More

    ಪ್ಯಾರಿಸ್​ನಲ್ಲಿ ಸದ್ಗುರು ಜತೆ ವಿಜ್ಞಾನಿಗಳ ಸಂವಾದ; ಮಣ್ಣು ರಕ್ಷಣೆ, ಹವಾಮಾನ ಬದಲಾವಣೆ ಬಗ್ಗೆ ಚರ್ಚೆ

    ಪ್ಯಾರಿಸ್​: ಮಣ್ಣು ರಕ್ಷಣೆ ಸಲುವಾಗಿ ಜಗತ್ತಿನಾದ್ಯಂತ ಜಾಗೃತಿ ಅಭಿಯಾನ ಹಮ್ಮಿಕೊಂಡಿರುವ ಈಶ ಫೌಂಡೇಷನ್​ನ ಸದ್ಗುರು ಸದ್ಯ ಪ್ಯಾರಿಸ್​ನಲ್ಲಿದ್ದು, ಇಲ್ಲಿ ಮಣ್ಣು ರಕ್ಷಣೆ ಮತ್ತು ಹವಾಮಾನ ಬದಲಾವಣೆ ಸಂಬಂಧ ವಿಜ್ಞಾನಿಗಳ ಜತೆ ಸಂವಾದ ನಡೆಸಿ ಚರ್ಚಿಸಿದರು.

    ಫ್ರೆಂಚ್ ಸರ್ಕಾರ 2015ರಲ್ಲಿ ಮಣ್ಣು ರಕ್ಷಣೆ ಹಾಗೂ ಆ ಮೂಲಕ ಹವಾಮಾನ ಬದಲಾವಣೆ ಮತ್ತು ಆಹಾರ ಕೊರತೆ ನಿವಾರಿಸಲು ಕೈಗೊಂಡಿದ್ದ 4 ಪರ್​ 1000 ಇನಿಷಿಯೇಟಿವ್ ಕುರಿತು ಚರ್ಚಿಸಿದರು. ಮಣ್ಣು ರಕ್ಷಣೆಯ ಮಹತ್ವದ ವಿಷಯದ ಕುರಿತಾಗಿ ಮಣ್ಣು ರಕ್ಷಣೆ ಅಭಿಯಾನ ಮತ್ತು 4 ಪರ್ 1000 ಇನಿಷಿಯೇಟಿವ್ ಮಧ್ಯೆ ಒಪ್ಪಂದವನ್ನೂ ಇದೇ ಸಂದರ್ಭದಲ್ಲಿ ಮಾಡಿಕೊಳ್ಳಲಾಯಿತು.

    ಫ್ರಾನ್ಸ್​ನಲ್ಲಿನ ಭಾರತೀಯ ರಾಯಭಾರಿ ಜಾವೆದ್ ಅಶ್ರಫ್​ ಅವರು ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿ, ಸಾಮಾಜಿಕ ಜಾಗೃತಿಯ ಮಹತ್ವವನ್ನು ತಿಳಿಸಿದರು. 4 ಪರ್​ 1000 ಇನಿಷಿಯೇಟಿವ್​​ನ ಎಕ್ಸಿಕ್ಯೂಟಿವ್ ಸೆಕ್ರೆಟರಿ ಡಾ.ಪಾಲ್​ ಲೂ ಮಾತನಾಡಿ, ಭೂಮಿ ಮೇಲಿನ ಎಲ್ಲ ಜೀವಕ್ಕೂ ಮಣ್ಣೇ ಮುಖ್ಯ. ಮಣ್ಣು ಉತ್ಪಾದನೆ ಆಗಲು ಸಾವಿರಾರು ವರ್ಷಗಳೇ ಬೇಕು, ಅಂಥ ಮಣ್ಣು ಕೆಲವೇ ವರ್ಷಗಳಲ್ಲಿ ನಾಶ ಆಗುವಂತಾಗಬಾರದು ಎಂದರು.

    ಮಣ್ಣು ರಕ್ಷಣೆಯ ತುರ್ತಿನ ಕುರಿತು ಮಾತು, ಭಾಷಣ, ಅಭಿಯಾನದ ಸಮಯವೆಲ್ಲ ಮೀರಿ ಹೋಗಿದೆ. ಈಗೇನಿದ್ದರೂ ತಕ್ಷಣ ಕಾರ್ಯಪ್ರವೃತ್ತರಾಗಬೇಕಾದ್ದು ಅಗತ್ಯ ಎಂದು ಸದ್ಗುರು ತಿಳಿಸಿದರು. ಅಲ್ಲದೆ, ಎಲ್ಲ ದೇಶಗಳಲ್ಲೂ ಇದಕ್ಕೆ ಸಂಬಂಧಿಸಿದಂತೆ ಸೂಕ್ತ ನೀತಿ ಜಾರಿ ಆಗದಿದ್ದರೆ ನಾವು ಇದನ್ನು ಸಾಧಿಸಲು ಅಸಾಧ್ಯವಾದ ಸ್ಥಿತಿಗೆ ಬಂದು ತಲುಪಿದ್ದೇವೆ ಎಂದು ಸದ್ಗುರು ಪರಿಸ್ಥಿತಿ ಸೂಕ್ಷ್ಮತೆಯನ್ನು ತಿಳಿಸಿದರು.

    ಸದ್ಗುರು ಮಣ್ಣು ರಕ್ಷಣೆ ಸಲುವಾಗಿ ನೂರು ದಿನಗಳೊಳಗೆ 27 ರಾಷ್ಟ್ರಗಳಲ್ಲಿ ಏಕಾಂಗಿಯಾಗಿ ಬೈಕ್​ನಲ್ಲಿ ಪ್ರಯಾಣಿಸಿ 30 ಸಾವಿರ ಕಿ.ಮೀ. ಸಂಚರಿಸಿ ಜಾಗೃತಿ ಮೂಡಿಸುವ ಅಭಿಯಾನ ಮಾ. 21ರಂದು ಲಂಡನ್​ನಲ್ಲಿ ಆರಂಭವಾಗಿದ್ದು, ಇದೀಗ ಅವರು ಪ್ಯಾರಿಸ್​ನಲ್ಲಿದ್ದಾರೆ.

    ಪ್ಯಾರಿಸ್​ನಲ್ಲಿ ಸದ್ಗುರು ಜತೆ ವಿಜ್ಞಾನಿಗಳ ಸಂವಾದ; ಮಣ್ಣು ರಕ್ಷಣೆ, ಹವಾಮಾನ ಬದಲಾವಣೆ ಬಗ್ಗೆ ಚರ್ಚೆ

    ಅಪ್ಪನಿಗೆ 31 ವರ್ಷ ಜೈಲು, ಅದರ ಬೆನ್ನಿಗೆ ಮಗನಿಗೂ ಭಯೋತ್ಪಾದಕ ಪಟ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts