More

    ಮನೆ ಮುಂದೆ ಕಾರು ನಿಲ್ಲಿಸುತ್ತಾನೆಂದು ಜೀವವನ್ನೇ ತೆಗೆದ ದಾಯಾದಿಗಳು!

    ಹೊಸಕೋಟೆ: ಅನುಗೊಂಡನಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯ ಮೇಡಿ ಮಲ್ಲಸಂದ್ರ ಗ್ರಾಮದಲ್ಲಿ ಭಾನುವಾರ ರಾತ್ರಿ ಮನೆ ಮುಂದೆ ಕಾರು ನಿಲ್ಲಿಸುವ ವಿಚಾರಕ್ಕೆ ನೆರೆಹೊರೆ ಮನೆಯವರ ನಡುವಿನ ಜಗಳ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿದೆ. ಇಸ್ಮಾಯಿಲ್ ಖಾನ್ (26) ಕೊಲೆಯಾಗಿದ್ದು, ಆರೋಪಿಗಳಾದ ಸೈಯದ್ ಹಿದಾಯತ್ ಶಾ (28), ಸೈಯದ್ ಅಜಿಮ್ ಶಾ (26) ಮತ್ತು ಸಯ್ಯದ್ ಅಖಿಲ್ ಶಾ (33) ಪರಾರಿಯಾಗಿದ್ದಾರೆ.

    ಹಳೇ ದ್ವೇಷಕ್ಕೆ ಕೊಲೆ: ಕೊಲೆಯಾದ ಇಸ್ಮಾಯಿನ್ ಖಾನ್ ಹಾಗೂ ಕೊಲೆ ಆರೋಪಿಗಳು ಸಂಬಂಧದಲ್ಲಿ ದಾಯಾದಿಗಳಾಗಿದ್ದು, ಕಳೆದ 20 ವರ್ಷದಿಂದ ಮೇಡಿಮಲ್ಲಸಂದ್ರ ಗ್ರಾಮದಲ್ಲಿ ಅಕ್ಕಪಕ್ಕದ ಮನೆಯಲ್ಲಿ ವಾಸವಿದ್ದರು. ಎಲ್ಲರೂ ಗುಜರಿ ಹಾಗೂ ಮಾಂಸದಂಗಡಿಗಳಲ್ಲಿ ಕೆಲಸ ಮಾಡಿಕೊಂಡಿದ್ದರು. ಜಮೀನು ವಿಷಯಕ್ಕೆ ಎರಡೂ ಕುಟುಂಬದ ನಡುವೆ ಈ ಹಿಂದೆಯಿಂದ ಮನಸ್ತಾಪವಿದ್ದು ಆಗಾಗ ಸಣ್ಣಪುಟ್ಟ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

    ಇದನ್ನೂ ಓದಿ: ಕಲ್ಯಾಣಮಂಟಪಕ್ಕೂ ಕುಡಿದೇ ಬಂದ ವರ, ಮದುವೆಯೇ ಬೇಡ ಎಂದ ವಧು!

    ಕಾರು ನಿಲ್ಲಿಸಬೇಡ: ಮನೆ ಮುಂದಿನ ರಸ್ತೆಯಲ್ಲಿ ಇಸ್ಮಾಯಿಲ್ ಕಾರು ಪಾರ್ಕಿಂಗ್ ಮಾಡುತ್ತಿದ್ದ, ಈ ಬಗ್ಗೆ ಆರೋಪಿ ಮನೆಯವರು ಆಗಾಗ ತಗಾದೆ ತೆಗೆಯುತ್ತಿದ್ದರು, ಭಾನುವಾರ ರಾತ್ರಿಯೂ ಇದೇ ವಿಷಯಕ್ಕೆ ಎರಡೂ ಮನೆಯವರ ನಡುವೆ ಗಲಾಟೆ ಆರಂಭವಾಗಿದೆ, ಇಸ್ಮಾಯಿಲ್ ಕಾರು ನಿಲ್ಲಿಸುವಾಗ ಇದಕ್ಕೆ ಪ್ರತಿರೋಧ ವ್ಯಕ್ತವಾಗಿದೆ, ಇಲ್ಲಿ ಕಾರು ನಿಲ್ಲಿಸುವುದರಿಂದ ಮನೆಗೆ ಹೋಗಿಬರಲು ತೊಂದರೆಯಾಗುತ್ತದೆ ಎಂದು ಆರೋಪಿ ಕಡೆಯವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ನಿದ್ರಾಹೀನತೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ; ನಿದ್ರಾಹೀನತೆಗೆ ಪ್ರಮುಖ ಕಾರಣವೇ ಇದು!

    ಇದು ಸರ್ಕಾರಿ ರಸ್ತೆ ನಾನು ಹೇಗಾದರೂ ಕಾರು ನಿಲ್ಲಿಸುತ್ತೇನೆ ಏನು ಮಾಡುತ್ತೀರೋ ಮಾಡಿ ಎಂದು ಇಸ್ಮಾಯಿಲ್ ಅವಾಜ್ ಹಾಕಿದ್ದಾನೆ, ಈ ವೇಳೆ ಎರಡೂ ಕಡೆಯವರಿಗೂ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ, ಈ ವೇಳೆ ಆರೋಪಿಗಳು ಇಸ್ಮಾಯಿಲ್ ಮೇಲೆ ಮುಗಿಬಿದ್ದು ಚಾಕುವಿನಿಂದ ಎದೆಯ ಭಾಗಕ್ಕೆ ಇರಿದು ಹತ್ಯೆ ಮಾಡಿದ್ದಾರೆ. ಇಸ್ಮಾಯಿಲ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದಂತೆ ಚಾಕುವನ್ನು ಅಲ್ಲೇ ಎಸೆದು ಆರೋಪಿಗಳು ಪರಾರಿಯಾಗಿದ್ದಾರೆ.

    ಮೃತದೇಹ ಹಸ್ತಾಂತರ: ಪ್ರಕರಣದ ಮಾಹಿತಿ ತಿಳಿದ ಕೂಡಲೇ ಅನುಗೊಂಡನಹಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿ ಮೃತ ದೇಹವನ್ನು ವೈದೇಹಿ ಆಸ್ತತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹ ಹಸ್ತಾಂತರಿಸಿದ್ದಾರೆ. ಪರಾರಿಯಾಗಿರುವ ಕೊಲೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದ್ದು ಅನುಗೊಂಡನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವಿಮಾನದಲ್ಲೇ ಹೃದಯಾಘಾತ; ಆಕಾಶದಲ್ಲೇ ಹಾರಿಹೋದ ಪ್ರಾಣಪಕ್ಷಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts