More

    ಇಂಡಿಗೋ ವಿಮಾನದಲ್ಲಿ ಜಿರಳೆಗಳ ಹಾವಳಿ..ಬೆಚ್ಚಿಬಿದ್ದ ಪ್ರಯಾಣಿಕರು!

    ನವದೆಹಲಿ: ಸಾಮಾನ್ಯ ಜನರು ಪ್ರಯಾಣಿಸುವ ಬಸ್​, ರೈಲ್​ನಲ್ಲಿ ಜಿರಳೆಗಳ ಸಂಚಾರ ಸಾಮಾನ್ಯ. ಆದರೆ ಅಸಮಾನ್ಯ(ವಿವಿಐಪಿ)ಗಳು ಸಂಚರಿಸುವ ವಿಮಾನಗಳಲ್ಲೂ ಜಿರಳೆಗಳ ಹಿಂಡು ಆಹಾರ, ಮೈಮೇಲೆ ಓಡಾಡಿದರೆ? ಹೌದು ಇದು ಇತ್ತೀಚೆಗೆ ಇಂಡಿಗೋ ವಿಮಾನದ ಆಹಾರ ಸಂಗ್ರಹ ಸ್ಥಳದಲ್ಲಿ ಜಿರಳೆಗಳನ್ನು ಕಂಡ ಪ್ರಯಾಣಿಕರು ವೀಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಏವಿಯೇಷನ್ ಕಂಪನಿ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

    ಇದನ್ನೂ ಓದಿ: ನಮ್ಮ ಸರ್ಕಾರ ರೈತರ ಏಳಿಗೆಗಾಗಿ ಯೋಜನೆಗಳನ್ನು ರೂಪಿಸುತ್ತಿದೆ: ಪ್ರಧಾನಿ ನರೇಂದ್ರ ಮೋದಿ

    ಪ್ರಯಾಣಿಕರು ತಮ್ಮ X(ಎಕ್ಸ್​) ಖಾತೆಗಳಲ್ಲಿ ಜಿರಳೆಗಳ ದಂಡು ಇಂಡಿಗೋ ವಿಮಾನದ ತಿಂಡಿ ಸಂಗ್ರಹಿಸುವ ಜಾಗದಲ್ಲಿ ದಾಂಗುಡಿಯಿಟ್ಟಿದ್ದು, ಪ್ರಹಾಣಿಕರು ಹೌಹಾರಿದ್ದಾರೆ. ಈ ಜಿರಳೆಗಳು ಸಮೀಪದಲ್ಲೇ ಇದ್ದ ಪ್ರಯಾಣಿಕರ ಮೇಲೂ ಹರಿದಾಡಿವೆ. ಇದನ್ನು ಕಂಡು ವೀಡಿಯೋ ಮಾಡಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ, ಜಿರಳೆಗಳ ತಡೆಯಲು ಇಂಡಿಗೋ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

    ವಿಮಾನ ಪ್ರಯಾಣದ ಸಮಯದಲ್ಲಿ ಜಿರಳೆಗಳನ್ನು ಎದುರಿಸಲು ಯಾರೂ ಬಯಸುವುದಿಲ್ಲ. ವಿಮಾನದ ಆಹಾರ ಪ್ರದೇಶ ಮತ್ತು ಎಲ್ಲಿಂದರಲ್ಲಿ ನಿರ್ಭೀತಿಯಿಂದ ಸಂಚರಿಸುವುದನ್ನು ಪ್ರಯಾಣಿಕರು ಇದು ನಿಜಕ್ಕೂ ಆಘಾತಕಾರಿ ಸಂಗತಿ ಎಂದು ಪ್ರಯಾಣಿಕರು ಬರೆದುಕೊಂಡಿದ್ದಾರೆ.

    ಟ್ವೀಟರ್​ನಲ್ಲಿ ಅವರು ಹಂಚಿಕೊಂಡ ವೀಡಿಯೊ ವೈರಲ್ ಆದ ನಂತರ ಇಂಡಿಗೋ ಪ್ರತಿಕ್ರಿಯಿಸಿದೆ. ನಮ್ಮ ವಿಮಾನವೊಂದರಲ್ಲಿ ಅಶುಚಿಯಾದ ಮೂಲೆಯನ್ನು ತೋರಿಸುವ ವೀಡಿಯೊ ಸತ್ಯಕ್ಕೆ ಹತ್ತಿರವಾಗಿದೆ. “ನಮ್ಮ ಸಿಬ್ಬಂದಿ ತಕ್ಷಣವೇ ಅಗತ್ಯ ಕ್ರಮವನ್ನು ತೆಗೆದುಕೊಂಡರು. ಮುನ್ನೆಚ್ಚರಿಕೆ ಕ್ರಮವಾಗಿ, ನಾವು ತಕ್ಷಣವೇ ಸಂಪೂರ್ಣ ಫ್ಲೀಟ್ ಅನ್ನು ಸ್ವಚ್ಛಗೊಳಿಸಿದ್ದೇವೆ ಎಂದು ಹೇಳಿದೆ.

    “ಇಂಡಿಗೋ ವಿಮಾನಗಳಲ್ಲಿ ಸುರಕ್ಷಿತ ಮತ್ತು ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ನೈರ್ಮಲ್ಯ ಸುಗಮವಾಗಿರುವಂತೆ ನಿರ್ವಹಿಸುತ್ತೇವೆ. ಪ್ರಯಾಣಿಕರಿಗೆ ಉಂಟಾದ ಯಾವುದೇ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ” ಎಂದು ವಿಮಾನಯಾನ ಕಂಪನಿಯು ಸ್ಪಷ್ಟಪಡಿಸಿದೆ.

    ಕಳೆದ ವರ್ಷ ಏಪ್ರಿಲ್‌ನಲ್ಲಿ ಪ್ರಯಾಣಿಕರೊಬ್ಬರು ಊಟ ಮಾಡುವಾಗ ಜಿರಳೆ ತಮ್ಮ ಮೇಜಿನ ಮೇಲೆ ತೆವಳುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದರು.

    2022 ರ ಅಕ್ಟೋಬರ್‌ನಲ್ಲಿ ಪಾಟ್ನಾದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಜಿರಳೆ ಕಾಣಿಸಿಕೊಂಡಾಗ ಪ್ರಯಾಣಿಕರೊಬ್ಬರು ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದರು.

    ಮಂಡ್ಯದಲ್ಲಿ ಎಚ್​ಡಿಕೆನಾ ವೀಕ್​ ಮಾಡೋಕೆ ಸಜ್ಜಾಗಿದೇಯಾ ಕೈ ಪಡೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts