ಕೊಲ್ಕತಾ : ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು, ಅಧಿಕಾರ ಕಳೆದುಕೊಂಡ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವರ್ತಿಸಿದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಟೀಕಿಸಿದ್ದಾರೆ. ಬ್ಯಾನರ್ಜಿ ಮತ್ತು ಟಿಎಂಸಿ ಕಾರ್ಯಕರ್ತರು ನಿನ್ನೆ ನಂದೀಗ್ರಾಮದಲ್ಲಿ ನಡೆಸಿದ ಪ್ರದರ್ಶನವನ್ನು ಉಲ್ಲೇಖಿಸಿ ಘೋಷ್ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
“ಸೋಲು ಅನುಭವಿಸಿದ ಮೇಲೆ ಅವರು ಈ ರೀತಿಯ ಕೆಲಸಗಳನ್ನು ಮಾಡುತ್ತಾರೆಂಬ ನಿರೀಕ್ಷೆ ಇತ್ತು. ಅವರು (ಮಮತಾ) ಡೊನಾಲ್ಡ್ ಟ್ರಂಪ್ ಮಾಡಿದ್ದರಲ್ಲ, ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ಟ್ರಂಪ್ ರೀತಿಯಲ್ಲಿ ಮಮತಾ ಒಳಗೂ ಪ್ರಜಾಪ್ರಭುತ್ವದ ಮೌಲ್ಯಗಳಿಲ್ಲ” ಎಂದು ದಿಲೀಪ್ ಘೋಷ್ ಹೇಳಿದರು.
ಇದನ್ನೂ ಓದಿ: ಬಿಜೆಪಿ ಶಾಸಕನ ಜೀಪಿನಲ್ಲಿ ಇವಿಎಂ ಪತ್ತೆ: ಚುನಾವಣೆಯನ್ನೇ ಕದಿಯುವ ಯತ್ನ ಎಂದು ಕಾಂಗ್ರೆಸ್ ವ್ಯಂಗ್ಯ!
“ಸೋಲನ್ನು ಸ್ವೀಕರಿಸುವುದು ಕಷ್ಟ, ಆದರೆ ಅವರು ಭವಿಷ್ಯವನ್ನು ಅರ್ಥ ಮಾಡಿಕೊಂಡಿದ್ದಾರೆ. ಅದಕ್ಕಾಗೇ ಆಕೆ ನಿನ್ನೆ ಸಮಸ್ಯೆಗಳನ್ನು ಸೃಷ್ಟಿಸಲು ಪ್ರಯತ್ನಿಸಿದ್ದು. ಮತಗಟ್ಟೆಯೊಂದರ ಒಳಗೆ ಎರಡು ಗಂಟೆಗಳ ಕಾಲ ಮಮತಾ ಕುಳಿತಿದ್ದರು. ಇದು ನಿಯಮಬಾಹಿರ. ಚುನಾವಣೆಯ ಟ್ರೆಂಡ್ ಆಗಲೇ ನಿರ್ಧಾರವಾಗಿಬಿಟ್ಟಿದೆ” ಎಂದರು. (ಏಜೆನ್ಸೀಸ್)
VIDEO| ಎರಡು ಬೆರಳಲ್ಲಿ 234 ಬುಗುರಿ ತಿರುಗಿಸಿ ಚುನಾವಣಾ ಪ್ರಚಾರ!
ಕರೊನಾ ಕಟ್ಟೆಚ್ಚರದಲ್ಲಿ ಕುಂಭ ಮೇಳ : ಹರಿದ್ವಾರದಲ್ಲಿ ಇಂದಿನಿಂದ ಆರಂಭ
ಈ ಅಪರೂಪದ ತರಕಾರಿಯ ಬೆಲೆ ಕೇಳಿದರೆ ತಲೆ ಸುತ್ತುವುದು ಗ್ಯಾರಂಟಿ!