More

    ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಗೆಜ್ಜೆಸೇವೆ

    ಪುತ್ತೂರು ಗ್ರಾಮಾಂತರ: ತೆಂಕುತಿಟ್ಟಿನ ಪ್ರಸಿದ್ಧ ಶ್ರೀ ಗೆಜ್ಜೆಗಿರಿ ಮೇಳದವರಿಂದ ಮಸ್ಕತ್ ಮತ್ತು ದುಬೈನಲ್ಲಿ ಮಾತೆ ದೇಯಿ ಬೈದ್ಯೆತಿ ಮತ್ತು ಧೂಮಾವತಿ ಅಮ್ಮನವರ ಬೆಳಕಿನ ಯಕ್ಷಗಾನ ಗೆಜ್ಜೆಸೇವೆ ನಡೆಯಲಿದ್ದು, ಯಕ್ಷಗಾನ ಇತಿಹಾಸದಲ್ಲೇ ಪೂರ್ಣ ಮೇಳವೊಂದು ಪ್ರಥಮ ಬಾರಿಗೆ ವಿದೇಶದಲ್ಲಿ ಯಕ್ಷಗಾನ ಸೇವೆ ನೀಡುತ್ತಿರುವುದು ಚಾರಿತ್ರಿಕ ದಾಖಲೆಯಾಗಿದೆ ಎಂದು ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ತಿಳಿಸಿದೆ.

    ಒಮಾನ್ ಬಿಲ್ಲವಾಸ್ ಕೂಟದ ವತಿಯಿಂದ ಏ.19ರಂದು ಒಮಾನ್ ದೇಶದ ಮಸ್ಕತ್‌ನ ರೂವಿ ಅಲ್ ಫಲಾಜ್ ಹೋಟೆಲ್ ಗ್ರ್ಯಾಂಡ್ ಹಾಲ್‌ನಲ್ಲಿ ಮಧ್ಯಾಹ್ನ 3.15ರಿಂದ ಗೆಜ್ಜೆಗಿರಿ ಕ್ಷೇತ್ರದ ಸ್ಥಳ ಪುರಾಣ ಆಧಾರಿತ ನಿತಿನ್ ತೆಂಕಕಾರಂದೂರು ವಿರಚಿತ, ಯೋಗೀಶ್ ಕುಮಾರ್ ಚಿಗುರುಪಾದೆ ಪದ್ಯ ರಚನೆಯ ಯಶಸ್ವಿ 225ನೇ ಪ್ರದರ್ಶನದೊಂದಿಗೆ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.

    ಬಿಲ್ಲವ ಫ್ಯಾಮಿಲಿ ದುಬೈ ಕೂಟದ ವತಿಯಿಂದ 20ರಂದು ಬರ್ ದುಬೈಯ ಜದಫ್ ಸ್ವಿಸ್ ಇಂಟರ್‌ನ್ಯಾಷನಲ್ ಸೈಂಟಿಫಿಕ್ ಸ್ಕೂಲ್ ಹಾಲ್‌ನಲ್ಲಿ ಸಂಜೆ ಗಂಟೆ 5ರಿಂದ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ 226ನೇ ಪ್ರಯೋಗ ನಡೆಯಲಿದೆ.

    ಪ್ರಶಾಂತ್ ಪೂಜಾರಿ ಪಜೀರು ಮಸ್ಕತ್ ಅವರ ವ್ಯವಸ್ಥಾಪಕತ್ವದಲ್ಲಿ, ನವೀನ್ ಸುವರ್ಣ ಸಜಿಪ ಮತ್ತು ನವೀನ್ ಅಮೀನ್ ಶಂಕರಪುರ ಅವರ ಸಂಚಾಲಕತ್ವದಲ್ಲಿ ಗೆಜ್ಜೆಗಿರಿ ಮೇಳವು ಯಶಸ್ವಿಯಾಗಿ ಮುನ್ನಡೆಯುತ್ತಿದೆ.

    ಯಕ್ಷಗಾನ ತಿರುಗಾಟದ ಇತಿಹಾಸದಲ್ಲೇ ಪೂರ್ಣ ಮೇಳವೊಂದು ಪ್ರಪ್ರಥಮ ಬಾರಿಗೆ ವಿದೇಶದಲ್ಲಿ ಪ್ರದರ್ಶನ ನೀಡುತ್ತಿರುವುದು ಹೆಗ್ಗಳಿಕೆ ಎಂದು ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಪೀತಾಂಬರ ಹೇರಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts