More

    ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನ; ನೈರೋಬಿಯಲ್ಲಿ ಭರ್ಜರಿ ಪ್ರಾರಂಭ!

    ಅಮೆರಿಕದಲ್ಲಿರುವ ನಾವಿಕ (ನಾವು ವಿಶ್ವ ಕನ್ನಡಿಗರು) ಸಂಸ್ಥೆ ಹಾಗೂ ಕೀನ್ಯಾ ದೇಶದ ಕನ್ನಡ ಸಾಂಸ್ಕೃತಿಕ ಸಂಘ ಜಂಟಿಯಾಗಿ ಆಯೋಜಿಸುತ್ತಿರುವ 6ನೇ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನವು ಆಫ್ರಿಕಾ ಖಂಡದ ಕೀನ್ಯಾ ದೇಶದ ರಾಜಧಾನಿಯಾದ ನೈರೋಬಿಯ ಜೈನ್ ಭವನದಲ್ಲಿ ಇಂದು ಸೆಪ್ಟೆಂಬರ್ 09 ಶುಕ್ರವಾರ ಸಂಜೆ ಪ್ರಾರಂಭವಾಯಿತು.

    ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನ; ನೈರೋಬಿಯಲ್ಲಿ ಭರ್ಜರಿ ಪ್ರಾರಂಭ! 

    ಇಂದು ಸಂಜೆ ಮನೋಮೂರ್ತಿಯವರ ಸಾರಥ್ಯದಲ್ಲಿ ನಡೆಯುತ್ತಿರುವ ಮ್ಯೂಸಿಕಲ್ ನೈಟ್ ನಲ್ಲಿ ಪ್ರಖ್ಯಾತ ಗಾಯಕರಾದ ಹೇಮಂತ್ ಕುಮಾರ್, ಚಿನ್ಮಯ್ ಅತ್ರೆಯಸ್, ಮಾನಸ ಹೊಳ್ಳ, ಅನುರಾಧ ಭಟ್ ಮತ್ತು ಚೇತನ್ ಸೊಸ್ಕಾ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇದೇ ಮೊಟ್ಟ ಮೊದಲ ಬಾರಿಗೆ ಆಫ್ರಿಕಾ ಖಂಡದಲ್ಲಿ ನಾವಿಕೋತ್ಸವ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಕೋವಿಡ್ ಕಾರಣದಿಂದ ಕಳೆದ ಎರಡು ನಾವಿಕ ಸಮ್ಮೇಳನಗಳನ್ನು ವರ್ಚುಯಲ್ ಆಗಿ ಮಾಡಲಾಗಿತ್ತು. ಮೂರು ವರ್ಷಗಳ ನಂತರ ಕನ್ನಡಾಭಿಮಾನಿಗಳೆಲ್ಲಾ ಒಂದೇ ಸೂರಿನಡಿ ಸೇರಿ ಬೃಹತ್ ಸಮಾವೇಶವನ್ನು ಮಾಡುತ್ತಿರುವುದು ರೋಮಾಂಚನ ತರಿಸುತ್ತಿದೆ.

    ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನ; ನೈರೋಬಿಯಲ್ಲಿ ಭರ್ಜರಿ ಪ್ರಾರಂಭ!

    ವಿನೋದ- ವಿಹಾರ- ವಿನಿಮಯ” ಎಂಬ ಘೋಷಣೆಯೊಂದಿಗೆ ನಡೆಯಲಿರುವ ಎರಡು ದಿವಸಗಳ ಈ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಂಗೀತ, ನೃತ್ಯ, ನಾಟಕ, ಕನ್ನಡ ಕಲಿ, ಯಕ್ಷಗಾನ ಹೀಗೆ ಅನೇಕ ಕಾರ್ಯಕ್ರಮಗಳ ರಸದೌತಣವನ್ನು ಉಣಬಡಿಸಲಾಗುತ್ತಿದೆ.

    ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನ; ನೈರೋಬಿಯಲ್ಲಿ ಭರ್ಜರಿ ಪ್ರಾರಂಭ!

    “ಹೊರದೇಶಗಳಿಂದ ಬರುವ ಅತಿಥಿಗಳಿಗಾಗಿ ಸಪ್ಟೆಂಬರ್ 5 ರಿಂದ 9ನೇ ತಾರೀಖಿನವರೆಗೆ ಆಫ್ರಿಕನ್ ಸಫಾರಿ ಟೂರ್ ಪ್ಯಾಕೇಜ್ ವ್ಯವಸ್ಥೆ ಮಾಡಲಾಗಿತ್ತು. ಈ ಆಫ್ರಿಕನ್ ಸಫಾರಿಯಲ್ಲಿ ಮಸೈಮಾರ, ಒಲ್ಪಜೇಟ, ನೈವಾಷ ಸರೋವರ ಪ್ರದೇಶಗಳಲ್ಲಿರುವ ಸಾವಿರಾರು ಕಾಡು ಪ್ರಾಣಿಗಳನ್ನು ಅತಿ ಸಮೀಪದಿಂದ ನೋಡುವ ಸುವರ್ಣ ಅವಕಾಶವನ್ನು ಒದಗಿಸಿ ಕೊಟ್ಟಿತು.

     

    ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನ; ನೈರೋಬಿಯಲ್ಲಿ ಭರ್ಜರಿ ಪ್ರಾರಂಭ!

    ಈ ಸಮ್ಮೇಳನವನ್ನು ನೈರೋಬಿಯ ಜೈನ್ ಭವನದಲ್ಲಿ ನಡೆಸಲಾಗುತ್ತಿದ್ದು ವಿವಿಧ ದೇಶಗಳಿಂದ ಆಗಮಿಸುತ್ತಿರುವ ಕನ್ನಡಿಗರಿಗೆ ವಸತಿ, ಊಟ, ವಿಹಾರ, ಮನೋರಂಜನೆ ಸೇರಿದಂತೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ನಾವಿಕೋತ್ಸವ ಸಮ್ಮೇಳನದಲ್ಲಿ ನಾಳೆ ಶನಿವಾರ ವುಮೆನ್ಸ್ ಫೋರಮ್, ಎಜುಕೇಶನ ಫೋರಮ್, ಯೂಥ್ ಫೋರಮ್, ಮೆಡಿಕಲ್ ಫೋರಮ್ ಮುಂತಾದವುಗಳನ್ನು ಆಯೋಜಿಸಲಾಗಿದೆ. ಜೊತೆಗೆ ನಮ್ಮ ಕರ್ನಾಟಕದ ಚರಿತ್ರೆ, ರಂಪರೆ, ತಿಹಾಸ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಅಮೋಘ ರವಣಿಗೆಯನ್ನು ನಾಳೆ ಬೆಳಿಗ್ಗೆ ಆಯೋಜಿಸಲಾಗಿದೆ.

     ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನ; ನೈರೋಬಿಯಲ್ಲಿ ಭರ್ಜರಿ ಪ್ರಾರಂಭ!

    ಸಿಹಿ ಕಹಿ ಚಂದ್ರು ಅವರ ನೇತೃತ್ವದಲ್ಲಿ ಬೆಂಗಳೂರಿನಿಂದ ಬರುತ್ತಿರುವ ಅಡುಗೆಭಟ್ಟರಿಂದ “ಬೊಂಬಾಟ್ ಭೋಜನ” ನಡೆಯುತ್ತಿದೆ. ಈ ನಾವೀಕೋತ್ಸವದಲ್ಲಿ ನಡೆದಾಡುವ ವಯೋಲಿನಿಸ್ಟ್ ಅನೀಶ್, ಕುದ್ರೋಳಿ ಗಣೇಶ ಅವರಿಂದ ಮ್ಯಾಜಿಕ್ ಶೋ, ರಂಗಧ್ವನಿ ತಂಡದಿಂದ ನಾಟಕ ಜೊತೆಗೆ ಕೀನ್ಯಾ ಮತ್ತು ಅಮೇರಿಕಾ ಕನ್ನಡಿಗರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಾಳೆ ನಡೆಯಲಿವೆ.

    ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನ; ನೈರೋಬಿಯಲ್ಲಿ ಭರ್ಜರಿ ಪ್ರಾರಂಭ!ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನ; ನೈರೋಬಿಯಲ್ಲಿ ಭರ್ಜರಿ ಪ್ರಾರಂಭ!

    ನಿಮ್ಮ ಪುಂಗಿ ನಮ್ಹತ್ರ ನಡೆಯಲ್ಲ; ಗಣೇಶ ಮಂಡಳಿಗಳಿಗೆ ಇನ್ಸ್‌ಪೆಕ್ಟರ್ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts