More

    ಸುಂದರಿಯರಿಂದ ಮಸಾಜ್ ಪಡೆಯಲು ಆಸೆ ಪಟ್ಟ… 55 ಲಕ್ಷ ರೂಪಾಯಿ ಕಳೆದುಕೊಂಡ !

    ದುಬೈ: ದುಬೈನಲ್ಲಿ ವಾಸಿಸುತ್ತಿರುವ ಭಾರತೀಯನೊಬ್ಬ ಸುಂದರ ಹುಡುಗಿಯರಿಂದ ಮಸಾಜ್ ಪಡೆಯುವ ಆಸೆಗೆ ಬಿದ್ದು, ಸುಮಾರು 55 ಲಕ್ಷ ರೂಪಾಯಿ ಹಣ ಕಳೆದುಕೊಂಡ ಘಟನೆಯನ್ನು ಗಲ್ಫ್ ನ್ಯೂಸ್​ ವರದಿ ಮಾಡಿದೆ. ಡೇಟಿಂಗ್ ಆ್ಯಪ್​ನಲ್ಲಿ ನಕಲಿ ಮಸಾಜ್ ಪಾರ್ಲರ್​ನ ಜಾಹೀರಾತು ಕಳಿಸಿ ವಂಚಿಸಿದ ಮೂವರು ನೈಜೀರಿಯಾದ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.

    ಈ ಪ್ರಕರಣದಲ್ಲಿ ಹಣ ಕಳೆದುಕೊಂಡ 33 ವರ್ಷ ವಯಸ್ಸಿನ ಮಹಾಶಯನ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಆದರೆ, ಅವನು ವಂಚನೆಗೊಳಗಾದ ವಿನೂತನ ವಿಧಾನವನ್ನು ವರದಿ ವಿವರಿಸಿದೆ. ಈ ಬಗೆಗೆ ದುಬೈ ಪೊಲೀಸರು ದಾಖಲಿಸಿರುವ ಮೊಕದ್ದಮೆಯನ್ನು ದುಬೈ ಕೋರ್ಟ್ ಆಫ್ ಫಸ್ಟ್ ಇನ್ಸ್​ಟೆನ್ಸ್ ವಿಚಾರಣೆ ನಡೆಸುತ್ತಿದೆ.

    ಇದನ್ನೂ ಓದಿ: ನವ ದಂಪತಿಗೆ ಪೆಟ್ರೋಲ್​, ಸಿಲಿಂಡರ್​ ಗಿಫ್ಟ್​! ಸ್ನೇಹಿತರೆಂದರೆ ಹೀಗಿರಬೇಕು ಎನ್ನುತ್ತಿದ್ದಾರೆ ನೆಟ್ಟಿಗರು

    ನವೆಂಬರ್ 2020 ರಲ್ಲಿ ಟಿಂಡರ್ ಡೇಟಿಂಗ್ ಆ್ಯಪ್​ಅನ್ನು ಬಳಸುತ್ತಿದ್ದ ಗಂಡಸಿಗೆ ಸುಂದರ ಹುಡುಗಿಯರ ಚಿತ್ರವಿರುವ ಮಸಾಜ್ ಪಾರ್ಲರ್​ನ ಸಂದೇಶ ಬಂದಿದೆ. 200 ದಿರ್ಹಾಮ್ (3,950 ರೂಪಾಯಿ)ಗೆ ಬಾಡಿ ಮಸಾಜ್​ ನೀಡುವ ಈ ಜಾಹೀರಾತಿನಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಾನೆ. ಅವರು ನೀಡಿದ ವಿವರದ ಪ್ರಕಾರ ದುಬೈನ ಅಲ್​ ರೇಫಾ ಪ್ರದೇಶದಲ್ಲಿರುವ ಅಪಾರ್ಟ್​ಮೆಂಟ್​ ಒಂದಕ್ಕೆ ಹೋಗಿದ್ದಾನೆ.

    “ಒಳಗೆ ಹೋದಾಗ ನಾಲ್ಕು ಆಫ್ರಿಕನ್ ಮಹಿಳೆಯರಿದ್ದರು. ನನ್ನ ಮೊಬೈಲ್​ನಲ್ಲಿ ಬ್ಯಾಂಕ್ ಆ್ಯಪ್​ಅನ್ನು ತೆರೆದು ಹಣ ವರ್ಗಾಯಿಸುವಂತೆ ಹೇಳಿದರು. ಕುತ್ತಿಗೆಗೆ ಚಾಕು ಹಿಡಿದು ಹೆದರಿಸಿದರು. ಕಪ್ಪಾಳಕ್ಕೆ ಹೊಡೆದರು” ಎಂದು ಸಂತ್ರಸ್ತನು ದೂರಿನಲ್ಲಿ ತಿಳಿಸಿದ್ದ. ಒಬ್ಬ ಮಹಿಳೆ ಆತನ ಕ್ರೆಡಿಟ್ ಕಾರ್ಡ್ ತೆಗೆದುಕೊಂಡು ಎಟಿಎಂನಿಂದ 30 ಸಾವಿರ ದಿರ್ಹಾಮ್​(5,92,586 ರೂ.) ಡ್ರಾ ಮಾಡಿದ್ದಾಳೆ. ಆತನನ್ನು ಒಂದು ದಿನದ ಮಟ್ಟಿಗೆ ಅಪಾರ್ಟ್​ಮೆಂಟಲ್ಲೇ ಬಂಧಿಸಿಟ್ಟಿದ್ದ ಮಹಿಳೆಯರು, ಅವನ ಖಾತೆಯಿಂದ 250 ಸಾವಿರ ದಿರ್ಹಾಮ್​(49,38,319 ರೂ.) ಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಹೀಗೆ ಒಟ್ಟು 55,30,806 ರೂಪಾಯಿಗಳನ್ನು ಲೂಟಿ ಮಾಡಿದ್ದಾರೆ.

    ಇದನ್ನೂ ಓದಿ: ರಾಜಕಾರಣಿಗಳ, ಪೊಲೀಸ್ ಅಧಿಕಾರಿಗಳ ನಕಲಿ ಖಾತೆ ಮಾಡಿದ್ದ, ಹಣ ಪಡೆಯುತ್ತಿದ್ದ !

    “ನನ್ನ ಐಫೋನನ್ನೂ ಕಸಿದುಕೊಂಡ ಮೇಲೇ ನನ್ನನ್ನು ಅಪಾರ್ಟ್​ಮೆಂಟಿನಿಂದ ಹೊರಹೋಗಲು ಬಿಟ್ಟರು. ಆ ಕೂಡಲೇ ನಾನು ಬ್ಯಾಂಕಿಗೆ ವಿಚಾರ ತಿಳಿಸಿ, ಪೊಲೀಸರಿಗೆ ದೂರು ನೀಡಿದೆ” ಎಂದು ಆತ ವಿವರಿಸಿದ್ದಾನೆ. ತೀವ್ರ ತನಿಖೆಯ ನಂತರ, ಮೂವರು ಮಹಿಳೆಯರನ್ನು ಶಾರ್ಜಾದಿಂದ ಬಂಧಿಸಿರುವ ದುಬೈ ಪೊಲೀಸರು, ಮತ್ತೊಬ್ಬ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಹದಿಹರೆಯದ ಮಗಳನ್ನೇ ರೇಪ್ ಮಾಡಿ ಗರ್ಭಿಣಿಯಾಗಿಸಿದ, ಗರ್ಭಪಾತವಾದ ಮೇಲೆ ಮತ್ತೆ ಮೇಲೆರಗಿದ… ಕೋರ್ಟ್ ಹೇಳಿದ್ದೇನು ?

    ಕಲ್ಲಿದ್ದಲು ಕಳ್ಳಸಾಗಾಣಿಕೆ : ಅಭಿಷೇಕ್ ಬ್ಯಾನರ್ಜಿ ಹೆಂಡತಿಗೆ ಸಿಬಿಐ ನೋಟೀಸು

    ಹೆಚ್ಚು ಹರಡುವ ಹೊಸ ರೂಪ ತಾಳುತ್ತಿದೆ ಕರೊನಾ : ವಹಿಸಿರಿ ಕಟ್ಟೆಚ್ಚರ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts