More

    ದೇಶೀಯ ಸ್ಟಿವ್​ ಇರ್ವಿನ್​…! ಮೊಸಳೆ ಬಾಯಿಂದ ಪಾರಾಗಿ ಬಂದ

    ವಡೋದರಾ: ಸ್ನಾನಕ್ಕೆಂದು ನದಿಗಿಳಿದವನಿಗೆ ಅಂಥದ್ದೊಂದು ಕಲ್ಪನೇಯೇ ಇರಲಿಲ್ಲ. ಆದರೆ, ತನ್ನ ಧೈರ್ಯದಿಂದಲೇ ಕೈಗೆ ಬಾಯಿ ಹಾಕಿದ್ದ ಮೊಸಳೆಯನ್ನು ಇನ್ನೊಂದು ಕೈಯಿಂದ ಗುದ್ದಿ ಮರುಜನ್ಮ ಪಡೆದಿದ್ದಾನೆ.

    ವಾಗೋಡಿಯಾ ಗ್ರಾಮದ ನಿವಾಸಿ 46 ವರ್ಷದ ಜಗದೀಶ್​ ವಾಸವಾ. ದೇವ್​ ನದಿಯಲ್ಲಿ ಸ್ನಾನಕ್ಕೆಂದು ನೀರಿಗಿಳಿದಿದ್ದ. ಅಷ್ಟರಲ್ಲಿಯೇ ನದಿಯಲ್ಲಿದ್ದ 10 ಅಡಿ ಉದ್ದದ ಮೊಸಳೆ ಈತನತ್ತ ಧಾವಿಸಿ ಕೈಗೆ ಬಾಯಿ ಹಾಕಿದೆ. ಆತನನ್ನು ಎಳೆದೊಯ್ಯಲು ಮುಂದಾಗಿದೆ. ಆದರೆ, ಧೈರ್ಯಗೆಡದ ಜಗದೀಶ್​ ಇನ್ನೊಂದು ಕೈಯಿಂದ ಮೊಸಳೆಗೆ ಗುದ್ದಲು ಶುರು ಮಾಡಿದ್ದಾನೆ.

    ಇದನ್ನೂ ಓದಿ; ಗುಣಲಕ್ಷಣಗಳಿಲ್ಲದವರಿಂದ ಕರೊನಾ ಹರಡುವುದಿಲ್ಲ; ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಯಿಂದಲೇ ಹೇಳಿಕೆ

    ಜಗದೀಶ್​ ನೀರಿಗಿಳಿದಿದ್ದ ಜಾಗದಲ್ಲಿ ಅಷ್ಟೇನೂ ಆಳವಿರಲಿಲ್ಲ. ಮೊಸಳೆ ತನ್ನ ಕೈಬಿಡುವವರೆಗೂ ಆತ ಅದರ ಮೇಲೆ ಹಲ್ಲೆ ನಡೆಸುತ್ತಲೇ ಇದ್ದ. ಕೊನೆಗೆ ಮೊಸಳೆ ಆತನ ಕೈ ಬಿಟ್ಟಿದೆ. ಜತೆಗೆ ಜೋರಾಗಿ ಕಿರಿಚಿದ್ದರಿಂದ ಗ್ರಾಮಸ್ಥರು ಕೂಡ ಅಲ್ಲಿಗೆ ಬಂದಿದ್ದಾರೆ. ಜಗದೀಶ್​ನ ಕೈ ಹಾಗೂ ಎದೆಗೆ ಭಾರಿ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಜನ ಈತನನ್ನು ದೇಶೀಯ ಸ್ಟಿವ್​ ಇರ್ವಿನ್​​ ಎಂದೇ ಕರೆಯುತ್ತಿದ್ದಾರಂತೆ…!

    ಇದೇ ನದಿಯಲ್ಲಿ ಕೆಲ ದಿನಗಳ ಹಿಂದಷ್ಟೇ ಮಹಿಳೆಯೊಬ್ಬರು ಮೊಸಳೆಗೆ ಬಲಿಯಾಗಿದ್ದಾರೆ. ನೀರಿಗಿಳಿಯಬೇಡಿ, ಮೊಸಳೆಗಳಿವೆ ಎಂದು ಹೇಳಿದರೂ ಜನರು ಕೇಳುತ್ತಿಲ್ಲ. ಜತೆಗೆ, ಅಪಾಯಕಾರಿ ಪ್ರದೇಶ ಎಂದು ಹಲವು ಕಡೆಗಳಲ್ಲಿ ಸೂಚನೆ ಫಲಕಗಳನ್ನು ಹಾಕಲಾಗಿದೆ ಎಮದು ಅರಣ್ಯಾಧಿಕಾರಿಗಳು ಹೇಳುತ್ತಾರೆ. ಮೊಸಳೆ ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ವರ್ಷಾನುಗಟ್ಟಲೇ ಸಿಗಲಿದೆ ಕೋವಿಡ್​ನಿಂದ ರಕ್ಷಣೆ; ಆಕ್ಸ್​ಫರ್ಡ್​ ಲಸಿಕೆ ಹುಟ್ಟಿಸಿದೆ ಹೊಸ ಭರವಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts