More

    ಪಶ್ಚಿಮ ಬಂಗಾಳದಲ್ಲಿ ಮತ್ತೆ ದೀದಿಯದ್ದೇ ದರ್ಬಾರ್​! ಆದರೆ 3ರಿಂದ 115ಕ್ಕೇರಿದ ಬಿಜೆಪಿ ಬಲ!

    ನವದೆಹಲಿ: ಪಶ್ಚಿಮ ಬಂಗಾಳ ಸೇರಿ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಮೇ 2ಕ್ಕೆ ಹೊರಬೀಳಲಿದೆ. ಅದಕ್ಕೂ ಮೊದಲು ಎಕ್ಸಿಟ್​ ಪೋಲ್​ ಹೊರಬಿದ್ದಿದ್ದು, ಅದರಲ್ಲಿ ಪಶ್ಚಿಮ ಬಂಗಾಳ ಟಿಎಂಸಿಯ ದೀದಿ ಪಾಲಾಗಿದೆ.

    ಟೈಮ್ಸ್​ ನೌ ಸೀ ವೋಟರ್ ಸಮೀಕ್ಷೆ 292 ಕ್ಷೇತ್ರಗಳ ಪೈಕಿ ಟಿಎಂಸಿ 158 ಸೀಟುಗಳನ್ನು ತನ್ನದಾಗಿಸಿಕೊಂಡರೆ ಬಿಜೆಪಿ 115 ಸ್ಥಾನ ಗಳಿಸಲಿದೆ. ಈ ಹಿಂದಿನ ಚುನಾವಣೆಯಲ್ಲಿ ಕೇವಲ 3 ಕ್ಷೇತ್ರದಲ್ಲಿ ಗೆದ್ದಿದ್ದ ಬಿಜೆಪಿ 115ಕ್ಕೆ ಏರಲಿದೆ. ಸಿಎನ್​ಎಕ್ಸ್ ರಿಪಬ್ಲಿಕ್​ ಪ್ರಕಾರ 143 ಸ್ಥಾನಗಳು ಬಿಜೆಪಿಯದಾದರೆ, ಟಿಎಂಸಿ 133 ಸ್ಥಾನ ಗಳಿಸಲಿದೆ. ಸಿಪಿಐ 16 ಸ್ಥಾನ ಪಡೆದುಕೊಳ್ಳಲಿದೆ.

    ಪಿ ಎಂಎಆರ್​ಕ್ಯೂ ಎಕ್ಸಿಟ್​ ಪೋಲ್​ನಲ್ಲಿ 158 ಸ್ಥಾನ ಟಿಎಂಸಿಗಿದ್ದರೆ, 120 ಸ್ಥಾನ ಬಿಜೆಪಿಗಿದೆ, ಇನ್ನುಳಿದ 14 ಸ್ಥಾನ ಸಿಪಿಐ ಪಾಲಾಗಲಿದೆ. ಇಟಿಸಿ ರಿಸರ್ಚ್ ಹೇಳುವ ಪ್ರಕಾರ 169 ಸ್ಥಾನ ಟಿಎಂಸಿ, 11 ಸ್ಥಾನ ಬಿಜೆಪಿ ಮತ್ತು 13 ಸ್ಥಾನ ಸಿಪಿಐಗೆ ಸಿಗಲಿದೆ. ಎಲ್ಲ ಒಟ್ಟಾರೆಯಾಗಿ ನೋಡಿದರೆ, ಟಿಎಂಸಿ ಮೊದಲ ಸ್ಥಾನ ತೆಗೆದುಕೊಂಡು ಸರ್ಕಾರ ರಚಿಸಿದರೆ, ಬಿಜೆಪಿ ಎರಡನೇ ಸ್ಥಾನದಲ್ಲಿರಲಿದೆ. ಸಿಪಿಐ, ಕಾಂಗ್ರೆಸ್​ ಹಾಗೂ ಎಡ ಪಂಥೀಯ ಪಕ್ಷಗಳ ಮೈತ್ರಿ ಮೂರನೇ ಸ್ಥಾನದಲ್ಲಿರಲಿವೆ. (ಏಜೆನ್ಸೀಸ್)

    ಪಂಚ ರಾಜ್ಯ ಚುನಾವಣೆ: ಯಾವ ರಾಜ್ಯದಲ್ಲಿ ಯಾರು ಗೆಲ್ಲಬಹುದು? ಎಕ್ಸಿಟ್ ಪೋಲ್​ ಏನೆನ್ನುತ್ತೆ?

    ಹೆರಿಗೆಗೆ ಒಂದು ವಾರವಿರುವಾಗ ಕರೊನಾ ದೃಢವಾಯ್ತು! ಕೋವಿಡ್ ಕೊಟ್ಟ ನೋವನ್ನು ಹಂಚಿಕೊಂಡ ಬಿಗ್​ಬಾಸ್​ ಸ್ಪರ್ಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts