More

    ಬೈ ಟೋಕಿಯೊ… ಹಾಯ್ ಪ್ಯಾರಿಸ್ ; 32ನೇ ಒಲಿಂಪಿಕ್ ಕ್ರೀಡಾಕೂಟಕ್ಕೆ ತೆರೆ

    ಟೋಕಿಯೊ: ಕೋವಿಡ್ ಆತಂಕದ ನಡುವೆಯೂ ಕಳೆದ 17 ದಿನಗಳಿಂದ ಇಡೀ ವಿಶ್ವವನ್ನೇ ತನ್ನೆಡೆಗೆ ಸೆಳೆದುಕೊಂಡಿದ್ದ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾನುವಾರ ತೆರೆಬಿದ್ದಿದೆ. ಮಹಾಮಾರಿಯ ಅಟ್ಟಹಾಸದಿಂದಾಗಿ ಒಂದು ವರ್ಷ ಮುಂದೂಡಲ್ಪಟ್ಟಿದ್ದ ಪ್ರತಿಷ್ಠಿತ ಕ್ರೀಡಾಕೂಟ ಅದ್ದೂರಿಯಾಗಿ ಕೊನೆಗೊಂಡಿತು. ಕಳೆದ ಒಂದೂವರೆ ವರ್ಷಗಳಿಂದ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕರೊನಾ ವೈರಸ್‌ಗೆ ಸೆಡ್ಡು ಹೊಡೆದಂತೆ ನಡೆದ 32ನೇ ಆವೃತ್ತಿಯ ಒಲಿಂಪಿಕ್ ಕ್ರೀಡಾಕೂಟ ಹಲವು ಹೊಸತನಗಳಿಗೆ ಸಾಕ್ಷಿಯಾಯಿತು. 17 ದಿನಗಳ ಕ್ರೀಡಾಕೂಟದ ವಿಡಿಯೋ ತುಣುಕುಗಳನ್ನು ಸಮಾರಂಭದ ವೇಳೆ ಬಿತ್ತರಿಸಲಾಯಿತು. ಜಪಾನ್‌ನ ಪ್ರಿನ್ಸ್ ಅಕಿಶಿನೊ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮುಖ್ಯಸ್ಥ ಥಾಮಸ್ ಬಾಷ್ ಮುಖ್ಯಅತಿಥಿಗಳಾಗಿ ಪಾಲ್ಗೊಂಡರು.

    ಕೋವಿಡ್‌ನಿಂದಾಗಿ ನಿರ್ಮಿಸಲಾಗಿದ್ದ ಬಯೋಬಬಲ್ ವ್ಯಾಪ್ತಿಯಲ್ಲಿ ನಡೆದ ಕ್ರೀಡಾಸ್ಪರ್ಧೆಗಳ ವಿಡಿಯೋ ತುಣುಕು ಎಲ್ಲರ ಗಮನಸೆಳೆಯಿತು. ಟೋಕಿಯೊದಲ್ಲಿ ಕಂಡ ಈ ಭರ್ಜರಿ ಯಶಸ್ಸು ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಭವ್ಯ ಭವಿಷ್ಯದ ಭರವಸೆಯ ಬೆಳಕು ಮೂಡಿಸಿದೆ. ಇನ್ನು ಮೂರೇ ವರ್ಷಗಳಲ್ಲಿ ಎದುರಾಗಲಿರುವ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಇನ್ನಷ್ಟು ಪದಕ ಬೇಟೆಯಾಡುವ ನಿರೀಕ್ಷೆಗಳೂ ಹೆಚ್ಚಾಗಿವೆ.

    ಕುಸ್ತಿಯಲ್ಲಿ ಶನಿವಾರವಷ್ಟೇ ಕಂಚಿನ ಪದಕ ಜಯಿಸಿದ್ದ ಭಜರಂಗ್ ಪೂನಿಯಾ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿದ್ದರು. ಭಾರತೀಯ ಒಲಿಂಪಿಕ್ ಸಂಸ್ಥೆಯ ಶಿಷ್ಟಾಚಾರದ ಪ್ರಕಾರ, ಸ್ವರ್ಣ ಪದಕ ವಿಜೇತ ನೀರಜ್ ಚೋಪ್ರಾ ಮುಂದಿನ ಏಷ್ಯಾಡ್ ಹಾಗೂ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಧ್ವಜಧಾರಿಯಾಗಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts