More

    ತಿಂಗಳಲ್ಲಿ ಇಥೆನಾಲ್ ಉತ್ಪಾದನೆ ಪ್ರಾರಂಭ

    ನಿಪ್ಪಾಣಿ, ಬೆಳಗಾವಿ: ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಮುಂದಿನ ತಿಂಗಳಿಂದ 1.5 ಲಕ್ಷ ಕೆಎಲ್‌ಪಿಡಿ ಸಾಮರ್ಥ್ಯದೊಂದಿಗೆ ಇಥೆನಾಲ್ ಉತ್ಪಾದನೆ ಪ್ರಾರಂಭವಾಗಲಿದೆ ಎಂದು ಕಾರ್ಖಾನೆಯ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ತಿಳಿಸಿದರು.

    ಇಲ್ಲಿನ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ 36ನೇ ಕಬ್ಬು ನುರಿಸುವ ಹಂಗಾಮಿನ ಅಗ್ನಿಪ್ರದೀಪನ ಕಾರ್ಯಕ್ರಮಕ್ಕೆ ಚಾಲನೆ ನೀಡಿ
    ಮಾತನಾಡಿದ ಅವರು, ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಅವರ ಮಾರ್ಗದರ್ಶನದಿಂದ ಕಾರ್ಖಾನೆ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆ ಎಂದರು.

    ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮನ್ನು ಅ.8 ರಿಂದ ಪ್ರಾರಂಭಿಸಲಾಗುವುದು. ಪ್ರತಿ ನಿತ್ಯ 8,500 ಮೆ. ಟನ್ ಕಬ್ಬು ನುರಿಸುವ ಸಾಮರ್ಥ್ಯ ಕಾರ್ಖಾನೆಗಿದೆ ಎಂದು ತಿಳಿಸಿದರು.

    ನಿಡಸೋಸಿಯ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಸಂಚಾಲಕ
    ಆರ್.ವೈ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಕಿರಣ ನಿಕಾಡೆ ದಂಪತಿ ಪೂಜೆ ನೆರವೇರಿಸಿದರು.

    ಆಶಾಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಸಂಚಾಲಕ ಅಪ್ಪಾಸಾಹೇಬ ಜೊಲ್ಲೆ, ಅವಿನಾಶ ಪಾಟೀಲ, ವಿಶ್ವನಾಥ ಕಮತೆ, ರಾಮಗೊಂಡ ಪಾಟೀಲ, ಆರ್.ವೈ.ಪಾಟೀಲ, ಸಮಿತ ಸಾಸನೆ, ಸುಕುಮಾರ ಪಾಟೀಲ, ಮಾಳಪ್ಪ ಪಿಸೂತ್ರೆ, ರಾಜಾರಾಮ ಖೋತ, ಪ್ರತಾಪ ಮೇತ್ರಾಣಿ, ಕಲ್ಲಪ್ಪ ನಾಯಿಕ, ಉಜ್ವಲಾ ಶಿಂಧೆ, ಮನಿಷಾ ರಾಂಗೋಳೆ, ಜಯಕುಮಾರ ಖೋತ, ಅಮಿತ ರಣದಿವೆ, ಅಧೀಕ್ಷಕ ರಾಜೇಂದ್ರ ಖರಾಬೆ ಇತರರಿದ್ದರು.

    ವ್ಯವಸ್ಥಾಪಕ ನಿರ್ದೇಶಕ ಶಿವು ಕುಲಕರ್ಣಿ ಸ್ವಾಗತಿಸಿದರು. ಇಂಜಿನಿಯರ್ ನವೀನ ಬಾಡಕರ ನಿರೂಪಿಸಿದರು. ಉಪಕಾರ್ಯಾಧ್ಯಕ್ಷ ಮಲಗೊಂಡ ಪಾಟೀಲ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts