More

    VIDEO| ಸುರಕ್ಷತಾ ಕ್ರಮ ಬಳಸದೇ ಬರಿಗೈಯಲ್ಲಿ 690 ಅಡಿ ಎತ್ತರದ ಕಟ್ಟಡವೇರಿದ ಸಾಹಸಿಗನಿಗೆ ಬಹುಪರಾಕ್​!

    ಪ್ಯಾರಿಸ್​: ಸಾಧಿಸುವ ಛಲ ಮತ್ತು ಧೈರ್ಯವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ಒಂದು ಘಟನೆಯೇ ಸ್ಫೂರ್ತಿಯಾಗಿದೆ. ಫ್ರಾನ್ಸ್​ ಮೂಲದ ಯೂಟ್ಯೂಬರ್​ ಅಥ್ಲೆಟಿ ಲಿಯೋ ಅರ್ಬನ್​ ಪ್ಯಾರಿಸ್​ನ ಮಾಂಟ್ಪರ್ನಾಸ್ಸೆ ಗಗನಚುಂಬಿ ಕಟ್ಟಡವನ್ನು ಬರಿಗೈಯಲ್ಲಿ ಏರುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

    ಶನಿವಾರ ಈ ಸಾಧನೆ ಮಾಡಿರುವ ಲಿಯೋ, ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಕೇವಲ ಬರಿಗೈಯಲ್ಲಿ ಬರೋಬ್ಬರಿ 690 ಅಡಿ ಆಕಾಶದೆತ್ತರದ ಕಟ್ಟಡವನ್ನು ನಿರಾಯಾಸವಾಗಿ ಏರುವ ಮೂಲಕ ತನ್ನ ಸಾಮರ್ಥ್ಯವನ್ನು ನಿರೂಪಿಸಿದ್ದಾರೆ.

    ಕೇವಲ ಒಂದು ಗಂಟೆ ಅವಧಿಯೊಳಗೆ ಲಿಯೋ 58 ಅಂತಸ್ತಿನ ಕಟ್ಟಡವೇರಿದ್ದಾರೆ. ದಾರಿಹೋಕರು ಲಿಯೋ ಸಾಹಸಕ್ಕೆ ಮರುಳಾಗಿ ಕಟ್ಟಡವೇರುವ ದೃಶ್ಯವನ್ನು ಕಣ್ತುಂಬಿಕೊಂಡರು. ಇನ್ನು ಅನೇಕರು ತಮ್ಮ ಮೊಬೈಲ್​ ಕ್ಯಾಮರಾ ಕಣ್ಣಲ್ಲಿ ರೋಮಾಂಚನಾಕಾರಿ ದೃಶ್ಯವನ್ನು ಸೆರೆಹಿಡಿದು ಜಾಲತಾಣದಲ್ಲಿ ಹರಿಬಿಟ್ಟು, ಸಾಹಸಿ ಲಿಯೋರ ಧೈರ್ಯಕ್ಕೆ ಸಲಾಂ ಹೇಳಿದ್ದಾರೆ.

    ಇದನ್ನೂ ಓದಿ: ವಾರದ ಬಳಿಕ ಬಳಸದೇ ಪಾರ್ಕ್​ ಮಾಡಿದ್ದ ಕಾರಿನ ಬಾಗಿಲು ತೆರೆಯಲು ಹೋದ ಮಹಿಳೆಗೆ ಕಾದಿತ್ತು ಶಾಕ್​!

    ಲಿಯೋ ಕಟ್ಟಡ ಏರುವುದು ಇದೇ ಮೊದಲೇನಲ್ಲ. ಈ ಹಿಂದೆ ವಿಶ್ವಪ್ರಸಿದ್ದ ಗಗನಚುಂಬಿ ಐಫೆಲ್​ ಟವರ್​ ಅನ್ನು ಏರುವ ಮೂಲಕ ಲಿಯೋ ಎಲ್ಲರನ್ನು ಚಕಿತಗೊಳಿಸಿದ್ದರು. ಅಲ್ಲದೆ, ಎಂಜಿ ಮತ್ತು ಏರಿಯಾನೆ ಗಗನಚುಂಬಿ ಕಟ್ಟಡಗಳನ್ನು ಏರಿದ್ದಾರೆ.

    ಇದೀಗ 210 ಮೀಟರ್​ (690 ಅಡಿ) ಎತ್ತರ ಕಟ್ಟಡ ಏರಿರುವ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಲಿಯೋ ಶೇರ್​ ಮಾಡಿಕೊಂಡು ಸಂಭ್ರಮಿಸಿದ್ದಾರೆ. ಅಂದಹಾಗೆ ಮಾಂಟ್ಪರ್ನಾಸ್ಸೆ ಕಟ್ಟಡ ಫ್ರೆಂಚ್​ ಕ್ಯಾಪಿಟಲ್​ನ ಅತ್ಯಂತ ಎತ್ತರದ ಕಟ್ಟಡ ಎಂಬ ಹೆಸರಿಗೆ ಪಾತ್ರವಾಗಿದೆ.

     

    View this post on Instagram

     

    A post shared by Leo Urban Blacklist (@leo.urban)

    ಮಾಂಟ್ಪರ್ನಾಸ್ಸೆ ಕಟ್ಟಡ ಏರುವುದು ತುಂಬಾ ಕಷ್ಟಕರವಾಗಿತ್ತು. ಹೀಗಾಗಿ ನಾನು ಒಂದು ವಾರಗಳ ಕಾಲ ಸಾಕಷ್ಟು ತಯಾರಿಯನ್ನು ನಡೆಸಿದ್ದಾಗಿ ಲಿಯೋ ಹೇಳಿಕೊಂಡಿದ್ದಾರೆ. ಜಾಲತಾಣಗಳಲ್ಲಿ ಲಿಯೋ ಸಾಹಸಕ್ಕೆ ಸಾಕಷ್ಟು ಮೆಚ್ಚುಗೆ ಮಾತುಗಳು ವ್ಯಕ್ತವಾಗುತ್ತಿವೆ. (ಏಜೆನ್ಸೀಸ್​)

     

    View this post on Instagram

     

    A post shared by Leo Urban Blacklist (@leo.urban)

    ಹೊಸ ಮನೆ ಪ್ರವೇಶಿಸಿದ ಕುಟುಂಬಕ್ಕೆ ಮೆಟ್ಟಿಲಡಿಯಲ್ಲಿ ರಹಸ್ಯ ಕೋಣೆ ಪತ್ತೆ: ಒಳಹೊಕ್ಕವರಿಗೆ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts