ಲಾಡು ಪ್ರಸಾದದ ಜತೆಗೆ 2 ಲಕ್ಷ ರೂಪಾಯಿ ಭಕ್ತನ ಪಾಲು: ಮಾದಪ್ಪನ ಬೆಟ್ಟದಲ್ಲಿ ಘಟನೆ

1 Min Read
ಲಾಡು ಪ್ರಸಾದದ ಜತೆಗೆ 2 ಲಕ್ಷ ರೂಪಾಯಿ ಭಕ್ತನ ಪಾಲು: ಮಾದಪ್ಪನ ಬೆಟ್ಟದಲ್ಲಿ ಘಟನೆ

ಚಾಮರಾಜನಗರ: ಸಿಬ್ಬಂದಿಯ ಕಣ್ತಪ್ಪಿನಿಂದಾಗಿ ಪ್ರಸಾದದ ಜೊತೆಗೆ 2 ಲಕ್ಷ ರೂಪಾಯಿ ಭಕ್ತನ ಪಾಲಾಗಿರುವ ಘಟನೆ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದಲ್ಲಿ ನಡೆದಿದೆ.

ವಿಶೇಷ ದರ್ಶನಕ್ಕೆ ಟಿಕೆಟ್ ನೀಡಲು ಸಿಬ್ಬಂದಿ ಕುಳಿತಿದ್ದ. ಈ ವೇಳೆ ಭಕ್ತನೊಬ್ಬನಿಗೆ ಲಾಡು ಜತೆಗೆ ಹಣದ ಚೀಲವನ್ನು ನೀಡಿದ್ದಾನೆ. ಲಾಡು ಪ್ರಸಾದ ಇಟ್ಟಿದ್ದ ಬ್ಯಾಗ್ ಸಮೀಪವೇ ಹಣದ ಚೀಲವನ್ನು ಇಡಲಾಗಿತ್ತು. ಅದರ ಬಗ್ಗೆ ಗೊತ್ತಿಲ್ಲದೆ ಪ್ರಸಾದದ ಪ್ಯಾಕೆಟ್​ ಜತೆಗೆ ಹಣದ ಚೀಲವನ್ನು ಸಿಬ್ಬಂದಿ ನೀಡಿದ್ದಾನೆ.

ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಜನದಟ್ಟಣೆ ಹೆಚ್ಚಾಗಿದ್ದರಿಂದ ಗಾಬರಿಯಲ್ಲಿ ದೇವಸ್ಥಾನದ ಸಿಬ್ಬಂದಿ ಯಾಮಾರಿದ್ದಾರೆ. ಈ ವಿಚಾರ ತಿಳಿದು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಮಲೆಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. (ದಿಗ್ವಿಜಯ ನ್ಯೂಸ್​)

ಚಿಕನ್ ಅಂಗಡಿ ತೆರೆದಿದ್ದೇ ಪ್ರಾಣಕ್ಕೆ ಮುಳುವು? ಪ್ರವೀಣ್​ಗೆ ಮೊದಲೇ ಸಿಕ್ಕಿತ್ತಾ ಸಾವಿನ ಸುಳಿವು? ಸಹೋದರ ನೀಡಿದರು ಸ್ಫೋಟಕ ಹೇಳಿಕೆ

VIDEO| ವಿದ್ಯಾರ್ಥಿಯನ್ನು ದುರ್ಬಳಕೆ ಮಾಡಿಕೊಂಡ ಶಿಕ್ಷಕಿ: ತರಗತಿಯೊಳಗೆ ನಡೆಯಿತು ದುರ್ವರ್ತನೆ

ಕಟ್ಟಿಗೆ ತರಲು ಕಾಡಿಗೆ ಹೋದ ಮಹಿಳೆಗೆ ಸಿಕ್ಕಿತು ವಜ್ರ! ಆಕೆಯ ಖುಷಿಗೆ ಪಾರವೇ ಇಲ್ಲ…

See also  ವರನಿಗೆ ಹಾರ ಹಾಕುವಾಗ ಸುದ್ದಿಯೊಂದು ಕೇಳಿ ಕುಣಿದು ಕುಣಿದು ಹೋಗೇ ಬಿಟ್ಟಳು! ಇದ್ದವರು ಕಕ್ಕಾಬಿಕ್ಕಿ
Share This Article