More

    ತಲೆ ಇಲ್ಲದೆಯೂ ಜಿರಳೆಗಳು ಹೇಗೆ ಬದುಕಬಲ್ಲವು? ಇಲ್ಲಿದೆ ನೋಡಿ ಅಚ್ಚರಿಯ ಮಾಹಿತಿ…

    ತಲೆ ಇಲ್ಲದೆಯೋ ಬದುಕಬಹುದು ಎಂಬುದನ್ನು ಊಹೆ ಮಾಡಿಕೊಳ್ಳಲು ಕೂಡ ಸಾಧ್ಯವಿಲ್ಲ. ಆದರೆ, ಜಿರಳೆಗಳು ತಲೆ ಇಲ್ಲದೆಯೂ ಹಲವು ವಾರಗಳ ಕಾಲ ಜೀವಿಸಬಲ್ಲದು ಎಂಬ ಸಂಗತಿ ನಿಮಗೆ ಗೊತ್ತಿದೆಯೇ? ಹೌದು, ಜಿರಳೆಗಳ ತಲೆಯನ್ನು ಕತ್ತರಿಸಿದರೂ ಅವು ಬದುಕಿರುತ್ತವೆ. ತಲೆ ಇಲ್ಲದೆಯೂ ಬದುಕಲು ಹೇಗೆ ಸಾಧ್ಯ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

    ಪ್ರಕೃತಿಯಲ್ಲಿರುವ ಅನೇಕ ಜೀವಿಗಳು ವಿಶಿಷ್ಟವಾದ ಸಾಮರ್ಥ್ಯಗಳನ್ನು ಹೊಂದಿವೆ. ಅದರ ಬಗ್ಗೆ ನಮಗೆ ತಿಳಿದಾಗ ಅದಕ್ಕಿಂತ ದೊಡ್ಡ ಆಶ್ಚರ್ಯಕರ ಸಂಗತಿ ಮತ್ತೊಂದಿಲ್ಲ. ಅಂತಹ ಜೀವಿಗಳಲ್ಲಿ ಒಂದು ಜಿರಳೆ. ಯಾವುದೇ ದುರಂತ ಸಂಭವಿಸಿದರೂ ಬದುಕುಳಿಯುವ ರೀತಿಯಲ್ಲಿ ಜಿರಳೆಯನ್ನು ಪ್ರಕೃತಿ ಸೃಷ್ಟಿಸಿದೆ. ಜಿರಳೆಗಳು ವಿಷಗಳಿಗೆ ಬೇಗ ಹೊಂದಿಕೊಳ್ಳುವ ಮತ್ತು ರಾಸಾಯನಿಕಗಳಿಗೆ ಸುಲಭವಾಗಿ ಪ್ರತಿರೋಧವನ್ನು ಒಡ್ಡುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಹೆಣ್ಣು ಜಿರಳೆಗಳಂತೂ ಪಾರ್ಥೆನೋಜೆನೆಟಿಕ್ ಸಂತಾನೋತ್ಪತ್ತಿಯನ್ನು ಬಳಸಿಕೊಂಡು ಗಂಡು ಜಿರಳೆಯಿಲ್ಲದೆ, ಸಂತಾನೋತ್ಪತ್ತಿ ಮಾಡಬಹುದು.

    ಜಿರಳೆಗಳ ಕುರಿತಾದ ಅತ್ಯಂತ ಶಾಕಿಂಗ್​ ಸಂಗತಿ ಯಾವುದೆಂದರೆ, ತಲೆ ಇಲ್ಲದೆಯೂ ಅವು ಅನೇಕ ವಾರಗಳ ಕಾಲ ಬದುಕಬಲ್ಲವು. ಆದರೆ, ಬೇರೆ ಜೀವಿಗಳಲ್ಲಿ ಮುಂಡದಿಂದ ರುಂಡ ಬೇರೆಯಾದರೆ ಅಲ್ಲಿಯೇ ಜೀವ ಹೋದಂತೆ. ಆದರೆ, ಜಿರಳೆಗಳು ಮಾತ್ರ ರುಂಡವಿಲ್ಲದಿದ್ದರೂ ಬದುಕುಳಿಯುತ್ತವೆ. ಇದು ಹೇಗೆ ಸಾಧ್ಯ ಅಂದರೆ, ಜಿರಳೆಗಳಲ್ಲಿ ಮನುಷ್ಯರಂತೆ ರಕ್ತನಾಳಗಳನ್ನು ಹೊಂದಿಲ್ಲ. ಹೀಗಾಗಿ ಆಮ್ಲಜನಕದ ಪರಿಚಲನೆಗಾಗಿ ಜಿರಳೆಗಳು ರಕ್ತವನ್ನು ಅವಲಂಬಿಸುವುದಿಲ್ಲ. ಬದಲಾಗಿ ಉಸಿರಾಡಲು ತಮ್ಮ ದೇಹದ ಮೇಲೆಲ್ಲ ಇರುವ ಸ್ಪೈರಾಕಲ್ಸ್ ಎಂಬ ಸಣ್ಣ ರಂಧ್ರಗಳನ್ನು ಜಿರಳೆಗಳು ಬಳಸುತ್ತವೆ.

    ಇನ್ನು ಜಿರಳೆಗಳು ‘ಗ್ಯಾಂಗ್ಲಿಯಾ’ ಎಂಬ ಮಿನಿ ಮಿದುಳುಗಳನ್ನು ಸಹ ಹೊಂದಿವೆ. ಈ ಮಿದುಳುಗಳು ದೇಹದ ವಿವಿಧ ಭಾಗಗಳಲ್ಲಿ ಇರುತ್ತವೆ ಮತ್ತು ಆಯಾ ಭಾಗಗಳಲ್ಲಿ ನಿರ್ದಿಷ್ಟ ಕಾರ್ಯಗಳಿಗೆ ಕಾರಣವಾಗಿವೆ. ಜಿರಳೆಗಳಿಗೆ ಒಂದೇ ಮೆದುಳು ಇಲ್ಲದಿರುವುದರಿಂದ ಅಥವಾ ಮನುಷ್ಯರಂತೆ ತಲೆಯಿಂದ ಉಸಿರಾಡುವುದಿಲ್ಲವಾದ್ದರಿಂದ, ಈ ಜಿರಳೆಗಳಿಗೆ ತಲೆ ಇಲ್ಲದೆ ಬದುಕುವುದು ತುಂಬಾ ಸುಲಭ.

    ಆದಾಗ್ಯೂ, ಜಿರಳೆಗಳು ಅಂತಿಮವಾಗಿ ಹಸಿವಿನಿಂದ ಸಾಯುತ್ತವೆ. ಏಕೆಂದರೆ ಜಿರಳೆಗಳಿಗೆ ತಿನ್ನಲು ಮತ್ತು ಕುಡಿಯಲು ಬಾಯಿಯ ಅಗತ್ಯವಿರುತ್ತದೆ. ಹೀಗಾಗಿ ಹಲವಾರು ವಾರಗಳವರೆಗೆ ಮಾತ್ರ ಜಿರಳೆಗಳು ತಲೆ ಇಲ್ಲದೆಯೂ ಬದುಕಿರುತ್ತವೆ. ಆ ಬಳಿಕ ಹಸಿವಿನಿಂದ ಸಾಯುತ್ತವೆ. ಶಿರಚ್ಛೇದಿತ ತಲೆಯು ಸಹ ಚಲಿಸುವುದನ್ನು ನಿಲ್ಲಿಸುವ ಮೊದಲು ಹಲವಾರು ಗಂಟೆಗಳ ಕಾಲ ಜೀವಂತವಾಗಿ ಇರುತ್ತದೆ. (ಏಜೆನ್ಸೀಸ್​)

    ಯಾವಾಗ ವರ್ಜಿನಿಟಿ ಕಳೆದುಕೊಂಡೆ? ಮಲೈಕಾ ಕೇಳಿದ ಪ್ರಶ್ನೆಗೆ ಪುತ್ರ ಅರ್ಹಾನ್​ ಕೊಟ್ಟ ಉತ್ತರ ವೈರಲ್​

    ಆಸ್ಕರ್​​ ವಿನ್ನಿಂಗ್ ಜೈ ಹೋ ಹಾಡಿಗೆ ಮ್ಯೂಸಿಕ್​ ನೀಡಿದ್ದು ರೆಹಮಾನ್​ ಅಲ್ವಂತೆ! ಮತ್ಯಾರು? ವಿವಾದದ ಬೆನ್ನಲ್ಲೇ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts