More

    ಹಾಡಿನ ಮೂಲಕ ಜೈಲಿನ ಕೈದಿಗಳಿಗೆ ಧೈರ್ಯ ತುಂಬಿದ ‘ಬಾಂಡ್ ರವಿ’ …

    ಬೆಂಗಳೂರು: ಪ್ರಶಾಂತ್​ ನೀಲ್​ ಅಭಿನಯದ ‘ಸಲಾರ್​’ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡುವುದಕ್ಕೆ ‘ಪ್ರೀಮಿಯರ್​ ಪದ್ಮಿನಿ’ ಖ್ಯಾತಿಯ ಪ್ರಮೋದ್​ ಆಯ್ಕೆಯಾಗಿದ್ದಾರೆ. ಒಂದಿಷ್ಟು ಕನ್ನಡ ಚಿತ್ರಗಳಲ್ಲಿ ನಟಿಸುತ್ತಿರುವ ಪ್ರಮೋದ್​ಗೆ ಇದು ಮೊದಲ ಪ್ಯಾನ್​ ಇಂಡಿಯಾ ಚಿತ್ರ. ಈಗಾಗಲೇ ಅವರ ಲುಕ್​ ಟೆಸ್ಟ್​ ಸಹ ಮುಗಿದಿದ್ದು, ಸದ್ಯದಲ್ಲೇ ಅವರು ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.

    ಇದನ್ನೂ ಓದಿ: ಅಪ್ಪನ ವಯಸ್ಸಿನ ನಟನ ಜತೆಗೆ ಸೋನಾಕ್ಷಿ ಸಿನ್ಹಾ ನಟನೆ? ಆ ಹೀರೋ ಯಾರು ಗೊತ್ತಾ?

    ಈ ಮಧ್ಯೆ, ಪ್ರಮೋದ್​ ಅಭಿನಯದ ಇನ್ನೊಂದು ಚಿತ್ರ ‘ಬಾಂಡ್​ ರವಿ’ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ವರ್ಷದ ಏಪ್ರಿಲ್​ನಲ್ಲಿ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ಈಗಾಗಲೇ ಚಿತ್ರೀಕರಣ ಮುಗಿದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಈ ಮಧ್ಯೆ, ಚಿತ್ರದ ಒಂದು ಜೋಶ್​ ಹಾಡು ಬಿಡುಗಡೆಯಾಗಿದೆ.

    ‘ಮಜಾ ಮಜಾ’ ಎಂಬ ಈ ಹಾಡು ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಬಿಡುಗಡೆಯಾಗಿದೆ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಮೂಡಿ ಬಂದಿರುವ ‘ಮಜಾ ಮಜಾ ಮಾಡು ಬಾ’ ಹಾಡಿಗೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಧ್ವನಿಯಾಗಿದ್ದು, ಮನೋಮೂರ್ತಿ ಸಂಗೀತ ಸಂಯೋಜಿಸಿದ್ದಾರೆ. ಜೋಶ್ ಜೊತೆಗೆ ನೀತಿ ಇರುವ ಈ ಹಾಡನ್ನು ಜೈಲಿನಲ್ಲಿ ಚಿತ್ರೀಕರಿಸಲಾಗಿದ್ದು, ಜೈಲಿನಲ್ಲಿರುವ ಅಪರಾಧಿಗಳಿಗೆ ಧೈರ್ಯ ತುಂಬುವ ಹಾಡು ಇದಾಗಲಿದೆ. ಈ ಹಾಡಿಗೆ ಪ್ರಮೋದ್​ ಮತ್ತು ಇತರರು ಹೆಜ್ಜೆ ಹಾಕಿದ್ದಾರೆ.

    ‘ಬಾಂಡ್ ರವಿ’ ಆಕ್ಷನ್ ಲವ್​​ಸ್ಟೋರಿ ಚಿತ್ರವಾಗಿದ್ದು, ಈ ಚಿತ್ರವನ್ನು ಪ್ರಜ್ವಲ್ ಎಸ್.ಪಿ ನಿರ್ದೇಶನ ಮಾಡಿದ್ದಾರೆ. ಲೈಫ್ ಲೈನ್ ಫಿಲಂ ಬ್ಯಾನರ್​ನಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ನರಸಿಂಹಮೂರ್ತಿ ಬಂಡವಾಳ ಹೂಡಿದ್ದಾರೆ.

    ಇದನ್ನೂ ಓದಿ: ಗ್ಯಾಂಗ್​ ಲೀಡರ್​ ಆದ ವಿನಯ್​ ರಾಜಕುಮಾರ್​; ‘ಪೆಪೆ’ ಮುಕ್ತಾಯ

    ‘ಬಾಂಡ್​ ರವಿ’ ಚಿತ್ರದಲ್ಲಿ ಪ್ರಮೋದ್​ಗೆ ನಾಯಕಿಯಾಗಿ ಕಾಜಲ್​ ಕುಂದರ್​ ನಟಿಸಿದ್ದು, ಮಿಕ್ಕಂತೆ ರವಿ ಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್, ಗೋವಿಂದೇ ಗೌಡ.‌ ಹಂಸ, ಮಿಮಿಕ್ರಿ ಗೋಪಿ, ಪವನ್ ಮುಂತಾದವರು ನಟಿಸಿದ್ದಾರೆ. ಡಿಸೆಂಬರ್​ನಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ಸದ್ಯದಲ್ಲೇ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.

    ಧ್ರುವ ಸರ್ಜಾ ಹೊಸ ಚಿತ್ರಕ್ಕೆ ಮಾಲಾಶ್ರೀ ಮಗಳು ರಾಧಾನಾ ನಾಯಕಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts