More

    ಸಿಡಿಲ ಹೊಡೆತಕ್ಕೆ ತಲೆ ಸೀಳಿ ಹೋದರೂ ಬದುಕುಳಿದ ರೈತ; ಮತ್ತೊಂದೆಡೆ ಸಿಡಿಲಿನಿಂದಾಗಿ ಇಬ್ಬರು ಹಾಗೂ 13 ಕುರಿಗಳ ಸಾವು…

    ವಿಜಯನಗರ: ರಾಜ್ಯದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಸಿಡಿಲಿನಿಂದಾಗಿ ಇಬ್ಬರು ಮೃತಪಟ್ಟಿದ್ದು, 13 ಕುರಿಗಳು ಕೂಡ ಸಾವಿಗೀಡಾಗಿವೆ. ಆದರೆ ಪವಾಡ ಎಂಬಂತೆ ಇಲ್ಲೊಬ್ಬ ವ್ಯಕ್ತಿಗೆ ಸಿಡಿಲು ಹೊಡೆದು ತಲೆ ಸೀಳಿ ಹೋಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಕ್ಷರಶಃ ಕೂದಲೆಳೆಯ ಅಂತರದಲ್ಲಿ ಅವರು ಸಾವಿನಿಂದ ಬಚಾವ್ ಆಗಿದ್ದಾರೆ.

    ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಕಿರವತ್ತಿ ಸಮೀಪದ ಖಾರೆವಾಡದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಜನ್ನಾಬಾಯಿ ಕಾನು ಶಳಕೆ (40) ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ. ಕೊಪ್ಪಳ ಜಿಲ್ಲೆ ಕುಕನೂರು ತಾಲೂಕು ಕುದರಿಮೋತಿ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಲಾಡೆನ ಸಾಬ (28) ಎಂಬವರು ಕೂಡ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

    ಇನ್ನೊಂದೆಡೆ ಗದಗ ಜಿಲ್ಲೆ ಮುಂಡರಗಿಯ ಡೋಣಿ ತಾಂಡಾದಲ್ಲಿನ ನಿವಾಸಿಗಳಾದ ಶರಣಪ್ಪ ಚವ್ಹಾಣ್ ಹಾಗೂ ಸೋಮಪ್ಪ ಚವ್ಹಾಣ್ ಎಂಬವರಿಗೆ ಸೇರಿದ 13 ಕುರಿಗಳು ಸಿಡಿಲು ಬಡಿದು ಮೃತಪಟ್ಟಿವೆ. ಸ್ಥಳಕ್ಕೆ ಮುಂಡರಗಿ ತಹಶೀಲ್ದಾರ್ ಆಶಪ್ಪ ಪೂಜಾರಿ ಭೇಟಿ ನೀಡಿದ್ದಾರೆ.

    ಆದರೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಗರಗ ಗ್ರಾಮದಲ್ಲಿ ಸಿಡಿಲು ಹೊಡೆದರೂ ಅಚ್ಚರಿ ಎಂಬಂತೆ ರೈತರೊಬ್ಬರು ಬದುಕುಳಿದಿದ್ದಾರೆ. ಮೇದಾರ ನಿಂಗಪ್ಪ (35) ಎಂಬ ರೈತ ಸಿಡಿಲಿನ ಹೊಡೆತಕ್ಕೆ ಸಿಲುಕಿದ್ದರ ಪರಿಣಾಮ ಅವರ ನೆತ್ತಿಯಲ್ಲಿ ಸೀಳಿದ ಗಾಯವಾಗಿದೆ. ಅದಾಗ್ಯೂ ಅದೃಷ್ಟವಶಾತ್ ಅವರು ಸಾವಿನಿಂದ ಪಾರಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿನ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಸಿಡಿಲ ಹೊಡೆತಕ್ಕೆ ತಲೆ ಸೀಳಿ ಹೋದರೂ ಬದುಕುಳಿದ ರೈತ; ಮತ್ತೊಂದೆಡೆ ಸಿಡಿಲಿನಿಂದಾಗಿ ಇಬ್ಬರು ಹಾಗೂ 13 ಕುರಿಗಳ ಸಾವು...
    ಸಿಡಿಲು ನೆತ್ತಿ ಸೀಳಿದರೂ ಬದುಕುಳಿದಿರುವ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts