More

    ಬಳಕೆದಾರರಿಗೆ ಬಲ: ಸಾಮಾಜಿಕ ಮಾಧ್ಯಮ ಕುಂದುಕೊರತೆ; ಮೇಲ್ಮನವಿ ಸಮಿತಿ ಕಾರ್ಯಾರಂಭ

    ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿನ ವಿಷಯಗಳಿಗೆ ಸಂಬಂಧಿಸಿದಂತೆ ಬಳಕೆದಾರರ ಕುಂದುಕೊರತೆಗಳನ್ನು ಇತ್ಯರ್ಥಗೊಳಿಸಲು ಕೇಂದ್ರ ಸರ್ಕಾರ ರಚಿಸಿರುವ ಕುಂದುಕೊರತೆ ಮೇಲ್ಮನವಿ ಸಮಿತಿ ವ್ಯವಸ್ಥೆಯು ಕಾರ್ಯಾರಂಭಗೊಂಡಿದೆ. ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಈ ಸಮಿತಿ ಕಾರ್ಯನಿರ್ವಹಣೆಗೆ ಚಾಲನೆ ನೀಡುವುದರೊಂದಿಗೆ ಇನ್ನು ಮುಂದೆ ಇಂಟರ್​ನೆಟ್ ಹಾಗೂ ಸಾಮಾಜಿಕ ಮಾಧ್ಯಮಗಳು ಮುಕ್ತ, ಸುರಕ್ಷಿತ, ತಾರತಮ್ಯರಹಿತ ಮತ್ತು ವಿಶ್ವಾಸಾರ್ಹವಾಗಿ ಇರುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಬಳಕೆದಾರರಿಗೆ ಸೂಕ್ತ ವೇದಿಕೆಯೊಂದು ದೊರೆಯುವಂತಾಗಿದೆ. ಸಂವಿಧಾನದಲ್ಲಿ ಪ್ರಜೆಗಳಿಗೆ ನೀಡಲಾಗಿರುವ ಹಕ್ಕುಗಳನ್ನು ಮಾನ್ಯ ಮಾಡುವ ರೀತಿಯಲ್ಲಿ ಸಾಮಾಜಿಕ ಮಾಧ್ಯಮ ಕಂಪನಿಗಳು ಕಾರ್ಯನಿರ್ವಹಿಸುವುದನ್ನು ಪರಿಶೀಲಿಸಲು ಉನ್ನತ ಕಣ್ಗಾವಲು ವ್ಯವಸ್ಥೆ ಕಾರ್ಯರೂಪಕ್ಕೆ ಬಂದಂತಾಗಿದೆ.

    ಸಾಮಾಜಿಕ ಮಾಧ್ಯಮ ವೇದಿಕೆಗಳ ಕುಂದುಕೊರತೆ ಅಧಿಕಾರಿಗಳು ನೀಡುವ ತೀರ್ಪಗಳ ವಿರುದ್ಧ ವ್ಯಕ್ತಿಗಳು ಸಲ್ಲಿಸುವ ಮೇಲ್ಮನವಿಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರವು ಮೇಲ್ಮನವಿ ಸಮಿತಿಯನ್ನು ಸ್ಥಾಪಿಸಲು ಈ ಹಿಂದೆಯೇ ಕ್ರಮ ಕೈಗೊಂಡಿತ್ತು. ಬಳಕೆದಾರರು ಎತ್ತಿತೋರಿಸುವ ಕುಂದುಕೊರತೆಗಳನ್ನು ಸೂಕ್ತ ರೀತಿಯಲ್ಲಿ ಪರಿಹರಿಸುವ ನಿಟ್ಟಿನಲ್ಲಿ ಮೇಲ್ಮನವಿ ಕಾರ್ಯವಿಧಾನ ಜಾರಿಗೆ ತರುವ ಕುರಿತು ಸಲಹೆಗಳನ್ನು ನೀಡಲು ಬೃಹತ್ ತಂತ್ರಜ್ಞಾನ ವೇದಿಕೆಗಳಿಗೆ ಅವಕಾಶವನ್ನು ಸರ್ಕಾರವು ಕಳೆದ ಜೂನ್​ನಲ್ಲಿ ಕಲ್ಪಿಸಿಕೊಟ್ಟಿತ್ತು. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 2021ರ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ಕುಂದುಕೊರತೆ ಮೇಲ್ಮನವಿ ಸಮಿತಿ ಪೋರ್ಟಲ್​ಗೆ ಚಾಲನೆ ನೀಡಿದ್ದು, ಇದರಲ್ಲಿ ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿನ ವಿಷಯಗಳ ಕುರಿತು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಸಲ್ಲಿಸಿದ ದೂರುಗಳ ಬಗ್ಗೆ ತೃಪ್ತಿಯಿಲ್ಲದ ಬಳಕೆದಾರರು ಸಲ್ಲಿಸುವ ಮೇಲ್ಮನವಿಗಳನ್ನು ಸರ್ಕಾರವು ರಚಿಸಿರುವ ಮೂರು ಸಮಿತಿಗಳ ಪೈಕಿ ಒಂದು ಆಲಿಸಲಿದೆ.

    ಇದನ್ನೂ ಓದಿ: ಯುವತಿಯನ್ನು 16 ಸಲ ಚುಚ್ಚಿ ಚುಚ್ಚಿ ಕೊಂದ ಹುಚ್ಚುಪ್ರೇಮಿ!; ಎದೆ, ಹೊಟ್ಟೆ, ಕುತ್ತಿಗೆಗೆ ಇರಿದು ಕೊಲೆ

    ಮಾಹಿತಿ ತಂತ್ರಜ್ಞಾನದ ಆವಿಷ್ಕಾರಗಳ ಪರಿಣಾಮವಾಗಿ ಕಳೆದೆರಡು ದಶಕಗಳಲ್ಲಿ ಸಾಮಾಜಿಕ ಮಾಧ್ಯಮಗಳು ಜಗತ್ತಿನ ಜನಪ್ರಿಯ ಹಾಗೂ ಪರಿಣಾಮಕಾರಿ ಮಾಧ್ಯಮವಾಗಿ ಬೆಳವಣಿಗೆ ಸಾಧಿಸಿದೆ. ಭಾರತದಲ್ಲಿ ಟ್ವಿಟರ್, ಫೇಸ್​ಬುಕ್, ವಾಟ್ಸ್​ಆಪ್, ಇನ್​ಸ್ಟಾಗ್ರಾಂ ಮೊದಲಾದ ಸಾಮಾಜಿಕ ಮಾಧ್ಯಮಗಳನ್ನು ಬಳಸುವವರ ಸಂಖ್ಯೆ ಅಗಾಧ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಷ್ಟೊಂದು ಬಳಕೆದಾರರು ರವಾನಿಸುವ ಸಂದೇಶ, ವ್ಯಕ್ತಪಡಿಸುವ ಅಭಿಪ್ರಾಯಗಳ ಮೇಲೆ ಕಣ್ಗಾವಲಿಡುವಂತಹ ಸಮರ್ಥ ವ್ಯವಸ್ಥೆ ರೂಪಿಸುವುದು ಕಷ್ಟಕರ ಸಂಗತಿ. ಆದರೆ, ಈಗ ಬಳಕೆದಾರರೇ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ವ್ಯವಸ್ಥೆ ರೂಪುಗೊಂಡಿರುವುದು ಒಂದಿಷ್ಟು ಸಮಸ್ಯೆಗಳಿಗೆ ಪರಿಹಾರ ಒದಗಿಸಬಹುದಾಗಿದೆ. ಫೇಸ್​ಬುಕ್, ಟ್ವಿಟರ್​ನಂತಹ ವೇದಿಕೆಗಳು ಕೇವಲ ಖಾಸಗಿ ಮಧ್ಯವರ್ತಿಗಳಾಗಿದ್ದು ತಮಗೆ ಬೇಕಾದ ರೀತಿಯಲ್ಲಿ ನಿಯಮಗಳನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸಬಹುದು ಎಂಬ ಧೋರಣೆಗೆ ಪ್ರಸ್ತುತ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಮೇಲ್ಮನವಿ ಸಮಿತಿ ರಚನೆ ಕಡಿವಾಣ ಹಾಕಲಿದ್ದು, ವಾಕ್ ಸ್ವಾತಂತ್ರ್ಯ ಸೇರಿದಂತೆ ಸಂವಿಧಾನದಲ್ಲಿ ನಾಗರಿಕರಿಗೆ ಒದಗಿಸಲಾಗಿರುವ ಹಕ್ಕುಗಳನ್ನು ಮಾನ್ಯ ಮಾಡಿ ಸಂವಿಧಾನದ ಅನುಸಾರ ಕಾರ್ಯನಿರ್ವಹಿಸುವಂತೆ ಮಾಡಲಿ ಎಂಬುದು ಅಪೇಕ್ಷೆ.

    ರಾಜ್ಯದ ಜನತೆಗೆ ರೈಲ್ವೇಯಿಂದ ಸಿಹಿಸುದ್ದಿ: ಇಲ್ಲೆಲ್ಲ ನಿಲ್ಲಲಿವೆ ಈ ರೈಲುಗಳು!

    ಸಿಎಂ ಜತೆ ಸರ್ಕಾರಿ ನೌಕರರ ಸಂಘದ ಸಭೆ ಮುಕ್ತಾಯ: ಬಗೆಹರಿಯದ ಗೊಂದಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts