More

    ಹಳಿ ದಾಟುವಾಗ ರೈಲು ಡಿಕ್ಕಿಯಾಗಿ ಯುವತಿ ದುರ್ಮರಣ: ವಿದ್ಯಾರ್ಥಿನಿಯ ಪ್ರಾಣ ಕಸಿದ ಮೊಬೈಲ್​!

    ಚೆನ್ನೈ: ರೈಲು ಹಳಿ ದಾಟುವಾಗ, ರಸ್ತೆಯಲ್ಲಿ ನಡೆದು ಹೋಗುವಾಗ ಮತ್ತು ಡ್ರೈವಿಂಗ್​ ಮಾಡುವಾಗ ಯಾವುದೇ ಕಾರಣಕ್ಕೂ ಮೊಬೈಲ್​ ಫೋನ್​ ಬಳಕೆ ಮಾಡಬಾರದು. ಫೋನಿನಲ್ಲಿ ಮಗ್ನರಾಗಿ ಅಪಘಾತದಲ್ಲಿ ಪ್ರಾಣವನ್ನೇ ಕಳೆದುಕೊಂಡ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದ್ದರೂ ಕೆಲ ಜನರು ಈಗಲೂ ಅದೇ ತಪ್ಪು ಮಾಡುತ್ತಿರುವುದು ನೋಡುತ್ತಿದ್ದೇವೆ. ಆದರೆ, ಈ ರೀತಿ ಮಾಡುವುದು ನಮ್ಮ ಜೀವಕ್ಕೆ ಒಳ್ಳೆಯದಲ್ಲ ಎಂಬುದನ್ನು ನೆನಪಿನಲ್ಲಿಡಿಬೇಕು. ಇಲ್ಲೊಂದು ಯುವತಿ ಇದೇ ಕಾರಣಕ್ಕೆ ತನ್ನ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಂಡಿದ್ದಾಳೆ.

    ಹೌದು, ರೈಲ್ವೆ ಕ್ರಾಸಿಂಗ್​ ದಾಟುವಾಗ ರೈಲು ಡಿಕ್ಕಿಯಾಗಿ ಮಲಯಾಳಿ ವಿದ್ಯಾರ್ಥಿನಿ ಒಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ಚೆನ್ನೈನ ಇರುಂಬುಲಿಯೂರ್​ನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ನಿಖಿತಾ ಕೆ. ಸಿಬಿ (19) ಎಂದು ಗುರುತಿಸಲಾಗಿದೆ. ಈಕೆ ಕೇರಳದ ಕೊಲ್ಲಂ ಜಿಲ್ಲೆಯ ಪುತ್ತೋರ್ ನಿವಾಸಿ.

    ಇದನ್ನೂ ಓದಿ: ಬಳಕೆದಾರರಿಗೆ ಬಲ: ಸಾಮಾಜಿಕ ಮಾಧ್ಯಮ ಕುಂದುಕೊರತೆ; ಮೇಲ್ಮನವಿ ಸಮಿತಿ ಕಾರ್ಯಾರಂಭ

    ನಿಖಿತಾ ತಮಿಳುನಾಡಿನ ತಾಂಬರಂನಲ್ಲಿರುವ ಎಂಸಿಸಿ ಕಾಲೇಜಿನಲ್ಲಿ ಮೊದಲ ವರ್ಷದ ಬಿಎಸ್ಸಿ ಮನೋವಿಜ್ಞಾನ ವಿದ್ಯಾರ್ಥಿನಿಯಾಗಿದ್ದಳು. ಇರುಂಬುಲಿಯೂರ್​ನಲ್ಲಿ ಹಾಸ್ಟೆಲ್​ನಲ್ಲಿ ಉಳಿದುಕೊಂಡಿದ್ದಳು. ಇರುಂಬುಲಿಯೂರ್​ನ ಹಳೆ ರೈಲ್ವೆ ಗೇಟ್​ ದಾಟುವಾಗ ರೈಲು ಡಿಕ್ಕಿಯಾಗಿ ಮೃತಪಟ್ಟಿದ್ದಾಳೆ.

    ಪ್ರಾಥಮಿಕ ತನಿಖಾ ವರದಿಗಳ ಪ್ರಕಾರ ನಿಖಿತಾ ರೈಲ್ವೆ ಕ್ರಾಸಿಂಗ್​ ಮಾಡುವಾಗ ತನ್ನ ಫೋನ್​ನಲ್ಲಿ ಬಿಜಿಯಾಗಿದ್ದರಿಂದ ರೈಲನ್ನು ಗಮನಿಸಲಿಲ್ಲ ಎಂದು ತಿಳಿದುಬಂದಿದೆ. ಚೆನ್ನೈ-ಗುರುವಾಯೂರು ಎಕ್ಸ್​ಪ್ರೆಸ್​ ರೈಲು ನಿಖಿತಾಗೆ ಡಿಕ್ಕಿ ಹೊಡೆದುಕೊಂಡಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

    ಆನ್​ಲೈನ್​ನಲ್ಲಿ ಮಕ್ಕಳ ಶೋಷಣೆ: ಮಧ್ಯಪ್ರದೇಶದಲ್ಲಿ 4000 ಆರೋಪಿಗಳ ಬಂಧನಕ್ಕೆ ತಯಾರಿ

    ವಿಸ್ಮಯಕಾರಿ ಆನಿಮೆ!; ಮಕ್ಕಳ ನೆಚ್ಚಿನ ವರ್ಣರಂಜಿತ ಪ್ರಪಂಚ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts