More

    ‘ಸಯ್ಯಾ … ಸಯ್ಯಾ …’ ಅಂತಿದ್ದಾರೆ ಮನು

    ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಮನುರಂಜನ್ ರವಿಚಂದ್ರನ್ ಅಭಿನಯದ ‘ಪ್ರಾರಂಭ’ ಇಷ್ಟರಲ್ಲಾಗಲೇ ಬಿಡುಗಡೆಯಾಗಿ ಹಳತಾಗಿರಬೇಕಿತ್ತು. ಮಾರ್ಚ್ ಕೊನೆಯ ವಾರದಲ್ಲೇ ಚಿತ್ರ ಬಿಡುಗಡೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಆದರೆ, ಲಾಕ್‌ಡೌನ್ ಆಗಿ ಚಿತ್ರತಂಡದ ಯೋಚನೆಗಳೆಲ್ಲಾ ಬುಡಮೇಲಾಗಿದೆ.

    ಇದನ್ನೂ ಓದಿ: ‘ಅರ್ಜುನ್​ ರೆಡ್ಡಿ’ ಚಿತ್ರಕ್ಕೆ ಮೊದಲು ಈ ಹೀರೋನನ್ನು ಅಪ್ರೋಚ್​ ಮಾಡಿದ್ರು ನಿರ್ದೇಶಕ

    ಹೀಗಿರುವಾಗಲೇ ಚಿತ್ರತಂಡದವರು ಬುಧವಾರ ‘ಸಯ್ಯಾ ಸಯ್ಯಾ …’ ಎಂಬ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ಲಿರಿಕಲ್ ವಿಡಿಯೋ, ಯೂಟ್ಯೂಬ್‌ನ ಆನಂದ್ ಆಡಿಯೋ ಚಾನಲ್‌ನಲ್ಲಿ ಬಿಡುಗಡೆಯಾಗಿದೆ.ಚಂದನವನದ ಸದ್ಯದ ಸೆನ್ಸೇಶನ್ ಆಗಿರುವ ಸಂಜಿತ್ ಹೆಗ್ಡೆ ಈ ಹಾಡನ್ನು ಹಾಡಿದ್ದು, ಅವರ ಜತೆಗೆ ಅಶ್ವಿನಿ ಜೋಷಿ ಧ್ವನಿಗೂಡಿಸಿದ್ದಾರೆ.

    ‘ಪ್ರಾರಂಭ’, ಮನುರಂಜನ್ ಅಭಿನಯದ ಮೂರನೆಯ ಚಿತ್ರ. ‘ಸಾಹೇಬ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಮನು, ಆ ನಂತರ ‘ಬೃಹಸ್ಪತಿ’ ಚಿತ್ರದಲ್ಲಿ ನಟಿಸಿದ್ದರು. ಈ ಮಧ್ಯೆ, ಇನ್ನೊಂದಿಷ್ಟು ಚಿತ್ರಗಳಲ್ಲಿ ಅವರ ಹೆಸರು ಕೇಳಿ ಬಂದಿತ್ತಾದರೂ, ಅವರು ಅಂತಿಮವಾಗಿ ಆಯ್ಕೆ ಮಾಡಿಕೊಂಡಿದ್ದು ‘ಪ್ರಾರಂಭ’ ಚಿತ್ರವನ್ನು.

    ಇದನ್ನೂ ಓದಿ: ಅಲ್ಲು ಅರ್ಜುನ್ ಡ್ಯಾನ್ಸ್‌ಗೆ ಬಾಲಿವುಡ್ ಮಂದಿ ಹೀಗಂತಾರೆ …

    ಈ ಚಿತ್ರವನ್ನು ಮನು ಕಲ್ಯಾಡಿ ಬರೆದು ನಿರ್ದೇಶನ ಮಾಡಿದ್ದಾರೆ. ಇನ್ನು ಅವರ ಸಹೋದರ ಜಗದೀಶ್ ಕಲ್ಯಾಡಿ ಚಿತ್ರವನ್ನು ನಿರ್ಮಿಸಿದ್ದಾರೆ. ಪ್ರಜ್ವಲ್ ಪೈ ಸಂಗೀತ ಈ ಚಿತ್ರಕ್ಕಿದೆ.

    PHOTOS| ಹುಟ್ಟುಹಬ್ಬ ಸಂಭ್ರಮದಲ್ಲಿ ಸನ್ನಿ ಲಿಯೋನ್: ಮಾಜಿ ನೀಲಿ ತಾರೆಯ ಕುತೂಹಲಕಾರಿ ಸಂಗತಿಗಳಿವು!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts