡುಬರುತ್ತಿದೆ. ಇಂಥದ್ದೇ ಒಂದು ಪ್ರಸಂಗದಲ್ಲಿ, ವ್ಯಕ್ತಿಯೊಬ್ಬ ಅನುಮತಿ ಪಡೆಯದೆ ತನ್ನ ಹೆಂಡತಿಗೆ ಲಸಿಕೆ ನೀಡಿದಳೆಂದು ನರ್ಸ್​ ಮೇಲೆ ಹಲ್ಲೆ ಮಾಡಿರುವುದು ಕೆನಡಾದಿಂದ ವರದಿಯಾಗಿದೆ.

    ಕೆನಡಾದ ಖ್ಯೂಬೆಕ್​ ಪ್ರಾಂತ್ಯದಲ್ಲಿರುವ ಶೇರ್​ಬ್ರೂಕ್​ ನಗರದಲ್ಲಿ ಈ ಅತಿರೇಕದ ಘಟನೆ ನಡೆದಿದೆ. ಫಾರ್ಮೆಸಿಯೊಂದರಲ್ಲಿ ಲಸಿಕೆಗಳನ್ನು ನೀಡುವ ಜವಾಬ್ದಾರಿ ನೀಡಲಾಗಿದ್ದ ನರ್ಸ್​ಳ ಮೇಲೆ ಪುರುಷನೊಬ್ಬ ಸೆ.20ರ ಸೋಮವಾರದಂದು ಸಿಟ್ಟಿನಿಂದ ಹರಿಹಾಯ್ದಿದ್ದಾನೆ. ತನ್ನ ಹೆಂಡತಿಗೆ ತನ್ನ ಒಪ್ಪಿಗೆಯಿಲ್ಲದೆ ಕರೊನಾ ಲಸಿಕೆ ನೀಡಿದ್ದಕ್ಕಾಗಿ ನರ್ಸ್​ನ ಮುಖಕ್ಕೆ ಗುದ್ದಿದ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು, ಆತನನ್ನು ಬಂಧಿಸುವ ಪ್ರಯತ್ನದಲ್ಲಿದ್ದಾರೆ ಎಂದು ಪೊಲೀಸ್ ವಕ್ತಾರ ಮಾರ್ಟಿನ್​ ಕ್ಯಾರಿಯರ್​ ತಿಳಿಸಿದ್ದಾರೆ.

    ಇದನ್ನೂ ಓದಿ: ಯಪ್ಪೋ ಬ್ಯಾಡಪ್ಪೋ, ನನಗೆ ಸೂಜಿ ಬೇಡ- ವಿಜಯನಗರದ ಮಹಿಳೆ ಗೋಳಾಟ, ಸಿಬ್ಬಂದಿ ಸುಸ್ತು

    ಚುನಾವಣೆಯ ಪರಿಸರ ಇರುವ ಕೆನಡಾದಲ್ಲಿ ಲಸಿಕೆ ವಿರೋಧಿ ಪ್ರತಿಭಟನೆಗಳು ಬಿರುಸಿನಿಂದ ಸಾಗಿವೆ. ಪ್ರತಿಭಟನಾಕಾರರು ರಸ್ತೆಗಳಲ್ಲಿ, ಶಾಲೆ ಮತ್ತು ಆಸ್ಪತ್ರೆಗಳ ಹತ್ತಿರ ಜಮಾ ಆಗಿ ಆ್ಯಂಟಿ ವ್ಯಾಕ್ಸಿನ್​ ಘೋಷಣೆಗಳನ್ನು ಕೂಗಿ ಪ್ರದರ್ಶನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್​ ಟ್ರೂಡ್ಯೂ ಅವರು ಕಠಿಣ ನಿಲುವು ತಳೆದಿದ್ದು, ಆರೋಗ್ಯ ಕಾರ್ಯಕರ್ತರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲು ಮುಂದಾಗಿದ್ದಾರೆ. ಖ್ಯೂಬೆಕ್​ ಪ್ರೀಮಿಯರ್​ ಫ್ರಾನಾಯ್ಸ್​ ಲಿಗಾಲ್ಟ್​ ಶಾಲೆಗಳು ಮತ್ತು ಆಸ್ಪತ್ರೆಗಳ ಬಳಿ ಪ್ರತಿಭಟನೆ ನಡೆಸಿ ಮಕ್ಕಳಿಗೆ-ರೋಗಿಗಳಿಗೆ ತೊಂದರೆ ಕೊಡುವುದನ್ನು ನಿಲ್ಲಿಸಲು ವಿಶೇಷ ಕಾನೂನು ತರುವುದಾಗಿ ಪ್ರಕಟಿಸಿದ್ದಾರೆ ಎಂದು ರಿಯಟರ್ಸ್​ ಸುದ್ದಿ ಸಂಸ್ಥೆ ವರದಿ ಮಾಡಿದೆ. (ಏಜೆನ್ಸೀಸ್)

    ಭಾರತದ ಇನ್ನೆರಡು ಬೀಚ್​​ಗಳಿಗೆ ಅಂತಾರಾಷ್ಟ್ರೀಯ ಬ್ಲೂ ಫ್ಲ್ಯಾಗ್​ ಮಾನ್ಯತೆ

    ಅಗ್ನಿ ಅನಾಹುತದಿಂದ ಎಚ್ಚೆತ್ತ ಪಾಲಿಕೆ… ಅಪಾರ್ಟ್​ಮೆಂಟ್​ ಬಾಲ್ಕನಿಗಳ ಮೇಲೆ ಬಿಬಿಎಂಪಿ ಕಣ್ಣು

    ಕಾಲುಗಳಿಗೆ ಶಕ್ತಿ ನೀಡುವ ಸರಳ ಯೋಗಾಸನವಿದು; ಎಲ್ಲರೂ ಮಾಡಬಹುದು!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts