More

    ಕಟ್ಟಿಗೆ ತರಲು ಕಾಡಿಗೆ ಹೋದ ಮಹಿಳೆಗೆ ಸಿಕ್ಕಿತು ವಜ್ರ! ಆಕೆಯ ಖುಷಿಗೆ ಪಾರವೇ ಇಲ್ಲ…

    ಪನ್ನಾ(ಮಧ್ಯಪ್ರದೇಶ): ಅದೃಷ್ಟ ಯಾರಿಗೆ, ಎಲ್ಲಿ, ಯಾವಾಗ ಬರುತ್ತದೆ ಎಂದು ಹೇಳಲಾಗದು. ಮಧ್ಯಪ್ರದೇಶದ ಪನ್ನಾದ ಅರಣ್ಯ ಪ್ರದೇಶದಲ್ಲಿ ಉರುವಲು ಸಂಗ್ರಹಿಸಲು ಹೋದ ಮಹಿಳೆಗೆ 4.39 ಕ್ಯಾರಟ್ ವಜ್ರ ದೊರೆತಿದೆ.

    ಹರಾಜಿನಲ್ಲಿ ಈ ವಜ್ರಕ್ಕೆ ಸುಮಾರು 20 ಲಕ್ಷ ರೂ. ದೊರೆಯಬಹುದೆಂದು ಅಂದಾಜಿಸಲಾಗಿದೆ. ಪುರುಷೋತ್ತಮಪುರದ ನಿವಾಸಿ ಗೆಂದಾ ಬಾಯಿ ಉರುವಲು ಸಂಗ್ರಹಿಸಲು ಬುಧವಾರ ಕಾಡಿಗೆ ತೆರಳಿದ್ದರು. ಅಲ್ಲಿ ಅವರಿಗೆ ಈ ಅಮೂಲ್ಯವಾದ ವಜ್ರ ದೊರೆತಿದೆ.

    ನಂತರ ಮಹಿಳೆಯು ಡೈಮಂಡ್ ಕಚೇರಿಯಲ್ಲಿ ವಜ್ರವನ್ನು ಡಿಪಾಸಿಟ್ ಮಾಡಿದರು ಎಂದು ವಜ್ರ ನಿರೀಕ್ಷಕ ಅನುಪಮ್ ಸಿಂಗ್ ತಿಳಿಸಿದ್ದಾರೆ. ಕಚ್ಚಾ ವಜ್ರವನ್ನು ಹರಾಜು ಹಾಕಿ ಅದರಿಂದ ಬಂದ ಹಣದಲ್ಲಿ ಸರ್ಕಾರದ ರಾಯಧನ ಮತ್ತು ತೆರಿಗೆ ಕಡಿತ ಮಾಡಿಕೊಂಡು ಉಳಿದ ಹಣವನ್ನು ಮಹಿಳೆಗೆ ನೀಡಲಾಗುವುದು ಎಂದು ಸಿಂಗ್ ಹೇಳಿದ್ದಾರೆ.

    ಗೆಂದಾಬಾಯಿಯು ಕಾಡಿನಲ್ಲಿ ಕಟ್ಟಿಗೆ ಸಂಗ್ರಹಿಸಿ, ಅದನ್ನು ಮಾರಿ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆಕೆಗೆ ನಾಲ್ವರು ಗಂಡುಮಕ್ಕಳು, ಇಬ್ಬರು ಪುತ್ರಿಯರಿದ್ದಾರೆ. ಹರಾಜಿನಿಂದ ಬಂದ ಹಣದಿಂದ ಮನೆ ನಿರ್ವಿುಸಿಕೊಂಡು, ಹೆಣ್ಣು ಮಕ್ಕಳ ಮದುವೆ ಮಾಡುವುದಾಗಿ ಗೆಂದಾ ಬಾಯಿ ಹೇಳಿದ್ದಾರೆ. ಮಧ್ಯಪ್ರದೇಶದ ಪನ್ನಾ ಜಿಲ್ಲೆಯು ವಜ್ರದ ಗಣಿಗಳಿಗೆ ಹೆಸರಾಗಿದೆ.

    ರಾಜ್ಯದಲ್ಲಿ ಮತ್ತೆ ಮಳೆ ಬಿರುಸು, ನಾಳೆ 9 ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts